ಕೇರಳ ಪ್ರವಾಸೋದ್ಯಮ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
'ಭಾರತದಲ್ಲಿ ಪ್ರವಾಸೊದ್ಯಮಕ್ಕೆ ಹೆಸರುವಾಸಿಯಾದ ರಾಜ್ಯ ಕೇರಳ. ಇಲ್ಲಿ ಅನೇಕ ದೇವಸ್ಥಾನಗಳು, ಇಗರ್ಜಿಗಳು, ದರ್ಗಾಗಳು, ಸಮುದ್ರ ತೀರಗಳು ಇತ್ಯಾದಿಗಳು ಇವೆ. ಕಪ್ಪಡ್, ಅಲಪುಜ, ತ್ರಿಶ್ಸುರ್, ಚೆರಾಯಿ ಬೀಚ್, ಬೆಯ್ಪೊರ್ ಬೀಚ್, ಮರಾರಿ ಬೀಚ್, ಕೊಚ್ಚಿ ಹಾಗೂ ವರ್ಕಳ ಇಲ್ಲಿ ಪ್ರಸಿದ್ಧವಾಗಿರುವ ಸಮುದ್ರ ತೀರಗಳು. ಕೇರಳದ ಸಂಸ್ಕ್ರತಿ ಮುಖ್ಯವಾಗಿ ಹಿಂದೂ ಸಂಸ್ಕ್ರತಿಯನ್ನು ಪಾಲಿಸುತ್ತದೆ. ಕೂಡಿಯಾಟ್ಟಮ್, ಕಥಕ್ಕಳಿ, ಕೂತು, ಮೋಹಿನಿಯಾಟ್ಟಮ್, ತುಳ್ಳೈ, ತೆಯ್ಮ್, ಪಡಾಯಿನಿ ಇವೆಲ್ಲಾ ಕೆರಳದಲ್ಲಿ ಪ್ರಸಿದ್ಧವಾಗಿರುವ ನೃತ್ಯ ಕಲೆಗಳು. ಕೇರಳದಲ್ಲಿ ಪ್ರಸಿದ್ಧವಾಗಿರುವ ಪ್ರವಾಸೀ ತಾಣಗಳು ಗುರುವಾಯೂರ್, ಶಬರಿಮಲೆ, ಮಲಯತೂರ್, ಮಾರ್ತಾ ಮರಿಯಮ್, ಆತುಕ್ಕಲ್ ಪೊಂಗಲ್ ಹಾಗೂ ಚಿಟ್ಟಿಕುಳಂಗರ ಭರಣಿ.
ಓಣಮ್ ಕೇರಳದಲ್ಲಿ ಪ್ರಸಿದ್ಧವಾಗಿರುವ ಹಬ್ಬವಾಗಿದೆ. ತ್ರಿಶ್ಶೂರ್ ಪೂರಮ್ ಹಾಗೂ ಚೆಟ್ಟಿಕುಳಂಗರ ಭರಣಿ ಕೇರಳದ ಮುಖ್ಯವಾದ ಹಬ್ಬಗಳಾಗಿವೆ. ತ್ರಿಶ್ಶೂರ್ ಪೂರಮ್, ತ್ರಿಶ್ಶೂರ್ ಜಿಲ್ಲೆಯ ವಡಕುನ್ನಾದ ದೇವಸ್ಥಾನದಲ್ಲಿ ಆಚರಿಸುವ ಹಬ್ಬವಾಗಿದೆ. ಶಿವರಾತ್ರಿ ಹಬ್ಬವೂ ಇಲ್ಲಿ ಪ್ರಸಿದ್ಧವಾಗಿದೆ. ಈ ಹಬ್ಬವು ಆಲುವ ದೇವಸ್ಥಾನದಲ್ಲಿ ಆಚರಿಸುತ್ತಾರೆ.
ಮನ್ನಾರ್ ಕಾಡು ಪೆರುಣಾಳ್ ಕೇರಳದಲ್ಲಿ ಕ್ರೈಸ್ತ ಬಾಂಧವರು ಆಚರಿಸುವ ಪ್ರಮುಖವಾದ ಹಬ್ಬವಾಗಿದೆ. ಮುಸ್ಲಿಮ್ ಬಾಂಧವರೂ ಇಲ್ಲಿ ಅನೇಕ ಹಬ್ಬಗಳನ್ನು ಆಚರಿಸುತ್ತಾರೆ.