ಕೊಕ್ಕಡ ಶ್ರೀ ಅನಂತಪದ್ಮನಾಭ ಶಾಸ್ತ್ರಿ


ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

                               ಕೊಕ್ಕಡ ಶ್ರೀ ಅನಂತಪದ್ಮನಾಭ ಶಾಸ್ತ್ರಿ 

ಕೊಕ್ಕಡದ ಶ್ರೀಮತಿ ಕಾತ್ಯಾಯಿನಿ ಮತ್ತು ಶ್ರೀ ವೆಂಕಟರಮಣ ಕೆದಿಲಾಯರ ಮಗನಾಗಿ ೧೧-೩-೧೯೨೭ ರಂದು ಜನಿಸಿದ ಶ್ರೀ ಶಾಸ್ತ್ರಿಗಳಿಗೀಗ ೮೭ರ ಹರೆಯ. ಸ್ವಾತಂತ್ರ್ಯ ಹೋರಾಟದ ಚಿತ್ರಣಗಳನ್ನು ಕಣ್ತುಂಬ ತುಂಬಿಕೊಳ್ಳುತ್ತಾ ಅಂದಿನ ಹೋರಾಟಗಾರರ , ಸಾಮಾಜಿಕ ಚಳುವಳಿಕಾರರ ಆದರ್ಶಗಳನ್ನು ಮೈಗೂಡಿಸಿಕೊಂಡು ಗಾಂಧಿ ಸದ್ರುಶ ಬದುಕನ್ನು ಸವೆಸುತ್ತಿರುವವರು . ಹುಟೂಇನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಇವರ ಮುಂದಿನ ಶಿಕ್ಷಣ ಎಲ್ಲವೂ ನಡೆದದ್ದು ಸಂಸ್ಕ್ರುತಾಭ್ಯಾಸದಲ್ಲಿ. ಪುತ್ತೂರಿನ ಶ್ರೀ ಶ್ರೀನಿವಾಸ ಶಸ್ತ್ರಿಗಳಲ್ಲಿ ಅರಂಭವಾದ ಸಂಸ್ಕ್ರುತ ಶಿಕ್ಷಣ ಮುಂದುವರೆದು ೧೯೪೩ರಲ್ಲಿ ಪ್ರವೇಶ ಪರೀಕ್ಷೆ ೧೯೪೪ ರಿಂದ ೧೯೪೮ರ ವರೆಗೆ ಕಾರ್ಕಳದಲ್ಲಿ ಅಭ್ಯಾಸ ಮಾಡಿ ಶಿರೋಮಣಿ ಪದವಿಯನ್ನು, ಅನಂತರ ಕನ್ನಡ ವಿದ್ವತ್ ಪದವಿಯನ್ನು ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಪಡೆದುಕೊಂಡರು. ತರುವಾಯ ಮದ್ರಾಸಿನ ಹಿಂದಿ ಪ್ರಚಾರ ಸಭಾದ ಮೂಲಕ ಹಿಂದಿ ಪ್ರವೀಣ ಪದವಿಯನ್ನು ಪಡೆದುಕೊಂಡರು. ವೇದ ಅದ್ಯಯನದಲ್ಲಿ ವಿಶೇಷ ಪರಿಣತಿ ಹೊಂದಿರುವ ಇವರು ಋಗ್ವೇದ ಪಾರಂಗತರು. ಆ ಮೂಲಕ ವೇದ ಮೂರ್ತಿ ಎನಿಸಿಕೊಂಡರು.

೧೯೫೦-೧೯೫೬ ವರೆಗೆ ಉಜಿರೆಯ ಶ್ರೀ ಸಿದ್ದವನದ ಗುರುಕುಲದಲ್ಲಿ ಶಿಕ್ಷಕರಾಗಿದ್ದರು ೧೯೫೪-೫೬ ಉಜಿರೆಯ ಧ.ಮ.ಶಾಲೆಯಲ್ಲಿ ಅದ್ಯಪಕರಾಗಿದರು. ತದನಂತರ ಸರಕಾರಿ ನೇಮಕಾತಿ ಹೊಂದಿ ಕೊಡಗಿನಲ್ಲಿ ಸರಕಾರಿ ಪ್ರೌಡ ಶಾಲೆಯಲ್ಲಿ ೧೩ ವರ್ಷದ ಕರ್ತವ್ಯದೊಂದಿಗೆ ೧೯೬೯ ರಿಂದ ಮುಲ್ಕಿಯ ಸರಕಾರಿ ಪದವಿಪುರ್ವ ಕಾಲೆಜಿನಲ್ಲಿ ಶಿಕ್ಷಕರಾಗಿ ನಿವೃತ್ತಿಯವರೆಗೆ ಸೇವೆಸಲ್ಲಿಸಿ ೧೯೮೨ರಲ್ಲಿ ನಿವೃತ್ತಿ ಹೊಂದಿರುತ್ತಾರೆ .ಅನಂತರ ಕಾಲದಲ್ಲಿಯೂ ಸದಾ ಕ್ರಿಯಾಶೀಲ ರಾಗಿರುವ ಶ್ರೀಯುತರು ನಿರಂತರವಾಗಿ ವೇದ ವಿದ್ಯೆಯನ್ನು ಗುರುಕುಲ ಮಾದರಿಯಲ್ಲಿ ತಮ್ಮ ಮನೆಯಲ್ಲೇ ನುರಾರು ಮಂದಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಎಲೆಮರೆಯ ಕಾಯಿಯಂತೆ ಪ್ರಚಾರ ಬಯಸದೆ ಇಂದಿಗೂ ಕ್ರಿಯಾಶೀಲವಾಗಿ ಸ್ಪಂದಿಸುವ,ಬಯಸಿ ಬಂದವರಿಗೆ ಇಲ್ಲವೆನ್ನದೆ ಸಂಸ್ಕ್ರುತ , ವೇದ ಜ್ನ್ಯಾನವನ್ನು ನಿರಂತರ ನೀಡುತ್ತಾ ಬಂದಿರುವರು.ಇವರಿಗೆ ಬೆಳ್ತಂಗಡಿ ತಾಲೂಕಿನ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಶ ಗೌರವ ಅಹವಾಗಿಯೇ ಸಂದಿದೆ.