ಕೊಂಕಣ ಕಪಿಲಾ (ಗೋವಿನ ತಳಿ)
ಕೊಂಕಣ ಕಪಿಲಾ ಭಾರತದ ಕೊಂಕಣ ಪ್ರಾಂತ್ಯದ ಹಸುವಿನ ತಳಿ.[೧] ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಕೊಂಕಣದ ಪ್ರದೇಶವು ಇವುಗಳ ಮೂಲಸ್ಥಾನವಾಗಿದೆ.
ಕೊಂಕಣ ಕಪಿಲಾ | |
---|---|
ತಳಿಯ ಹೆಸರು | ಕೊಂಕಣ ಕಪಿಲಾ |
ಮೂಲ | ಕೊಂಕಣ ಪ್ರಾಂತ್ಯ |
ವಿಭಾಗ | ಕೆಲಸಗಾರ, ಸಣ್ಣ-ಮಧ್ಯಮ ಗಾತ್ರ |
ಬಣ್ಣ | ವಿವಿಧ |
ಮುಖ | ನೇರ ಉದ್ದ ಮುಖ |
ಕೊಂಬು | ಸಣ್ಣ, ಮೇಲ್ಮುಖ |
ದೇಹಲಕ್ಷಣಗಳು
ಬದಲಾಯಿಸಿಇವುಗಳು ಬೇರೆ ಬೇರೆ ಬಣ್ಣಗಳನ್ನ ಹೊಂದಿದ್ದು ಮುಖ್ಯವಾಗಿ ಕೆಂಪುಕಂದು ಅಥವಾ ಕೆಂಪುಕಪ್ಪು, ಬಿಳಿ/ಬೂದು ಹಾಗೂ ಮಿಶ್ರಬಣ್ಣಗಳಲ್ಲಿರುತ್ತವೆ ಮತ್ತು ಕೆಲವು ಕಂದು ಬಣ್ಣ ಅಥವಾ ನಸುಗೆಂಪುಮಿಶ್ರಿತ ಕಂದುಬಣ್ಣದಲ್ಲಿರುತ್ತವೆ. ಈ ಹಸುಗಳು ಸಣ್ಣಗಾತ್ರದಿಂದ ಮಧ್ಯಮಗಾತ್ರದ ದೇಹದ್ದಾಗಿರುತ್ತವೆ. ಮುಖವು ನೇರವಾಗಿರುತ್ತದೆ. ಸಣ್ಣಗಾತ್ರದಿಂದ ಮಧ್ಯಮಗಾತ್ರದ ಡುಬ್ಬ ಮತ್ತು ಗೋಮಾಳೆ ಹೊಂದಿರುತ್ತವೆ. ಸಾಮಾನ್ಯವಾಗಿ ನೇರವಾದ ಮತ್ತು ಸಣ್ಣ ಗಾತ್ರದ ಕೊಂಬುಗಳಿದ್ದು ಮೇಲ್ಮುಖವಾಗಿ ಮತ್ತು ಕೊಂಚ ಹಿಂಭಾಗಕ್ಕೆ ಬಾಗಿಕೊಂಡಿದ್ದು ಚೂಪಾಗಿರುತ್ತದೆ.
ಬಳಕೆಗಳು
ಬದಲಾಯಿಸಿಇವುಗಳ ಮುಖ್ಯವಾಗಿ ಕೆಲಸಗಾರ ತಳಿಯಾಗಿದ್ದು ಪರ್ವತ ಪ್ರದೇಶ ಹಾಗೂ ಉಷ್ಟತೇವಾಂಶವುಳ್ಳ ವಾತಾವರಣಕ್ಕೆ ಹೊಂದಿಕೊಂಡಿರುವಂತದ್ದಾಗಿವೆ. ಹಾಲಿನ ಉತ್ಪಾದನೆ ಹೆಚ್ಚು ಇರುವುದಿಲ್ಲ. (ದಿನಕ್ಕೆ ಸುಮಾರು ೨.೨೫ ಕೆ.ಜಿ)