ಕೆ. ಎಂ. ಎಂ. ಪ್ರಸನ್ನ
ಆಕರ್ಷಕ ಮೈಕಟ್ಟಿನ, ಗಂಭೀರ ಪ್ರವೃತ್ತಿಯ, ನಡೆ-ನುಢಿಗಳಲ್ಲಿ ಅತ್ಯಂತ ಸರಳತೆ ಮತ್ತು ಹೃದಯವಂತಿಕೆಯ ವ್ಯಕ್ತಿತ್ವದ, 'ಮಲ್ಲಿಕಾರ್ಜುನ ಪ್ರಸನ್ನ'ರವರು ,'ಮುಂಬಯಿನಗರದ ಪೋಲಿಸ್ ಉಪಾಯುಕ್ತ' ರಾಗಿ, ' ಅಧಿಕಾರಿ'ಯೆಂದು ಹೆಸರುಮಾಡಿದ್ದಾರೆ. ಸುಮಾರು ೧೦ ವರ್ಷಗಳಿಂದ ಸೇವೆಸಲ್ಲಿಸುತ್ತಿರುವ ಕೆ.ಎಂ.ಮಲ್ಲಿಕಾರ್ಜುನ ಪ್ರಸನ್ನರು ಕನ್ನಡಿಗರು. ಪೋಲೀಸ್ ವಲಯದಲ್ಲಿ ಅವರು, 'ಕೆ.ಎಂ.ಎಂ.ಪ್ರಸನ್ನ' ಎಂದೇ ಹೆಸರಿಸಲ್ಪಡುತ್ತಾರೆ. ಕಾಲೇಜ್ ದಿನಗಳಿಂದ ದೇಶಕ್ಕೆ ಸೇವೆಸಲ್ಲಿಸುವ ಮಹದಾಶೆಯನ್ನು ಅವರು ಹೊಂದಿದ್ದರು. ಸನ್ ೨೦೦೦ ದಲ್ಲಿ ಐ.ಪಿ.ಎಸ್ ಪರೀಕ್ಷೆಯನ್ನು ಪಾಸ್ ಮಾಡಿದರು. ಮುಂಬಯಿನ ಉಪನಗರಒಂದಾದ ಅಂಧೇರಿಯಲ್ಲಿ ಸುಮಾರು ೪ ವರ್ಷಗಳಿಂದ 'ಎಮ್.ಐ.ಡಿ.ಸಿ ವಲಯ-೧೦' ರ ಹಾಗೂ 'ಬಾಂದ್ರ ಹಿಲ್ ರೋಡ್ ವಲಯ-೯' ರಲ್ಲಿ 'ಪೋಲಿಸ್ ಉಪಯುಕ್ತ'ರಾಗಿ ಸಲ್ಲಿಸಿದ ಸೇವೆಯನ್ನು ಮುಂಬಯಿ ನಾಗರಿಕರಿಕರು ನೆನೆಸುತ್ತಾರೆ. ಅಪರಾಧಗಳನ್ನು ಹತೋಟಿಗೆ ತಂದ ಬಗ್ಗೆ 'ಆಂಗ್ಲ ಪತ್ರಿಕೆ ವಿಶೇಷ ವರದಿ'ಮಾಡಿದೆ. ಸ್ಪೆಶಲ್ ಇನ್ವೆಸ್ಟಿಗೇಶನ್ ಟೀಮ್ ನ ಮುಖ್ಯಸ್ಥರಾಗಿ ಬಹುಮುಖ್ಯವಾದ ಪ್ರಕರಣವೊಂದನ್ನು ಕೈಗೆತ್ತಿಕೊಂಡು ತಿಂಗಳು ಕಾಲ ವಿಚಾರಣೆ ನಡೆಸಿ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಸಮ್ಮತವಾದ ತೀರ್ಪನ್ನು ಪ್ರಕಟಿಸಿರುತ್ತಾರೆ. ಯಾವುದೇ 'ಅಮಿಶ' ಅಥವಾ 'ಒತ್ತಡ'ಗಳಿಗೆ ಮಣಿಯದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಚಿತ್ತವನ್ನು ಹೊಂದಿದ್ದಾರೆ.
ಪರಿವಾರ, ವಿದ್ಯಾಭ್ಯಾಸ, ಹಾಗೂ ವೃತ್ತಿಜೀವನ
ಬದಲಾಯಿಸಿಚಿಕ್ಕಮಗಳೂರಿನ ಬೆಳುವಾಡಿಯ 'ಕ್ಯಾತನ ಬೀಡು' ಎಂಬ ಹಳ್ಳಿಯವರು. ಮನೆಯ ಜನರ ಪ್ರೋತ್ಸಾಹ ಮತ್ತು ಸ್ನೇಹಿತರ ಬೆಂಬಲದಿಂದ 'ಐ.ಪಿ.ಎಸ್ ಪರೀಕ್ಷೆ 'ಕಟ್ಟಿ ತೇರ್ಗಡೆಯಾದರು. 'ಐ.ಪಿ.ಎಸ್.' ಪರೀಕ್ಷೆಗೆ ಕಟ್ಟಿದಾಗಲೂ ಕನ್ನಡ ಸಾಹಿತ್ಯ ಮತ್ತು ಇತಿಹಾಸದ ವಿಷಯಗಳನ್ನು ಅಭ್ಯಸಿಸಿದ್ದರು. ೩೭ ರ ಹರೆಯದ ಬೆಂಗಳೂರು ಕೃಷಿ ವಿಶ್ವವಿದ್ಯಲಯದಿಂದ ಬಿ.ಎಸ್.ಸಿ ಪದವಿಗಳಿಸಿದ್ದರು. ನಂತರ ಗುರುಗಾಂ ನ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಪಾಜೆಕ್ಟ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದರು. ತಂದೆ, 'ಕ್ಯಾತನ ಬೀಡು ಮಲ್ಲಿಕಾರ್ಜುನಪ್ಪ'. ಶಾಲಾ ಶಿಕ್ಷಕ, ನಿವೃರಾಗಿದ್ದಾರೆ.ಶಾಲಾ ಶಿಕ್ಷಕರಾಗಿದ್ದರು. ಒಳ್ಳೊಳ್ಳೆ ಸಾಹಿತ್ಯ ಪುಸ್ತಕಗಳನ್ನು ಮನೆಗೆ ತಂದು ಓದುತ್ತಿದ್ದರು. ಇದು ಬಾಲ್ಯದಲ್ಲೇ ಸಾಹಿತ್ಯದಲ್ಲಿ ಒಲವು ಮೂಡಲು ಅವಕಾಶವಾಯಿತು. ತಾಯಿ 'ಬಿ.ಎಸ್.ಜಯಮ್ಮ', ಗೃಹಿಣಿ. ಹಳ್ಳಿಮನೆಯಲ್ಲೇ ವಾಸ್ತವ್ಯ. ಇಬ್ಬರು ಅಕ್ಕಂದಿರು ಮತ್ತು ಒಬ್ಬ ತಮ್ಮ. ಪತ್ನಿ 'ವಿಜಯಲಕ್ಷ್ಮಿ' ೨೦೦೧ ರ ಭಾರತೀಯ ಆಡಳಿತ ಸೇವೆ ಐ.ಪಿ.ಎಸ್. ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮರಾಗಿ ರ‍್ಯಾಂಕ್ ಗಳಿಸಿದ ಪ್ರತಿಭಾವಂತೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತೆ. 'ಮಹಾರಾಷ್ಟ್ರದ ಸರಕಾರದಮಂತ್ರಲಯ ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ನಿರ್ದೇಶಕಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೭ ವರ್ಷದ ಮಗಳು 'ರಾಗ ',ಕರ್ನಾಟಕ ಸಂಗೀತ ಅಬ್ಯಾಸಮಾಡುತ್ತಿದ್ದಾಳೆ. ಮಗ 'ಅಮೋಘ'ನಿಗೆ ೨ ವರ್ಷ ವಯಸ್ಸು.
ಉಗ್ರಗಾಮಿಗಳ ನೆಲೆವೀಡಾಗಿರುವ 'ತ್ರಿಪುರಾ'ದಲ್ಲಿ ಮೊದಲ ಕೆಲಸ
ಬದಲಾಯಿಸಿತ್ರಿಪುರಾದಲ್ಲಿ ಮೊಟ್ಟಮೊದಲ ಕೆಲಸ. ಉಗ್ರಗಾಮಿ ಪ್ರದೇಶ. ಅಲ್ಲಿನ ಜನರು ತಮ್ಮ ಕಾರ್ಯವೈಖರಿಯನ್ನು ಒಪ್ಪುವರೋ ಇಲ್ಲವೋ ಎನ್ನುವ ಸಂದೇಹ ಕಾಡಿಸುತ್ತಿತ್ತು. ಅಲ್ಲಿದ್ದ ೨ ವರ್ಷಗಳಲ್ಲಿ ಜನರ ಪ್ರೀತ್ಯಾದರಗಳಿಗೆ ಪಾತ್ರರಾದರು. ಮಹಾರಾಷ್ಟ್ರ ರಾಜ್ಯದ ನಾಗಪುರ'ಗಡ್ಚಿರೋಲಿ' ಯಲ್ಲಿ ಕಳೆದ ೨ ವರ್ಷಗಳು ಅತ್ಯಂತ ಸ್ಮರಣೀಯವಾಗಿದ್ದವು. 'ಗಡ್ಚಿರೋಲಿ', ಒಂದು ದಂಡಕಾರಣ್ಯ ಪ್ರದೇಶ. ನಕ್ಸಲ್ ಪೀಡಿತ ಸ್ಥಳ. ಕರ್ನಾಟಕ ಗೋವಾ ಗಡಿಪ್ರದೇಶವಾದ ಸಿಂಧುದುರ್ಗದಲ್ಲಿ ೨ ವರ್ಷ. ಎಸ್.ಐ.ಟಿಯ ಮುಖ್ಯಸ್ಥನಾಗಿ ನೇಮಿಸಿದ ಬಳಿಕ ನಿರ್ವಹಿಸಿದ ಪ್ರಕರಣ ಅವರ ವೃತ್ತಿಜೀವನದ ಅತ್ಯಂತ ಮಹತ್ತರ ತಿರುವು ಮತ್ತು ನಿಜವಾಗಿ ಅವರನ್ನು ಹೆಚ್ಚು ಕಾಡಿದ ಸಂಧರ್ಬವೆಂದು ಅವರು ನೆನೆಸಿಕೊಳ್ಳುತ್ತಾರೆ. ನಿಷ್ಠಾವಂತರೂ ನಿರ್ವಹಿಸಬಹುದಾದ ಮಹತ್ವದ ಸೇವೆ ಪೋಲಿಸ್ ಅವರು ಹೋದೆಡೆಯಲ್ಲೆಲ್ಲಾ ತಮ್ಮ ಇಚ್ಛಾನುಸಾರ ಕಾನೂನಿನ ವ್ಯವಸ್ಥೆಯಲ್ಲೇ ಕಾರ್ಯ ನಿರ್ವಹಿಸುವ ಅವಕಾಶ ಒದಗಿತು. ಪೋಲೀಸ್ ಅಧಿಕಾರಿಗಳು ನುಡಿದಂತೆ ನಡೆದರೆ ನಾಗರಿಕರ ಗೌರವಾದರಗಳಿಗೆ ಪಾತ್ರರಾಗುತ್ತಾರೆ. ಜೀವನದಲ್ಲಿ ಮೋಜುಮಸ್ತಿ ಕೆಲವೊಮ್ಮೆ ಅನಿವಾರ್ಯವಾದರೂ ಅದು ಸಾರ್ವಜನಿಕರ ಬಾರದು. ತಾರತಮ್ಯ ವಿರಬಾರದು. ವ್ಯಕ್ತಿ ಬದುಕು, ಸಮಾಜದ ಬಗ್ಗೆ ಚೆನ್ನಾಗಿ ಮಾತಾಡುವ ಆಕರ್ಷಕಮೈಕಟ್ಟು ಮತ್ತು ಮುಖದಲ್ಲಿ ಗಂಭೀರತೆ ನಡೆ ನುಡಿಗಳಲ್ಲಿ ಸರಳತೆ, ಹಾಗೂ ಹೃದಯವಂತಿಕೆಯ ವ್ಯಕ್ತಿತ್ವ ಹೊಂದಿದ ಪ್ರಸನ್ನ ಎಲ್ಲರಿಗೂ ಬೇಕಾದವರಾಗಿದ್ದಾರೆ.
ಸತಾರ ಶಹರಿನಲ್ಲಿ
ಬದಲಾಯಿಸಿ೨೦೧೧ ರ, ಜೂನ್ ೧ ರಿಂದ ಅವರನ್ನು 'ಸತಾರ'ಕ್ಕೆ ಎಸ್.ಪಿ.ಯಾಗಿ (ಸೂಪರಿಂಟೆಂಡೆಂಟ್ ಆಗಿ) ವರ್ಗಮಾಡಲಾಯಿತು.
ವೃತ್ತಿನೀತಿ
ಬದಲಾಯಿಸಿ'ಪೋಲಿಸ್ ಕೆಲಸ'ದಲ್ಲಿದ್ದೂ ಒಬ್ಬ ವ್ಯಕ್ತಿ ಹಲವಾರು ಸಾರ್ವಜನಿಕ ಹಿತಕಾರ್ಯಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಯಶಸ್ವಿಯಾಗಿ ನಿರ್ವಹಿಸಬಹುದು. ಶುದ್ಧಮನಸ್ಸಿನ ಉತ್ತಮ ಜನಹಿತ ಕಾರ್ಯಗಳಿಗೆ ಯಾವುದೂ 'ಶಾರ್ಟ್ ಕಟ್' ಗಳಿಲ್ಲ. ತಮಗೆ ಸನ್ನಿವೇಶ ಒದಗಿಬಂದಾಗ 'ತಮ್ಮ ಅಧಿಕಾರದಬಲದ ಸದುಪಯೋಗ' ಮಾಡಿಕೊಳ್ಳುವುದು ಅತಿಮುಖ್ಯ. ಈ ತರಹದ ಧನಾತ್ಮಕ ಭಾವನೆಗಳಿಂದ ಆತ್ಮವಿಶ್ವಾಸ, ಹಾಗೂ ಶುದ್ಧಮನಸ್ಸಿನಿಂದ ಕೆಲಸಮಾಡುತ್ತಿರುವ ಪೋಲೀಸ್ ಅಧಿಕಾರಿಗಳಲ್ಲಿ ಪ್ರಸನ್ನ ಒಬ್ಬರಾಗಿದ್ದಾರೆ.