ಕೆ.ಟಿ.ವೇಣುಗೋಪಾಲ್ (೧೯೪೭-೨೦೦೯) ಖ್ಯಾತ ಪತ್ರಕರ್ತ ಮತ್ತು ಕಥೆಗಾರ.

ಜನನ ಬದಲಾಯಿಸಿ

ಇವರು ಕಾಸರಗೋಡಿನಲ್ಲಿ ೧೯೪೭ರಲ್ಲಿ ಜನಿಸಿದರು.ಕಾಸರಗೋಡಿನಲ್ಲಿಯೇ ವಿದ್ಯಾಭ್ಯಾಸ.

ಜೀವನ ಬದಲಾಯಿಸಿ

ಇವರು ಉದಯವಾಣಿ ಪತ್ರಿಕೆಯಲ್ಲಿ ಮುಂಬೈ ವರದಿಗಾರರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.ಇವರು ಉದಯವಾಣಿ ಪತ್ರಿಕೆಗೆ ಬರೆಯುತ್ತಿದ್ದ "ಮುಂಬಯಿ ಪತ್ರ"ಎಂಬ ಅಂಕಣ ಜನಪ್ರಿಯವಾಗಿತ್ತು. ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.ಇವರು ವೃತ್ತಿಪರ ಪತ್ರಕರ್ತರಾಗಿದ್ದರೂ ಉತ್ತಮ ಕಥೆಗಾರರೂ ಅಗಿದ್ದರು.ಇವರ ಬರವಣಿಗೆಯ ಮೇಲೆ ಕಥೆಗಾರ ನಿರಂಜನ ಹಾಗೂ ಮಲೆಯಾಳಂ ಭಾಷೆಯ ಲೇಖಕ ಎಂ.ಟಿ.ವಾಸುದೇವ ನಾಯರ್ ಇವರ ಪ್ರಭಾವ ಗಾಢವಾಗಿತ್ತು.

ಕೃತಿಗಳು ಬದಲಾಯಿಸಿ

ಕಥಾಸಂಕಲನಗಳು

  • ದೇವಕಿಯಮ್ಮನ ತರವಾಡು ಮನೆ
  • ಜುಗಲಬಂದಿ
  • ಮುಂಬಯಿ ಪತ್ರ
  • ಬಾಳ್ ಠಾಕ್ರೆ ಮತ್ತು ಇತರ ಸಂದರ್ಶನಗಳು

ನಿಧನ ಬದಲಾಯಿಸಿ

ಇವರು ತಮ್ಮ ೬೨ನೆಯ ವರ್ಷದಲ್ಲಿ ಅನಾರೋಗ್ಯದಿಂದ ಮೇ ೧೯ ೨೦೦೯ ರಂದು ಪುಣೆಯ ಆಸ್ಪತ್ರೆಯಲ್ಲಿ ನಿಧನರಾದರು.[೧]

ಉಲ್ಲೇಖಗಳು ಬದಲಾಯಿಸಿ

  1. "Veteran Kannada Journalist K T Venugopal Passes Away". 9 may 2009. Retrieved 8 sept 2021. {{cite news}}: Check date values in: |access-date= and |date= (help)