ಕೈಮೀರ
ಕೈಮೀರ ಗ್ರೀಕ್ ಪುರಾಣಗಳಲ್ಲಿ ಉಲ್ಲೇಖಿತವಾಗಿರುವ ಒಂದು ವಿಚಿತ್ರ ಕಾಲ್ಪನಿಕ ಹೆಣ್ಣು ಪ್ರಾಣಿ; ಸಿಂಹದ ತಲೆ, ಆಡಿನ ದೇಹ, ಹಾವಿನ ಬಾಲ ಮುಂತಾಗಿ ವಿಭಿನ್ನ ಪ್ರಾಣಿಗಳ ದೇಹಭಾಗಗಳನ್ನು ಒಟ್ಟಾಗಿಸಿ ಹೊಸೆದಿರುವ ಒಂದು ವಿಚಿತ್ರ ರೂಪವುಳ್ಳದ್ದು[೧] . ಇದು ನಿಃಶ್ವಸಿಸುವಾಗ ಬೆಂಕಿಯ ಜ್ವಾಲೆಯನ್ನೇ ಉಗುಳುತ್ತಿತ್ತಂತೆ. ಈ ಪ್ರಾಣಿ ಏಷ್ಯಮೈನರಿನ ಪ್ರಾಚೀನ ವಿಭಾಗಗಳಾದ ಲಿಶಿಯ ಹಾಗೂ ಕೇರಿಯಗಳನ್ನು ಧ್ವಂಸ ಮಾಡಿತೆಂದೂ ಗ್ರೀಕ್ ವೀರನಾದ ಬೆಲೆರೊಫಾನ್ ಇದನ್ನು ಸಂಹರಿಸಿದನೆಂದೂ ಕತೆ ಮುಂದುವರಿಯುತ್ತದೆ. ಮಧ್ಯ ಇಟಲಿಯ ಅರೇತ್ಸೊ ಎಂಬಲ್ಲಿನ ಕಂಚಿನ ಕೈಮೀರ ಪ್ರತಿಮೆಗೆ ಸಿಂಹದ ತಲೆ ಮತ್ತು ದೇಹ ಇವೆ; ಅದರ ಬೆನ್ನಿನ ಭಾಗದಲ್ಲಿ ಆಡಿನ ತಲೆಯೂ ಉಂಟು. ಈ ಪ್ರತಿಮೆ 5ನೆಯ ಶತಮಾನದಲ್ಲಿ ರಚಿತವಾದದ್ದೆಂದು ನಂಬಿಕೆ. ಕೈಮೀರ ಎಂಬ ಶಬ್ದವನ್ನು ಶಿಲ್ಪಕಲೆಯಲ್ಲಿ ಅಸಮಂಜಸ ಹಾಗೂ ವಿಕಟಚಿತ್ರಗಳನ್ನು ಸೂಚಿಸಲು ಬಳಸುವುದಲ್ಲದೆ ಊಹಾಪ್ರಪಂಚದ ಅಸಾಂಗತ್ಯಗಳನ್ನು ಸೂಚಿಸಲು ಸಹ ಉಪಯೋಗಿಸುವುದುಂಟು.
ಉಲ್ಲೇಖಗಳು
ಬದಲಾಯಿಸಿ- ↑ Peck, "Chimaera".
ಬಾಹ್ಯ ಸಂಪರ್ಕಗಳು
ಬದಲಾಯಿಸಿವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: