ಕೈಗಾರಿಕಾಕ್ರಾಂತಿ

ಯಂತ್ರಯುಗ ಮತ್ತು ಔದ್ಯೋಗಿಕ ಕ್ರಾಂತಿ:

ಉಗಿಎಂಜಿನ್: ೧೭೮೧ರಲ್ಲಿ-ಜೇಮ್ಸ ವ್ಯಾಟ್ ರಿಂದ ಸುಧಾರಿತ ಉಗಿಯಂತ್ರ ನಿರ್ಮಾಣವಾಯಿತು. ಅದಕ್ಕೊಂದು ಪ್ರತ್ಯಕವಾದ ಶೀತಲ-ಪೆಟ್ಟಿಗೆಯನ್ನು ಅಳವಡಿಸಿದರು ಅಲ್ಲದೆ ಪಿಸ್ಟನ್ನಿಗೆ ಒಂದು ಜಾಕೆಟ್ ಹೊದಿಕೆ ರೂಪಿಸಿದರು. ಇದರಿಂದ ಕಡಿಮೆ ಉರುವಲಿನಲ್ಲಿ, ಉಗಿಯಂತ್ರದ ಕೆಲಸಮಾಡುವ ಸಾಮರ್ಥ್ಯ ಗಣನೀಯವಾಗಿ ಹೆಚ್ಚಳ ವಾಯಿತು.  ಶಕ್ತಿ ಉತ್ಪಾದನ ಯಂತ್ರಗಳಲ್ಲಿ ಮೊದಲಿನದಾದ ಉಗಿಯಂತ್ರ, ಇಂದಿಗೂ ಅತ್ಯಂತ ವಿಶ್ವಾಸಾರ್ಹವಾದ ಮತ್ತು ಸರಳವಾದ ಏಕೈಕ ಯಂತ್ರವಾಗಿದೆ.

ಜೇಮ್ಸ್ ವ್ಯಾಟ್ಸ್ ಅವರಿಂದ ಇಂಗ್ಲೆಂಡ್ ದೇಶದಲ್ಲಿ ಉಗಿಯಂತ್ರದ ನಿರ್ಮಾಣ, ಉಶ್ಣಶಕ್ತಿಯಿಂದ ಯಾಂತ್ರಿಕ ಶಕ್ತಿಯಾಗಿ ಮಾರ್ಪಾಡು ಮಾಡುವ ತಂತ್ರಜ್ನಾನದ ಉದಯವಾಯಿತು. ಉಗಿಯಲ್ಲಿರುವ ಉಷ್ಣಶಕ್ತಿಯನ್ನು ಯಾಂತ್ರಿಕ-ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ (ಸ್ಟೀಂ ಎಂಜಿನ್); ಕಲ್ಲಿದ್ದಲಿನಿಂದ ನೀರು ಕಾಯಿಸಿ, ಉಂಟಾದ ಹಬೆಯ ಒತ್ತಡದಿಂದ ಚಲನೆಯನ್ನು ಉಂಟುಮಾಡುವ ಕಲೆ ಅದಾಗಿತ್ತು. ಉಗಿಯಂತ್ರಗಳು ಕಡಿಮೆ ವೆಚ್ಚದ ಯಾಂತ್ರಿಕ ಶಕ್ತಿಯ ಸಾಧನಗಳಾದವು. ಇದು ಯುರೋಪ ಖಂಡದಲ್ಲಿ ಔದ್ಯೋಗಿಕ ಕ್ರಾಂತಿಗೆ ಕಾರಣವಾಯಿತು.

ಯುರೋಪ ಖಂಡದಲ್ಲಿ ಯಂತ್ರದ ಈ ಚಲನಬಲ ಬಳಸಿ, ಹತ್ತಿಯಿಂದ ದಾರ, ಮತ್ತು ದಾರದಿಂದ ಬಟ್ಟೆ ನೇಯುವ ಕೆಲಸಕ್ಕೆ ಬಳಸಲಾಯಿತು. ಇದು ಮಾನವನ ಶ್ರಮವಿಲ್ಲದೆ ಕಡಿಮೆ ಸಮಯದಲ್ಲಿ ಹೆಚ್ಚು ಬಟ್ಟೆಗಳನ್ನು ತಯ್ಯಾರಿಸಲು ಬಳಸಲಾಯಿತು. ಸ್ಪಿನ್ನಿಂಗ್ ಜೆನ್ನಿ, ನೀರಿನ ಶಕ್ತಿಯಿಂದ ಚಲಿಸುವ ಉಗಿಯಂತ್ರ ಮುಂತಾದವುಗಳಿಂದ ಜವಳಿಕೈಗಾರಿಕೆ ಬೆಳೆಯಿತು.

೧೮೦೦ರಲ್ಲಿ-ಬೋಲ್ಟ ಮತ್ತು ವ್ಯಾಟ್ಸ ಕಂಪನಿಯು ಪ್ರಥಮಬಾರಿಗೆ ೪೯೬ ಉಗಿಯಂತ್ರಗಳನ್ನು ನಿರ್ಮಿಸಿತು. ಮೆಂಚೆಸ್ಟರ್‌ನಲ್ಲಿ ಉಗಿಯಂತ್ರ ಬಳಸಿ, ೫೦ಕ್ಕು ಅಧಿಕ ಬಟ್ಟೆ ತಯ್ಯಾರಿಸುವ ಕಾರ್ಖಾನೆಗಳ ಸ್ಥಾಪನೆಯಾಯಿತು. ಮತ್ತು ಇದರಿಂದ ಇಂಗ್ಲOಡನಲ್ಲಿ ಔದ್ಯೋಗಿಕ ಕ್ರಾಂತಿ ಆರಂಭವಾಯಿತು.

೧೮೧೨-೧೮೨೪ ಅವಧಿಯಲ್ಲಿ- ಹೆಚ್ಚು ಒತ್ತಡದ (double-acting) ಉಗಿಯOತ್ರ ಬಳಸಿ, ಕಬ್ಬಿಣದ ಹಳಿಗಳ ಮೇಲೆ ಓಡುವ ಉಗಿಬಂಡಿಯ ನಿರ್ಮಾಣ ಮತ್ತುಇದರಿಂದ ಅಧಿಕ ಪ್ರಮಾಣದ ಸರಕು ಸಾಗಾಣೆ ಆರಂಭವಾಯಿತು. ಸ್ಟೀಫನ್ಸನ್ ನಿರ್ಮಿತ ಉಗಿಬಂಡಿ ಮಾಂಚೆಸ್ಟರಿನಿಂದ ಅತ್ಯಧಿಕ ಸರಕು ಸಾಮಾನು ಹೊತ್ತು ಲಿವರ್ಪುಲಿಗೆ ಓಡಿತು.

೧೮೩೭ರಲ್ಲಿ-ಆಮೆರಿಕಾ ದೇಶದಲ್ಲಿ (telegraph) ತಂತಿಯಿOದ ಸುದ್ದಿ ತಲುಪಿಸುವ ತಂತ್ರದ ಅವಿಸ್ಕಾರವಾಯಿತು. ಟೆಲಿಗ್ರಾಫ್ ತಂತಿ ಬಳಸಿ ಅತೀ ವೇಗವಾಗಿ ಲಿಖಿತ ಸುದ್ದಿ ಕಳುಹಿಸುವ ಸಾಧನ ಇದಾಗಿತ್ತು. ಉಗಿಬಂಡಿಗಳ ಓಡಾಟಕ್ಕೆ ಟೆಲಿಗ್ರಾಫ್ ತತ್ವ ಬಳಸಲಾಯಿತು. ಇದನ್ನು 'ಬ್ಲಾಕ್ ಮತ್ತು ಕಂಟ್ರೋಲ್' ಎಂದು ಕರೆದರು.

೧೮೨೩ರಲ್ಲಿ- ಮೊದಲಬಾರಿಗೆ ಇಂಗ್ಲೆಂಡಿನಲ್ಲಿ ಸಮುದ್ರದ ಉಪ್ಪು ಬಳಸಿ, ಸೋಡಾ ತಯ್ಯಾರಿಸುವ ಕಾರ್ಖಾನೆ ಸ್ಥಾಪನೆಯಾಯಿತು. [NaCl to Na2CO3]. ಬ್ರಹತ್ ಪ್ರಮಾಣದಲ್ಲಿ ವಾಸಿಂಗ್ ಸೋಡಾ ತಯ್ಯಾರಿಕೆ, ಮತ್ತು ಬಟ್ಟೇ ತಯ್ಯಾರಿಕೆ, ಗಾಜು, ಕಾಗದ ಹಾಗು ನಂತರ ಸಾಬೂನು ತಯ್ಯಾರಿಕೆಯಲ್ಲಿ ಅದರ ಬಳಕೆ, ಮುಂದುವರೆದವು. ಬ್ರಿಟನ್ ದೇಶವು ಜಗತ್ತಿಗೆಲಾ ಸೋಡಾ ಮಾರಾಟಮಾಡಿ ಶ್ರೀಮಂತವಾಯಿತು.

೧೮೪೦ರಲ್ಲಿ- ಲಂಡನ್ ನಗರದಲ್ಲಿ ರಸಗೊಬ್ಬರ ತಯ್ಯಾರಿಸುವ ಕಾರ್ಖಾನೆ ಆರಂಭವಾಯಿತು.

೧೮೬೨ರಲ್ಲಿ ಫ್ರಾನ್ಸ್ ದೇಶದಲ್ಲಿಅಂತರ್ದಹನ ಫೋರ್-ಸ್ಟ್ರೋಕ್ ಪೆಟ್ರೋಲ್-ಇಂಜಿನ್ ಆವಿಸ್ಕಾರವಾಯಿತು.

೧೮೯೫ರಲ್ಲಿ ಡೀಸೆಲ್ ಇಂಜಿನಿನ ಆವಿಸ್ಕಾರ. ಈ ಇಂಜಿನಿನಲ್ಲಿ ಅಂತರ್- ದಹನ ಉಂಟಾಗಲು, ಕಿಡಿ ಬೆಣೆ [ಸ್ಪಾರ್ಕ್- ಪ್ಲಗ್] ಬೇಕಾಗುವುದಿಲ್ಲ. ಸಿಲಿಂಡರಿನಲ್ಲಿಯ ವಾಯು ಮತ್ತು ದಹ್ಯ್ ವಸ್ತು ಅತಿಯಾದ ಒತ್ತಡಕ್ಕೆ ಏರುವುದರಿಂದ ಉರಿಯಲು ಸಹಾಯಕವಾಗುತ್ತದೆ. ಇದರಿಂದ ಸಾಕಷ್ಟು ತಳ್ಳುಬಲ ಉತ್ಪನ್ನವಾಗುತ್ತದೆ.