ಕೆ.ಜಿ.ಮಲ್ಯ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಕೆ ಜಿ ಮಲ್ಯರೆಂದು ಗುರುತಿಸಲ್ಪಡುವ ಕಿನ್ನಿಗೋಳಿ ಗಣೇಶ ಮಲ್ಯ ಇವರು ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಡೆಪ್ಯೂಟಿ ಜನರಲ್ ಮ್ಯಾನೇಜರ್. ಇವರು ಕಿನ್ನಿಗೋಳಿಯಲ್ಲಿ ೧೯೩೯ರಲ್ಲಿ ಜನಿಸಿದರು. ಇವರು ಎಮ್. ಕಾಂ.,ಸಿಎಐಐಬಿ ಮತ್ತು ಎಐಬಿ ಲಂಡನ್ ನಿಂದ ಪದವಿ ಪಡೆದಿರುತ್ತಾರೆ. ಸ್ವಲ್ಪ ಸಮಯ ಇವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬೆಂಕರ್ಸ್ ನಡೆಸುವ ಸಿಎಐಐಬಿ ಭಾಗ ಎರಡು ಪರೀಕ್ಷೆಗೆ ಮುಖ್ಯ ಪರೀಕ್ಷಕರಾಗಿದ್ದರು. ಇವರು ಮುಕ್ತ ಪತ್ರಿಕಾಕರ್ತರಾಗಿದ್ದು, ಮತ್ತು ಲೇಖಕರಾಗಿ ಕೊಂಕಣಿ, ಕನ್ನಡ ಹಾಗೂ ಇಂಗ್ಲೀಷಿನಲ್ಲಿ ೬೫ಕ್ಕೂ ಮಿಕ್ಕಿ ಕೃತಿಗಳನ್ನು ರಚಿಸಿದ್ದಾರೆ. ಆ ಕೃತಿಗಳ ವಿಷಯಗಳು ವೈವಿಧ್ಯಮಯವಾಗಿದ್ದು, ತತ್ವ ಶಾಸ್ತ್ರ ಮತ್ತು ಪುರಾಣದಿಂದ ಹಿಡಿದು ಬ್ಯಾಂಕಿಗ್ ಮತ್ತು ಹಣಕಾಸಿನ ವಿಷಯಗಳವರೆಗೂ ವಿಸ್ತಾರಗೊಂಡಿದೆ. ಇತ್ತೀಚಿಗೆ ೧೦,೦೦೦ ಶಬ್ದ ಮತ್ತು ಪಡೆನುಡಿಗಳನ್ನು ಒಳಗೊಂಡ ಬ್ಯಾಂಕಿಂಗ್ ಶಬ್ದಕೋಶವನ್ನು ಸ್ಂಪಾದಿಸಿ ಪ್ರಕಟಿಸಿದ್ದಾರೆ. ಈ ಶಬ್ದಕೋಶವನ್ನು ಬ್ಯಾಂಕಿಂಗ್ ಮತ್ತು ಆರ್ಥಿಕ ಸಂಸ್ಥೆಗಳಲ್ಲಿ ಉಪಯೋಗಿಸಲಾಗುತ್ತಿದೆ. ಅವರ ಕನ್ನಡ ಕಾದಂಬರಿ ``ವ್ಯಾಸ, ಮಹಾಭಾರತ ಮಹಾಕಾವ್ಯದ ಕರ್ತೃ ವ್ಯಾಸರ ಕುರಿತಾಗಿದೆ. ಇನ್ನೊಂದು ಇಂಗ್ಲೀಷ ಭಾಷೆಯಲ್ಲಿ ``ದಿ ಸ್ಟೇಚ್ಯೂ ಆಫ್ ದ್ ಮಹಾತ್ಮಾ ಸಮಕಾಲೀನ ಸಾಹಿತ್ಯದಲ್ಲಿ ಗಣಮಟ್ಟದ ಕೃತಿಗಳೆಂದು ಗುರುತಿಸಲ್ಪಟ್ಟಿವೆ. ``ದಿ ಸ್ಟೆಚ್ಯೂ ಆಫ್ ಮಹಾತ್ಮಾ ತುಮುಕೂರಿನ ಎಲ್. ನರಸಿಂಹಯ್ಯ ನಿವೃತ್ತ ಮುಖ್ಯೋಪಾದ್ಯಯರು ಕನ್ನಡಕ್ಕೆ ಅನುವಾದಿಸಿ, ಆ ಕೃತಿಗೆ ೨೦೦೧ರಲ್ಲಿ ಕರ್ನಾಟಕ ರಾಜ್ಯ ಗಾಂಧಿ ಸ್ಮಾರಕ ಸಮೀತಿಯಿಂದ ಅತ್ಯುತ್ತಮ ಪುಸ್ತಕ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ಎರಡು ಜೀವನ ಚರಿತ್ರಗಳಾದ `ವನ್ ಎಂಡ್ ಓನ್ಲೀ ಅಂಬಾನಿ', ಮತ್ತು ``ಟಿ. ಏ. ಪೈ. ಎಂಡ್ ದೊಂಬಿವಿಲಿ ಲೋಕಲ್' ನಿರಂತರ ಮೌಲ್ಯವುಳ್ಳ ಪುಸ್ತಕಗಳು ಎಂದು ಗುರುತಿಸಲ್ಪಟ್ಟಿವೆ. ಅವರು ಮುಲ್ಕಿ ಸಮೀಪದ ಪುನರೂರು ಎಂಬ ಗ್ರಾಮದಲ್ಲಿ ಫೆಬ್ರುವರಿ, ೩ರಂದು ನಡೆದ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.ಅವರನ್ನು ೨೦೦೩ರಲ್ಲಿ ಮುಂಬಯಿಯ ತುಳು ಸಾಹಿತ್ಯ ಆಕಾದೆಮಿಯೂ ಹಾಗೂ ೨೦೦೭ರಲ್ಲಿ ಕೊಂಕಣಿ ಸಾಹಿತ್ಯ ಆಕಾದೆಮಿಯೂ ಮತ್ತು ೨೦೧೧ರಲ್ಲಿ ಮುಂಡ್ಕೂರಿನಲ್ಲಿಯೂ ಅವರ ಜೀವಮಾನದಲ್ಲಿ ಕೊಟ್ಟ ಸಾಹಿತ್ಯಿಕ ಕೊಡುಗೆಗಳನ್ನು ಗುರುತಿಸಿ ಸಮ್ಮಾನಿಸಿವೆ. ಅವರ ಹುಟ್ಟೂರಾದ ಕಿನ್ನಿಗೋಳಿಯಲ್ಲಿಯೂ ಸ್ಥಳೀಯ ರಾಮಮಂದಿರದ ವತಿಯಿಂದ ಸನ್ಮಾನ ಸಂದಿದೆ. ಹಾಗೆ ಸ್ಥಳೀಯ `ಯುಗಪುರುಷ' ಮಾಸಿಕ ಪತ್ರಿಕೆಯು ಅವರನ್ನು `ಕೊ ಅ ಉಡುಪ ಪ್ರಶಸ್ತಿಯನ್ನು ಅವರ ಸಾಹಿತ್ಯಿಕ ಸಾಧನೆಗೆ ಕೊಡಲಾಗಿದೆ. ಅವರನ್ನು ಡಿಸೆಂಬರ್ ೧೯೯೯ರಂದು ವಿಶ್ವ ಸಾರಸ್ವತ ಸಮ್ಮೇಲನವು ಮತ್ತು ದೊಂಬಿವಿಲಿ ಸಾರಸ್ವತ ಸಮ್ಮೇಲನವು ೨೦೦೩ರಲ್ಲಿ ಅವರ ಸಾಹಿತ್ಯಿಕ ಕೊಡುಗೆಯನ್ನು ಗುರುತಿಸಿ ಸಮ್ಮಾನಿಸಲಾಗಿದೆ. ಅವರ `ಸ್ಟೋರಿ ಆಫ್ ಸುನಾಮಿ' ಈ ಕೃತಿಗೆ ೨೦೦೫ರಲ್ಲಿ ಐಸ್ಕೋ ಮುಂಬಯಿ ಇವರಿಂದ ಬಂಗಾರದ ಫಲಕವನ್ನು ಕೊಡಲಾಯಿತು ಅವರು ೨೦೧೧ರಲ್ಲಿ ಅವರ ಕನ್ನಡ ಸಾಹಿತ್ಯ ಸೇವೆಯನ್ನು ಗುರುತಿಸಿ ಜಿಲ್ಲಾ ಮಟ್ಟದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡಲಾಯಿತು. ೧೯೭೨ರಲ್ಲಿ ರೊಟರಿ ಅಂತರ್ರಾಷ್ಟ್ರೀಯ ಸಂಸ್ಥೆಯಿಂದ ಅಂತರ್ರಾಷ್ಟ್ರೀಯ ತಿಳುವಳಿಕೆಗಾಗಿ ಅವರನ್ನು ಅಮೇರಿಕಾ ಹಾಗೂ ಕೆನಡಾಕ್ಕೆ ಎರಡು ತಿಂಗಳ ಭೇಟಿಗಾಗಿ ಕಳುಹಿಸಲಾಯಿತು. ಸಿಂಡಿಕೇಟ್ ಬ್ಯಾಂಕಿನಿಂದ ೧೯೯೭ರಲ್ಲಿ ನಿವೃತ್ತರಾದ ಮಲ್ಯರು ೨೦೦೭ರತನಕ ಮುಂಬಯಿಯಲ್ಲಿ ಕಳೆದು ೨೦೦೭ರಂದು ತಮ್ಮ ಹುಟ್ಟೂರಾದ ಕಿನ್ನಿಗೋಳಿಗೆ ಬಂದು ನೆಲೆಸಿದರು. ಈಗಲೂ ಕೂಡಾ ಸಾಹಿತ್ಯಾಸಕ್ತರಿಗೆ ಮಾರ್ಗ ದರ್ಶನ ಮಾಡುತ್ತ ನಿವೃತ್ತ ಜೀವನವನ್ನು ಸೃಜನಶೀಲತೆಯಿಂದ ಕಳೆಯುತ್ತಿದ್ದಾರೆ.