ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕೇಳಿ ಕಥೆಯ', ಹಿರಿಯರು ಮತ್ತು ಮಕ್ಕಳಿಗಾಗಿ ಕನ್ನಡದ ಆರು ಸಣ್ಣ ಕಥೆಗಳ ಕಥಾಗುಚ್ಛ

ಕೇಳಿ ಕಥೆಯ
Purpose"ಕಾರ್ಯದಿಂದ ಬರುವ 100% ಲಾಭವನ್ನು ಗಡಿ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅವಿರತ ಸಂಸ್ಥೆಯ ಮೂಲಕ ತಲುಪಿಸಲಾಗುತ್ತದೆ"
ಪ್ರದೇಶ
Worldwide
Key people
  • ಮುಕುಂದ್ ಸೆಟ್ಲೂರ್
  • ಕಿರಣ್ ಮಂಜುನಾಥ್
  • ನಿತೇಶ್ ಕುಂಟಾಡಿ
  • ಸತೀಶ್ ಗೌಡ
  • ಹರೀಶ್ ಮಲ್ಯ
  • ಪ್ರಮೋದ್ ಪಟಗಾರ್
  • ಮಾನಸ ಭಾರದ್ವಾಜ್
ಅಧಿಕೃತ ಜಾಲತಾಣhttp://www.kelikatheya.com/

ಕನ್ನಡ ಚಿತ್ರರಂಗ, ನಾಟಕರಂಗ ಮತ್ತು ಸಂಗೀತ ಲೋಕದ ಪ್ರಖ್ಯಾತರು ಈ ಅನನ್ಯ ಕಾರ್ಯಕ್ಕೆ ಒತ್ತಾಸೆಯಾಗಿ ನಿಂತಿದ್ದಾರೆ. ಈ ಸಣ್ಣ ಕಥೆಗಳಿಗೆ ಪ್ರಕಾಶ್ ರೈ, ಸುಚೇಂದ್ರ ಪ್ರಸಾದ್, ನಾಗಾಭರಣ, ರಕ್ಷಿತ್ ಶೆಟ್ಟಿ, ಪಲ್ಲವಿ ಅರುಣ್ ಮತ್ತು ಕಿಶೋರ್ ದನಿಯಾಗಿದ್ದಾರೆ.

Celebrities recording for Keli Katheya Audio Book

ಮಾಹಿತಿಗಳ ಮಹಾಪೂರ ಹರಿದು ಬರುತ್ತಿರುವ ಈ ಕಾಲದಲ್ಲಿ, ‘ಕೇಳಿ ಕಥೆಯ’ ಆಡಿಯೋ ಪುಸ್ತಕವು ಕನ್ನಡದ ಸಣ್ಣ ಕಥೆಗಳ ಪ್ರಾಮುಖ್ಯತೆ ಮತ್ತು ಸರಳವಾಗಿ ಕಥೆ ಹೇಳುವುದರ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಮಾಹಿತಿ ತಂತ್ರಜ್ಞಾನ ಕಾಲದ ಪೀಳಿಗೆಯವರ ಜೀವನಶೈಲಿಗೆ ಅನುಕೂಲವಾಗುವಂತೆ ಈ ಕಥೆಗಳನ್ನು ಆಡಿಯೋ ಪುಸ್ತಕದ ರೂಪದಲ್ಲಿ ಹೊರತರಲಾಗುತ್ತಿದೆ.

ಎಲ್ಲ ಲೇಖಕರು ಮತ್ತು ಕಥೆಗಳಿಗೆ ದನಿ ನೀಡಿರುವ ಪ್ರಖ್ಯಾತರು ತಮ್ಮ ಸಮಯ ಮತ್ತು ಪರಿಶ್ರಮವನ್ನು ತೊಡಗಿಸಿ ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಈ ಕಾರ್ಯದಿಂದ ಬರುವ 100% ಲಾಭವನ್ನು ಗಡಿ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅವಿರತ ಸಂಸ್ಥೆಯ ಮೂಲಕ ತಲುಪಿಸಲಾಗುತ್ತದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮಾನ ಮನಸ್ಕ ಉದ್ಯೋಗಿಗಳ ಕನಸಿನ ಕೂಸು ಇದು

ಬಾಹ್ಯ ಸಂಪರ್ಕ

ಬದಲಾಯಿಸಿ
  1. ಕೇಳಿ ಕಥೆಯ ವೆಬ್ಸೈಟ್