ಕೆ.ಸಿ. ಅಶ್ವತ್ಥನಾರಾಯಣ


ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

೧೯೩೬ರಲ್ಲಿ ಜನಿಸಿದ ಕೆ.ಸಿ. ಅಶ್ವತ್ಥ ನಾರಾಯಣರವರು ತಮ್ಮ ೧೩ನೆಯ ವಯಸ್ಸಿನಲ್ಲಿಯೇ ಶ್ರೀ ಎಂ.ಎಸ್. ಶ್ರೀನಿವಾಸಮೂರ್ತಿಯರಲ್ಲಿ ನಂತರ ವಿದ್ವಾನ್ ಎಂ.ಆರ್. ದೊರೆಸ್ವಾಮಿ, ಟಿ. ಆರ್. ಮಹಲಿಂಗಂರವರ ಸಂಪರ್ಕದಿಂದ ತಮ್ಮ ಕಲಾಸಕ್ತಿಯನ್ನು ಬೆಳೆಸಿಕೊಂಡರು. ಹಲವಾರು ಸಭೆಗಳ, ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸಂಯೋಜಿಸಲಾಗಿದ್ದ ಸಂಗೀತ ಕಚೇರಿಗಳಲ್ಲಿ ಸಹಕಲಾವಿದರಾಗಿಯೂ, ಸ್ವತಂತ್ರ ಕಚೇರಿಗಳನ್ನೂ ನೀಡಿದ್ದಾರೆ. ನೃತ್ಯ ಕ್ಷೇತ್ರದಲ್ಲಿ ಖ್ಯಾತನಾಮರಾದ ಮುತ್ತಯ್ಯಪಿಳ್ಳೆ, ಹೆಚ್. ಆರ್.ಕೇಶವಮೂರ್ತಿ, ಬಿರ್ಜು ಮಹಾರಾಜ್, ಕೇಳುಚರಣ್ ಮಹಾಪಾತ್ರ, ಅಡಿಯಾರ್ ಲಕ್ಷ್ಮಣ್ ಹಾಗೂ ಕೃಷ್ಣಮೂರ್ತಿ ಮುಂತಾದ ಪ್ರಖ್ಯಾತ ನೃತ್ಯಪಟುಗಳ ಕಾರ್ಯಕ್ರಮಗಳಲ್ಲಿ ಕೊಳಲು ವಾದನದ ಸಹಕಾರವನ್ನು ನೀಡಿದ್ದಾರೆ. ವಿದೇಶಗಳಿಗೂ ಸಾಂಸ್ಕೃತಿಕ ತಂಡಗಳೊಂದಿಗೆ ಭೇಟಿಯಿತ್ತು ಕಾರ್ಯಕ್ರಮಗಳನ್ನಿತ್ತಿದ್ದಾರೆ. ಧ್ವನಿಮುದ್ರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಲಘು ಸಂಗೀತ ಕ್ಷೇತ್ರದಲ್ಲಿಯೂ ಸಹ ಕಾರ್ಯಕ್ರಮಗಳಲ್ಲಿ ಸಹಕಾರ ನೀಡಿದ್ದಾರೆ. ಅನೇಕ ಕೊಳಲು ವಾದನದಲ್ಲಿ ಅನೇಕ ಶಿಷ್ಯರನ್ನು ಅದರಲ್ಲೂ ಪಾಶ್ಚಾತ್ಯ ಶಿಷ್ಯರನ್ನು ತಯಾರಿಸಿರುವ ಹಿರಿಮೆಯು ಇವರದಾಗಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ’ಕರ್ನಾಟಕ ಕಲಾ ತಿಲಕ’ ಎಂಬ ಬಿರುದನ್ನಿತ್ತು ೧೯೪೪-೯೫ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.