ಕೆ.ಬಿ.ಚೌಧರಿ(ಕಾಳಿಂಗಪ್ಪ ಭೀಮಣ್ಣ ಚೌಧರಿ)ಯವರು ಮಾಜಿ ಸಂಸದರು ಹಾಗೂ ರಾಜಕೀಯ ಧುರೀಣರು.

ಕೆ.ಬಿ.ಚೌಧರಿ
ಜನನ21ನೇ ನವೆಂಬರ್, 1933
ದೇವಣಗಾಂವ, ಸಿಂದಗಿ ತಾಲ್ಲೂಕು, ವಿಜಯಪುರ ಜಿಲ್ಲೆ, ಕರ್ನಾಟಕ
ವೃತ್ತಿರಾಜಕೀಯ
ರಾಷ್ಟ್ರೀಯತೆಭಾರತೀಯ

ಚೌಧರಿಯವರು 21ನೇ ನವೆಂಬರ್, 1933ರಂದು ವಿಜಯಪುರ ಜಿಲ್ಲೆಸಿಂದಗಿ ತಾಲ್ಲೂಕಿನ ದೇವಣಗಾಂವ ಗ್ರಾಮದಲ್ಲಿ ಜನಿಸಿದರು.

ಶಿಕ್ಷಣ

ಬದಲಾಯಿಸಿ

ವಿಜಯಪುರದ ವಿಜಯ ಕಾಲೇಜಿನಿಂದ ಬಿ.ಎ. ಪದವಿ ಪಡೆದಿದ್ದಾರೆ.

ನಿರ್ವಹಿಸಿದ ಖಾತೆಗಳು

ಬದಲಾಯಿಸಿ
  • 1977ರಲ್ಲಿ ನಡೆದ ಲೋಕಸಭೆ 6ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದರಾಗಿ ಮೊದಲ ಬಾರಿ ಸಂಸತ್ ಪ್ರವೇಶಿಸಿದ್ದರು.
  • 1980ರಲ್ಲಿ ನಡೆದ ಲೋಕಸಭೆ 7ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಲೋಕಸಭೆಗೆ ವಿಜಯಿಯಾದರು.[೧]
  • ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಕೆ.ಪಿ.ಸಿ.ಸಿ. ಸದಸ್ಯರಾಗಿದ್ದರು.
  • ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸದಸ್ಯರಾಗಿದ್ದರು.
  • ಕರ್ನಾಟಕ ವಿದ್ಯುತ್ ಮಂಡಳಿ ಸಲಹಾ ಸಮಿತಿ ಸದಸ್ಯರಾಗಿದ್ದರು.
  • ಸಿಂದಗಿ ತಾಲ್ಲೂಕಿನ ಕೃಷಿ ನ್ಯಾಯಮಂಡಳಿಯ ಉಪಾಧ್ಯಕ್ಷರಾಗಿದ್ದರು.
  • ಅಖಿಲ ಭಾರತ ಶಾಂತಿ ಮತ್ತು ಒಕ್ಕೂಟ ಸಂಘಟನೆಯ ಉಪಾಧ್ಯಕ್ಷರಾಗಿದ್ದರು.
  • ವಿಜಯಪುರ ಜಿಲ್ಲಾ ರೈತರ ವೇದಿಕೆಯ ಉಪಾಧ್ಯಕ್ಷರಾಗಿದ್ದರು.
  • ವಿಜಯಪುರ ಜಿಲ್ಲಾ ಡಿ.ಸಿ.ಸಿ. ಬ್ಯಾಂಕ್ ಸದಸ್ಯರಾಗಿದ್ದರು.
  • 1962 - ವಿಜಯಪುರ ನಗರ ಸಭೆಯ ಉಪಾಧ್ಯಕ್ಷರಾಗಿದ್ದರು.[೨]

ಉಲ್ಲೇಖಗಳು

ಬದಲಾಯಿಸಿ