ಡಾ.ಕೆ.ತಿಮ್ಮಯ್ಯ ಅವರು ಅಧ್ಯಾಪಕ, ಸಹ ಪ್ರಾಧ್ಯಾಪಕ[೧], ವಿ, ಲೇಖಕ, ಕಥೆಗಾರ,ವಿಮರ್ಶಕ, ಸಂಶೋಧಕ ಮತ್ತು ಕ್ರಿಯಾಶಿಲ ಬರಹಗಾರರಾಗಿದ್ದಾರೆ. ಪ್ರಸ್ತುತ ಇವರು ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ೨೫ ವರ್ಷಗಳಿಂದಲೂ ಅಂದರೆ ೦೨-೦೮-೧೯೯೪ರಿಂದ ಇಲ್ಲಿಯವರೆವಿಗೂ, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ[೨].

ಜನನ, ವಿದ್ಯಾಭ್ಯಾಸಸಂಪಾದಿಸಿ

ಡಾ.ಕೆ.ತಿಮ್ಮಯ್ಯ ೦೫-೦೬-೧೯೬೯ರಲ್ಲಿ ತುಮಕೂರು ಜಿಲ್ಲೆಶಿರಾ ತಾಲ್ಲೋಕಿನ ಚಿಕ್ಕಬಾಣಗೆರೆಯವರು. ತಂದೆ ಈರಕಾಳಪ್ಪ, ತಾಯಿ ಈರನಾಗಮ್ಮ. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಚಿಕ್ಕಬಾಣಗೆರೆ, ಪ್ರೌಢಶಾಲಾ ಶಿಕ್ಷಣ ಹುಲಿಕುಂಟೆಯಲ್ಲಿ, ಪದವಿ ಶಿಕ್ಷಣ ಶಿರಾದಲ್ಲಿ, ಕನ್ನಡ ಎಂ.ಎ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ, ಪಿ.ಎಚ್.ಡಿ ಪದವಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ.

ನಿರ್ವಹಿಸಿರುವ/ನಿರ್ವಹಿಸುತ್ತಿರುವ ಜವಾಬ್ದಾರಿಗಳುಸಂಪಾದಿಸಿ

 1. ಕನ್ನಡ ಅಧ್ಯಯನ ಮಂಡಳಿ ಅಧ್ಯಕ್ಷರು, ಪರೀಕ್ಷಾಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು - ಸಂಗೀತವಿಶ್ವವಿದ್ಯಾನಿಲಯ
 2. ಪಠ್ಯಪುಸ್ತಕ ಸಂಪಾದನಾಮಂಡಳಿ ಮತ್ತು ಪದವಿ ಕನ್ನಡ ಅಧ್ಯಯನ ಮಂಡಳಿ ಸದಸ್ಯರು - ಮೈಸೂರು ವಿಶ್ವವಿದ್ಯಾನಿಲಯ
 3. ಮೈಸೂರು ದಸರಾ ಕವಿಗೋಷ್ಠಿ ಉಪಸಮಿತಿ ಸದಸ್ಯ ಕಾರ್ಯದರ್ಶಿ.
 4. ಮಹಾರಾಜ ಕಾಲೇಜಿನ 'ಅನಂತಯಾತ್ರಿ' ವಾರ್ಷಿಕ ಸಂಚಿಕೆಯ ಸಂಪಾದಕರಾಗಿದ್ದರು -೨೦೧೨ರಲ್ಲಿ
 5. ಮಹಾರಾಜ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ

ಕೃತಿಗಳುಸಂಪಾದಿಸಿ

ಸಂಶೋಧನೆಸಂಪಾದಿಸಿ

 1. ಜೀವಸಂಕುಲ ಜಾನಪದ
 2. ನೊಸರಿ
 3. ಚಿಕ್ಕಬಾಣಗೆರೆ ಕರಿಯಮ್ಮ. 4ಕಾಡು ಕುಸುಮ

ವಿಮರ್ಶೆಸಂಪಾದಿಸಿ

 1. ಬೆಳಸು
 2. ಕೊನರು 3ಹೃದಯ ಸ್ಪಂದನ ‌‌‌‌‌‌‌.

ಕಥಾಸಂಕಲನಸಂಪಾದಿಸಿ

 • ಉಗಾದಿ[೩],ಸಾಲು ಹುಣಸೆ

ಜಾನಪದಸಂಪಾದಿಸಿ

 1. ಉಲಾಯ
 2. ಕವಣೆ

ಪಶುಪಾಲನ ಸಂಸ್ಕೃತಿ ಅಧ್ಯಯನಸಂಪಾದಿಸಿ

ಇತರರೊಡನೆ ತಂದಿರುವ ಕವನ ಸಂಕಲನಸಂಪಾದಿಸಿ

 • ಬಣ್ಣದ ಗೆರೆ. ಸಂಪಾದಕೀಯ: ‌. ‌. ೧ ಬಯಲು ಆಲಯ. ೨ ಹರಿಗೋಲು. ೩.ಗ್ರಾಮೀಣಾಭಿವೃದ್ದಿಯ ಸವಾಲುಗಳು ೪.ಹೂವಿನಿಂದ ನಾರು. ೫.ಕೃಷ್ಣಾರ್ಜುನ

ಗೌರವ ಪುರಸ್ಕಾರಸಂಪಾದಿಸಿ

 • ನೊಸರಿ ಮತ್ತು ಚಿಕ್ಕಬಾಣಗೆರೆ ಕರಿಯಮ್ಮ ಕೃತಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರೋತ್ಸಾಹ ಧನ ದೊರೆತಿದೆ *ಸಾಹಿತ್ಯ ಕೇಸರಿ,

ಉಲ್ಲೇಖಸಂಪಾದಿಸಿ