ಕೇಂದ್ರಿಯ ವಿಶ್ವವಿದ್ಯಾಲಯ ಕರ್ನಾಟಕ
ಭಾರತದಲ್ಲಿರುವ ಒಂದು ವಿಶ್ವವಿದ್ಯಾಲಯ
ಕೇಂದ್ರಿಯ ವಿಶ್ವವಿದ್ಯಾಲಯ ಕರ್ನಾಟಕ (ಸಿ.ಕೆ.ಕೆ) ಗುಲ್ಬರ್ಗಾದ ಆಳಂದ ತಾಲೂಕಿನ ಕಡಗಂಚಿಯಲ್ಲಿ ಇದೆ.ಭಾರತ ಸಂಸತ್ತಿನ ಕಾಯಿದೆ (2009 ರ 3 ನೇ ಸಂಖ್ಯೆಯ ಪ್ರಕಾರ ಸ್ಥಾಪಿಸಲಾಯಿತು. UGC XI ಯೋಜನೆಯ ಸಮಯದಲ್ಲಿ ಭಾರತದ ಸರ್ಕಾರ ಸ್ಥಾಪಿಸಿದ 16 ಹೊಸ ಕೇಂದ್ರಿಯ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ಈ ವಿಶ್ವವಿದ್ಯಾನಿಲಯವು ಐದು ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತದೆ: ಕಲೆ, ಮಾನವಿಯತೆ , ನಿರ್ವಹಣೆ, ವಿಜ್ಞಾನ ಮತ್ತು ಇಂಜಿನಿಯರಿಂಗ್. .ಪ್ರಸ್ತುತ ವಿಶ್ವವಿದ್ಯಾನಿಲಯದಲ್ಲಿ 8 ಶಾಲೆಗಳು 16 ವಿಭಾಗಳಿವೆ . 9 ಡ್ಯುಯಲ್ ಪದವಿ ಕಾರ್ಯಕ್ರಮಗಳು, 15 ಮಾಸ್ಟರ್ ಪದವಿ ಕಾರ್ಯಕ್ರಮಗಳು, 16 ಸಂಶೋಧನೆ (ಪಿಎಚ್ಡಿ) ಕಾರ್ಯಕ್ರಮಗಳನ್ನು ನೀಡುತ್ತಿದೆ.[೧][೨]
ಪ್ರಕಾರ | ಕೇಂದ್ರಿಯ ವಿಶ್ವವಿದ್ಯಾನಿಲಯ ಭಾರತ |
---|---|
ಸ್ಥಾಪನೆ | 2009 |
ಉಪ-ಕುಲಪತಿಗಳು | ಪ್ರೊಫೆಸರ್ H.M. ಮಹೇಶ್ವರಯ್ಯ |
ಸ್ಥಳ | ಗುಲ್ಬರ್ಗಾ, ಕರ್ನಾಟಕ, ಭಾರತ |
ಆವರಣ | ಕಡಗಂಚಿ |
Nickname | ಸಿ ಯು ಕೆ |
ಮಾನ್ಯತೆಗಳು | UGC, AIU |
ಜಾಲತಾಣ | www.cuk.ac.in |
ಸ್ಕೂಲ್ಸ್
ಬದಲಾಯಿಸಿ- ಸ್ಕೂಲ್ ಆಫ್ ಬ್ಯುಸಿನೆಸ್ ಸ್ಟಡೀಸ್
- ಸ್ಕೂಲ್ ಆಫ್ ಕೆಮಿಕಲ್ ಸೈನ್ಸಸ್
- ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್
- ಭೂಮಿಯ ವಿಜ್ಞಾನಗಳ ಶಾಲೆ
- ಸ್ಕೂಲ್ ಆಫ್ ಇಂಜಿನಿಯರಿಂಗ್
- ಹ್ಯುಮಾನಿಟೀಸ್ ಮತ್ತು ಭಾಷೆಗಳ ಶಾಲೆ
- ಸ್ಕೂಲ್ ಆಫ್ ಫಿಸಿಕಲ್ ಸೈನ್ಸಸ್
- ಸಾಮಾಜಿಕ ಮತ್ತು ವರ್ತನೆಯ ವಿಜ್ಞಾನಗಳ ಶಾಲೆ
- ಸ್ನಾತಕೋತ್ತರ ಅಧ್ಯಯನಗಳ ಶಾಲೆ.
ಕೇಂದ್ರಗಳು
ಬದಲಾಯಿಸಿ- ಶಾಸ್ತ್ರೀಯ ಕನ್ನಡ ಕೇಂದ್ರ
- ಅಳಿವಿನಂಚಿನಲ್ಲಿರುವ ಭಾಷೆಗಳ ಕೇಂದ್ರ
- ಜೈವಿಕ ಇಂಧನ ಉತ್ಪಾದನೆ ಮತ್ತು ಸಂಶೋಧನಾ ಕೇಂದ್ರದ ಮಾಹಿತಿ ಮತ್ತು ಪ್ರದರ್ಶನ ಕೇಂದ್ರ
- ಸಮುದಾಯ ಕಾಲೇಜು
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು" (PDF). Archived from the original (PDF) on 2012-02-20. Retrieved 2017-07-01.
- ↑ Parliament passes bill to set 12 central varsities - Times Of India