ಭಾರತ ಸರ್ಕಾರದ ಆದಾಯ ತೆರಿಗೆ (ಮುಂಗಡ ಪತ್ರ)
(ಕೇಂದ್ರ ಸರ್ಕಾರದ ಮುಂಗಡ ಪತ್ರ-ಆದಾಯ ತೆರಿಗೆ ಇಂದ ಪುನರ್ನಿರ್ದೇಶಿತ)
2017-18ರ ಭಾರತ ಸರ್ಕಾರದ ಬಜೆಟ್
ಬದಲಾಯಿಸಿ- ಆದಾಯದ ಮೇಲಿನ ತೆರಿಗೆ ಇಳಿಕೆ
ಈ ಬಜೆಟ್‌ನಲ್ಲಿ ವಾರ್ಷಿಕ ರೂ.2.5 ಲಕ್ಷದಿಂದ ರೂ.5 ಲಕ್ಷದವರೆಗಿನ ಆದಾಯದ ಮೇಲಿನ ತೆರಿಗೆಯನ್ನು ಶೇ 10ರಿಂದ ಶೇ 5ಕ್ಕೆ ಇಳಿಸಲಾಗಿದೆ. ರೂ.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ರೂ.7,725 ಉಳಿತಾಯವಾಗಲಿದ್ದು, ರೂ.5 ಲಕ್ಷಕ್ಕಿಂತ ಮೇಲಿನ ಎಲ್ಲ ಆದಾಯ ವರ್ಗದವರಿಗೆ ಗರಿಷ್ಠ ರೂ.12,500 ಉಳಿತಾಯವಾಗಲಿದೆ.
ಹೆಚ್ಚುವರಿ ತೆರಿಗೆ
ಬದಲಾಯಿಸಿ- ವಾರ್ಷಿಕ ರೂ.50 ಲಕ್ಷದಿಂದ ರೂ.1 ಕೋಟಿ ವರೆಗಿನ ಆದಾಯದ ಮೇಲೆ ಶೇ 10 ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ.
- ರೂ.1 ಕೋಟಿಗಿಂತ ಹೆಚ್ಚು ಆದಾಯದ ಮೇಲೆ ವಿಧಿಸಲಾಗುತ್ತಿದ್ದ ಶೇ 15 ಹೆಚ್ಚುವರಿ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಯಥಾಸ್ಥಿತಿ ಕಾಪಾಡಿಕೊಳ್ಳಲಾಗಿದೆ. ತೆರಿಗೆ ದರ ವಿನಾಯ್ತಿಯಿಂದಾಗಿ ಸರ್ಕಾರದ ಬೊಕ್ಕಸದ ಮೇಲೆ ಪ್ರತಿವರ್ಷ ರೂ.15,500 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. ಆದರೆ, ಮತ್ತೊಂದೆಡೆ ಹೆಚ್ಚುವರಿ ತೆರಿಗೆ ಸಂಗ್ರಹದಿಂದ ರೂ.2,700 ಕೋಟಿ ವರಮಾನ ಬರಲಿದೆ.
ಹಿರಿಯ ನಾಗರಿಕರಿಗೂ ಇದೆ ಕೊಡುಗೆ
ಬದಲಾಯಿಸಿ- 60 ವರ್ಷಕ್ಕೂ ಹೆಚ್ಚಿನ ಹಿರಿಯ ನಾಗರಿಕರ ರೂ.3 ಲಕ್ಷದವರೆಗೆ ಆದಾಯಕ್ಕೆ ಯಾವುದೇ ತೆರಿಗೆ ವಿಧಿಸಿಲ್ಲ. 80 ವರ್ಷ ಮೇಲಿನ ಅತ್ಯಂತ ಹಿರಿಯ ನಾಗರಿಕರ ತೆರಿಗೆ ಆದಾಯ ಮಿತಿಯನ್ನು ರೂ.5 ಲಕ್ಷಕ್ಕೆ ಏರಿಸಲಾಗಿದೆ.(ಇದು ಹಿಂದೆಯೇ ಇದ್ದ ಮಿತಿ -ಹೊಸದಲ್ಲ.)
- ಎರಡೂ ವಿಭಾಗದಲ್ಲಿ ರೂ.5 ಲಕ್ಷದಿಂದ ರೂ.10 ಲಕ್ಷದವರೆಗಿನ ಆದಾಯಕ್ಕೆ ಶೇ 20ರಷ್ಟು ತೆರಿಗೆ ವಿಧಿಸಲಾಗಿದೆ. ರೂ.10 ಲಕ್ಷಕ್ಕೂ ಹೆಚ್ಚಿನ ಆದಾಯದ ಮೇಲಿನ ತೆರಿಗೆ ದರವನ್ನು ಶೇ 30ಕ್ಕೆ ನಿಗದಿಗೊಳಿಸಲಾಗಿದೆ.
ತೆರಿಗೆ ವ್ಯಾಪ್ತಿ ವಿಸ್ತಾರ
ಬದಲಾಯಿಸಿ- ತೆರಿಗೆ ವ್ಯಾಪ್ತಿಗೆ ಹೆಚ್ಚಿನ ಜನರನ್ನು ತರಲು ಕೇವಲ ಒಂದು ಪುಟದ ಸರಳ ಆದಾಯ ತೆರಿಗೆ ಮಾಹಿತಿ ಸಲ್ಲಿಕೆ ಅರ್ಜಿಯನ್ನು (ಐಟಿ ರಿಟರ್ನ್ಸ್) ಮುದ್ರಿಸುವುದಾಗಿ ಸಚಿವ ಜೇಟ್ಲಿ ತಿಳಿಸಿದ್ದಾರೆ.
- ‘ವಾಣಿಜ್ಯ ಆದಾಯ ಹೊರತುಪಡಿಸಿ ರೂ.5 ಲಕ್ಷದವರೆಗೆ ವೈಯಕ್ತಿಕ ಆದಾಯ ಹೊಂದಿರುವ ವ್ಯಕ್ತಿಗಳು ಈ ಒಂದು ಪುಟದ ಅರ್ಜಿ ತುಂಬಬೇಕಾಗುತ್ತದೆ. ಮೊದಲ ಬಾರಿಗೆ ತೆರಿಗೆ ಮಾಹಿತಿ ಸಲ್ಲಿಸುವ ತೆರಿಗೆದಾರರಿಗೆ ಕೆಲವು ವಿನಾಯ್ತಿಗಳನ್ನು ನೀಡಲಾಗುವುದು’ ಎಂದು ಅವರು ತಿಳಿಸಿದರು.
ಅಭಿಪ್ರಾಯ
ಬದಲಾಯಿಸಿ- ನೌಕರ ವರ್ಗದ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಬಜೆಟ್ ವಿಫಲವಾಗಿದೆ. ಪ್ರಾಮಾಣಿಕವಾಗಿ ತೆರಿಗೆ ಪಾವತಿಸು ವವರಿಗೆ ಇನ್ನೂ ಸ್ವಲ್ಪ ವಿನಾಯ್ತಿ ನೀಡಬಹುದಿತ್ತು.:ಎಂ.ಕೆ.ನರಸಿಂಹ ಮೂರ್ತಿ, ಪ್ರಧಾನ ಕಾರ್ಯದರ್ಶಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆ (ಐಎನ್‌ಬಿಇಎಫ್) ಕರ್ನಾಟಕ ಘಟಕ
ಯಾರು ಹೆಚ್ಚು, ಯಾರು ಕಡಿಮೆ
ಬದಲಾಯಿಸಿ- ರೂ.3.5 ಲಕ್ಷ ಆದಾಯ ಹೊಂದಿದ ವ್ಯಕ್ತಿ ರೂ.5,150 ಬದಲು ರೂ.2,575 ತೆರಿಗೆ ಪಾವತಿಸಿದರೆ ಸಾಕು
- ರೂ.5ಲಕ್ಷದಿಂದ ರೂ.50 ಲಕ್ಷ ಆದಾಯ ಹೊಂದಿದವರ ತೆರಿಗೆಯಲ್ಲಿ ರೂ.12,500 ಕಡಿಮೆಯಾಗಲಿದೆ
- ರೂ.50 ರಿಂದ ರೂ.1 ಕೋಟಿ ಆದಾಯ ಹೊಂದಿದವರು ಶೇ 10ರಷ್ಟು ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತದೆ
- ರೂ.60 ಲಕ್ಷ ಆದಾಯ ಹೊಂದಿದ ವ್ಯಕ್ತಿ ರೂ.15,91,865ರ ತೆರಿಗೆ ಬದಲಾಗಿ ರೂ.17,36,889 ತೆರಿಗೆ ಪಾವತಿಸಬೇಕಾಗುತ್ತದೆ
ಕೇಂದ್ರ ಬಜೆಟ್ 2015-16-ವೈಯಕ್ತಿಕ ಆದಾಯ ತೆರಿಗೆ
ಬದಲಾಯಿಸಿ- ದಿ.28-2-2015 ರಲ್ಲ ಕೇಂದ್ರ ಬಜೆಟ್ 2015-16 ರಲ್ಲಿ ಪ್ರಕಟಿಸಿದ, ವೈಯಕ್ತಿಕ ಆದಾಯ ತೆರಿಗೆದಾರರಿಗೆ ಆದಾಯ ತೆರಿಗೆ ಮಿತಿ ಹಾಗೂ ನೇರ ತೆರಿಗೆಯಲ್ಲಿ ಅರುಣ್ ಜೇಟ್ಲಿ ಅವರು ಯಾವುದೇ ಬದಲಾವಣೆಯನ್ನು ಮಾಡಿಲ್ಲ.
- ದೇಶ ಭಾರಿ ವಿತ್ತೀಯ ಕೊರತೆ ಅನುಭವಿಸುತ್ತಿರುವುದರಿಂದ ತೆರಿಗೆ ವ್ಯವಸ್ಥೆ ಬದಲವಣೆ ಕ್ರಮ ಅನಿವಾರ್ಯವಾಗಿತ್ತು ಎಂದು ಅವರು 2015-16ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಉಲ್ಲೇಖಿಸಿದ್ದಾರೆ. ಆದಾಯ ತೆರಿಗೆ ಮಿತಿ ಬದಲಾವಣೆ ಮಾಡದೆ ಒಂದಷ್ಟು ತೆರಿಗೆ ಬದಲಾವಣೆ ತರಲು ಸರ್ಕಾರ ಮುಂದಾಗಿದೆ ಎಂದು ಜೇಟ್ಲಿ ಹೇಳಿದರು. [ಬಜೆಟ್ 2015-16: ಯಾವುದು ಏರಿಕೆ? ಯಾವ್ದು ಇಳಿಕೆ?]
ಆದಾಯ ತೆರಿಗೆ ವಿನಾಯಿತಿ, ಪಾವತಿ ಮಿತಿ
ಬದಲಾಯಿಸಿ- ತೆರಿಗೆ ವಿನಾಯತಿ/ಪಾವತಿ ಬಗ್ಗೆ ಸರ್ಕಾರ ಮುಂದಿಟ್ಟಿರುವ ಪ್ರಸ್ತಾವನೆಯ ಪರಿಣಾಮ 440,000 ಕೋಟಿ ರು ಮೇಲಾಗಲಿದೆ. ವೈಯಕ್ತಿಕ ಆದಾಯ ತೆರಿಗೆ ಮಿತಿ ಜೊತೆಗೆ ಆರೋಗ್ಯ ವಿಮೆ ಪ್ರಿಮಿಯಂ, ಹಿರಿಯ ನಾಗರಿಕರಿಗೆ ಒಂದಿಷ್ಟು ಆಶಾದಾಯಕ ಅಂಶಗಳು ಬಜೆಟ್ ನಲ್ಲಿ ಕಂಡು ಬಂದಿದೆ. ಸುಕನ್ಯಾ ಸಮೃದ್ಧಿ ಯೋಜನೆ, ಗಂಗಾ ಸ್ವಚ್ಛತಾ ಯೋಜನೆ, ಪಿಂಚಣಿ ಫಂಡ್ ಗೆ ನೀಡುವ ಮೊತ್ತ ಕೂಡಾ 80ಸಿ ಅಡಿಗೆ ಬರುವಂತೆ ಮಾಡಲಾಗಿದೆ. [ಜೇಟ್ಲಿ ಬಜೆಟ್ 2015-16: ಎದ್ದು ಕಾಣುವ ಸುದ್ದಿಗಳು]
- ಮುಖ್ಯ ಅಂಶಗಳು:
- ಸಾಮಾನ್ಯ ತೆರಿಗೆ ದಾರರ ಗಮನಕ್ಕೆ 0 ಇಂದ 2,50,000 ರು ತನಕ ಯಾವುದೇ ತೆರಿಗೆ ಪಾವತಿಸಬೇಕಿಲ್ಲ
- ಹಿರಿಯ ನಾಗರಿಕರು (60 ರಿಂದ 80 ವರ್ಷ) 0 ಇಂದ 3,00,000 ರು ತನಕ ಯಾವುದೇ ತೆರಿಗೆ ಪಾವತಿಸಬೇಕಿಲ್ಲ
- ಹಿರಿಯ ನಾಗರಿಕರು (80 ವರ್ಷ ಹಾಗೂ ಮೇಲ್ಪಟ್ಟವರು) 0 ಇಂದ 5,00,000 ರು ತನಕ ಯಾವುದೇ ತೆರಿಗೆ ಪಾವತಿಸಬೇಕಿಲ್ಲ
- ತೆರಿಗೆಗಳು ಸರ್ ಛಾರ್ಜ್, ಶಿಕ್ಷಣ ಸೆಸ್, ಸೆಕಂಡರಿ ಹಾಗೂ ಹೈಯರ್ ಎಜುಕೇಷನ್ ಸೆಸ್ ನಿಂದ ಮುಕ್ತವಾಗಿದೆ.
- 80ಡಿ ಆರೋಗ್ಯ ವಿಮೆ ಮಿತಿ: 25,000 ರು (ಈ ಮುಂಚೆ 15,000 ರು ಇತ್ತು) ಹಿರಿಯ ನಾಗರಿಕರಿಗೆ 20,೦೦೦ ರು ನಿಂದ 30,000 ರು ಗೆ ಏರಿಕೆ. 80 ಪ್ಲಸ್ ಆರೋಗ್ಯ ಮಿತಿ ವಿನಾಯಿತಿ 30,000 ರು ಗೆ ಏರಿಕೆ.
- ಕ್ಯಾನ್ಸರ್ ಅಥವಾ ತತ್ಸಮಾನ ರೋಗಪೀಡಿತ ಹಿರಿಯ ನಾಗರಿಕರಿಗೆ ಸಿಗುವ ವಿನಾಯತಿ ಮಿತಿ 60, ೦೦೦ ರು ನಿಂದ 80,000 ರು ಗೆ ಏರಿಕೆ.
- 80ಸಿ ಅಡಿಯಲ್ಲಿ ಕಡಿತ ಮಿತಿ 1.50 ಲಕ್ಷ ರು
- 80ಸಿಸಿಡಿ ಅಡಿಯಲ್ಲಿ ಕಡಿತ ಮಿತಿ 50 ಸಾವಿರ ರು
- ಗೃಹ ಸಾಲ ಕಡಿತ ಮಿತಿ Self-occupied property -2 ಲಕ್ಷ ರು
- 80ಡಿ ಆರೋಗ್ಯ ವಿಮೆ ಮಿತಿ: 25,000 ರೂ.
೨೦೧೬ ರ ತಿದ್ದುಪಡಿ
ಬದಲಾಯಿಸಿ- 29 Nov, 2016
- ಕಪ್ಪುಹಣ ಹೊಂದಿರುವವರು ಭಾರಿ ತೆರಿಗೆ ಮತ್ತು ದಂಡ ಪಾವತಿಸುವ ಮೂಲಕ ಅದನ್ನು ಸಕ್ರಮಗೊಳಿಸಲು ಸಾಧ್ಯವಾಗುವಂತೆ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿದೆ.
- ನೋಟು ರದ್ದತಿಯ ನಂತರ ಬ್ಯಾಂಕುಗಳಲ್ಲಿ ಜಮೆ ಮಾಡಲಾದ ದಾಖಲೆರಹಿತ ಕಪ್ಪುಹಣಕ್ಕೆ ದಂಡ ಮತ್ತು ಮೇಲ್ತೆರಿಗೆ ಸೇರಿ ಶೇ 50ರಷ್ಟು ತೆರಿಗೆ ವಿಧಿಸುವ ಪ್ರಸ್ತಾವ ಈ ಮಸೂದೆಯಲ್ಲಿದೆ. ದಾಖಲೆರಹಿತ ಹಣವನ್ನು ಘೋಷಣೆ ಮಾಡದೆ ನಂತರ ಸಿಕ್ಕಿಬಿದ್ದರೆ ಅವರಿಂದ ಗರಿಷ್ಠ ಶೇ 85ರಷ್ಟು ತೆರಿಗೆ ವಸೂಲು ಮಾಡಲು ಯೋಜಿಸಲಾಗಿದೆ.
ಕಪ್ಪು ಹಣ ಘೋಷಣೆಗೆ ಹೊಸ ನಿಯಮ
ಬದಲಾಯಿಸಿ- ೨೮-೧೧-೨೦೧೬
- ಕಪ್ಪುಹಣ ಹೊಂದಿರುವವರು ಭಾರಿ ತೆರಿಗೆ ಮತ್ತು ದಂಡ ಪಾವತಿಸುವ ಮೂಲಕ ಅದನ್ನು ಸಕ್ರಮಗೊಳಿಸಲು ಸಾಧ್ಯವಾಗುವಂತೆ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಲೋಕಸಭೆ ಯಲ್ಲಿ ಮಂಡಿಸಲಾಗಿದೆ. ತಿದ್ದುಪಡಿ ಮಸೂದೆಯನ್ನು ಹಣಕಾಸು ಮಸೂದೆ ಯಾಗಿ ಮಂಡಿಸಲಾಗಿದೆ. ಹಣಕಾಸು ಮಸೂದೆಗೆ ರಾಜ್ಯಸಭೆಯ ಒಪ್ಪಿಗೆ ಅಗತ್ಯ ವಿಲ್ಲ. ಹಾಗಾಗಿ ರಾಜ್ಯಸಭೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇಲ್ಲ ಎಂಬುದು ಇಲ್ಲಿ ಸಮಸ್ಯೆ ಆಗುವುದಿಲ್ಲ. ೨೯ ರಂದು ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ;
- ಸಕ್ರಮ ಪ್ರಸ್ತಾವಗಳು;ಕಪ್ಪುಹಣ ಘೋಷಿಸಿದರೆ ತೆರಿಗೆ ಪ್ರಮಾಣ:
- 30% ತೆರಿಗೆ
- 10% ದಂಡ
- 50% ಒಟ್ಟು ಪಾವತಿಸಬೇಕಾದ ಪ್ರಮಾಣ
- ತೆರಿಗೆಯ ಮೇಲೆ 33% ಸೆಸ್ (ಒಟ್ಟು ಕಪ್ಪುಹಣದ ಶೇ 10ರಷ್ಟು)
- ಒಟ್ಟು ಕಪ್ಪುಹಣದ ಶೇ 25ರಷ್ಟನ್ನು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಲ್ಲಿ (ಪಿಎಂಜಿವೈ) ಠೇವಣಿ ಇರಿಸಬೇಕು
- ನಾಲ್ಕು ವರ್ಷ ಅವಧಿಯ ಈ ಠೇವಣಿಗೆ ಬಡ್ಡಿ ಇಲ್ಲ
- ಈ ನಿಧಿ ಯಾವುದಕ್ಕೆ ಬಳಕೆ: ನೀರಾವರಿ, ಮನೆ, ಶೌಚಾಲಯ ನಿರ್ಮಾಣ, ಪ್ರಾಥಮಿಕ ಆರೋಗ್ಯ, ಪ್ರಾಥಮಿಕ ಶಿಕ್ಷಣ
- ಕಪ್ಪುಹಣ ಇರಿಸಿದವರಿಗೆ ದೊರೆಯುವ ಹಣದ ಪ್ರಮಾಣ: 25%
- ಘೋಷಿಸದೆ ಸಿಕ್ಕಿಬಿದ್ದವರಿಗೆ ದಂಡ:
- 60% ತೆರಿಗೆ ತೆರಿಗೆಯ ಮೇಲೆ ಶೇ 25 ರಷ್ಟು ಮೇಲ್ತೆರಿಗೆ (ಇದು ಒಟ್ಟು ಮೊತ್ತದ ಶೇ 15ರಷ್ಟಾಗುತ್ತದೆ)
- ಪರಿಶೋಧನೆ ನಡೆಸಿದ ಅಧಿಕಾರಿ ಹೆಚ್ಚುವರಿ ಶೇ 10 ತೆರಿಗೆ ವಿಧಿಸುವುದಕ್ಕೂ ಅವಕಾಶ ಇದೆ
- 85% ಪಾವತಿಸಬೇಕಾದ ಮೊತ್ತ
ಚಿನ್ನಕ್ಕೆ ತೆರಿಗೆ
ಬದಲಾಯಿಸಿ- 2 Dec, 2016
- ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಪತ್ತೆಯಾದ ಚಿನ್ನಾಭರಣ ನಿಗದಿತ ಮಿತಿಯೊಳಗೆ ಇದ್ದರೆ, ಅದನ್ನು ಜಪ್ತಿ ಮಾಡುವುದಿಲ್ಲ. ಆದರೆ ವಿವಾಹಿತ ಮಹಿಳೆಯೊಬ್ಬರು ಗರಿಷ್ಠ 500 ಗ್ರಾಂ, ಅವಿವಾಹಿತ ಮಹಿಳೆ ಗರಿಷ್ಠ 250 ಗ್ರಾಂ ಮತ್ತು ಪುರುಷ ಗರಿಷ್ಠ 100 ಗ್ರಾಂ ಚಿನ್ನ ಹೊಂದಿರಬಹುದು ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ತಿಳಿಸಿದೆ. ತಿದ್ದುಪಡಿ ಮಾಡಲಾದ ಕಾಯ್ದೆಯ 115ಬಿಬಿಇ ಸೆಕ್ಷನ್ ಪ್ರಕಾರ ಕಪ್ಪುಹಣದ ಮೇಲೆ ಶೇ 50ರಷ್ಟು ತೆರಿಗೆ ಮತ್ತು ಶೇ 25ರಷ್ಟು ದಂಡ ವಿಧಿಸಬಹುದು. ಆದರೆ ಅಘೋಷಿತ ಆಸ್ತಿ ಅಥವಾ ಸಂಪತ್ತು ಕಪ್ಪುಹಣವೆಂದು ಸಾಬೀತಾದರೆ ಅದರ ಮೇಲೆ ಶೇ 10ರಷ್ಟು ಹೆಚ್ಚುವರಿ ದಂಡ ವಿಧಿಸಲು ಅವಕಾಶ ಕಲ್ಪಿಸುವ ಸಲುವಾಗಿ ಮತ್ತೊಂದು ಸೆಕ್ಷನ್ ಸೇರಿಸಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.
- ಆದಾಯ ತೆರಿಗೆ ಕಾನೂನು ತಿದ್ದುಪಡಿ ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿದೆ. ರಾಜ್ಯಸಭೆಯ ಪರಿಶೀಲನೆ ನಂತರ ಅದಕ್ಕೆ ರಾಷ್ಟ್ರಪತಿ ಅಂಕಿತ ದೊರೆತಿದೆ.[೪]
ನೋಡಿ
ಬದಲಾಯಿಸಿಆಧಾರ
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ ಆದಾಯದ ಮೇಲಿನ ತೆರಿಗೆ ಇಳಿಕೆ;ಪಿಟಿಐ;2 Feb, 2017
- ↑ ಕಾಳಧನಕ್ಕೆ ಶೇ 85 ತೆರಿಗೆ;29 Nov, 2016
- ↑ Nov, 2016[ಶಾಶ್ವತವಾಗಿ ಮಡಿದ ಕೊಂಡಿ]
- ↑ ಮಿತ ಚಿನ್ನ ತೆರಿಗೆ ಮುಕ್ತ