ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕೇತಲದೇವಿ ಬೀದರ್ ಜಿಲ್ಲೆಯ 'ಬಾಲ್ಕಿ' ಗ್ರಾಮದವಳು. ಪತಿ ಕುಂಬಾರ ಗುಂಡಯ್ಯ. ದಂಪತಿಗಳಿಬ್ಬರೂ ಕಾಯಕದಲ್ಲೇ ಕೈಲಾಸ ಕಂಡವರು. ಈಕೆಯೂ ಸಹ ಕಾಯಕ ದೃಷ್ಟಾಂತದೊಂದಿಗೆ ವ್ರತಾಚರಣೆಯ ಮಹತ್ವವನ್ನು ಸೌಮ್ಯವಾಗಿ ಎತ್ತಿ ಹಿಡಿಯುವ ಶರಣೆ. ಈಕೆಯ ಶಿವ ಭಕ್ತಿ ಅಪಾರವಾದುದು. ಒಮ್ಮೆ ಶಿವಲಿಂಗಕ್ಕೆ ಪಾವಡ ದೊರೆಯದಿದ್ದಾಗ ತನ್ನ ಚರ್ಮವನ್ನೇ ಪಾವಡವಾಗಿ ನೀಡಿದ ದಂತಕಥೆಯೊಂದು ವೀರಶೈವ ಪುರಾಣಗಳಲ್ಲಿ ಪ್ರಚಲಿತದಲ್ಲಿದೆ. ಈಕೆಯ ವಚನಗಳ ಅಂಕಿತ "ಕುಂಭೇಶ್ವರಾ".

ಕೇತಲದೇವಿ
ಜನನ1160
ಅಂಕಿತನಾಮಕುಂಭೇಶ್ವರಾ


ಹದ ಮಣ್ಣಲ್ಲದೆ ಮಡಕೆಯಾಗಲಾರದು
ವ್ರತಹೀನನ ಬೆರೆಯಲಾಗದು
ಬೆರೆದಡೆ ನರಕ ತಪ್ಪದು
ನಾನೊಲ್ಲೆ ಬಲ್ಲೆನಾಗಿ ಕುಂಭೇಶ್ವರಾ!