ಕೆ.ಎಸ್.ಪುಟ್ಟಣ್ಣಯ್ಯ
ಕೆ.ಎಸ್.ಪುಟ್ಟಣ್ಣಯ್ಯ ರೈತ ಚಳವಳಿ,ಮೂಲಕ ಬೆಳೆದ ಶಾಸಕ. ಇವರು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ವಿಚಾರ ಶಾಲೆಯಲ್ಲಿ ಪಳಗಿದ್ದರು. ಇವರು ರೈತನಾಯಕ, ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷರಾಗಿದ್ದರು. ಕೃಷಿಕರ ಕುರಿತು ಅಪಾರ ಕಾಳಜಿ ಹೊಂದಿದ್ದ ಅವರು, ಪ್ರಕೃತಿ ಹಾಗೂ ಕ್ರೀಡೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದರು.[1][೧][೨][೩]
ಬಾಲ್ಯ
ಬದಲಾಯಿಸಿಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕು, ಕಸಬಾ ಹೋಬಳಿ ಕ್ಯಾತನಹಳ್ಳಿ ಗ್ರಾಮದ ಶ್ರೀ ಕೆ.ಎಸ್. ಶ್ರೀಕಂಠೇಗೌಡ ಹಾಗೂ ಶ್ರೀಮತಿ ಕೆ.ಎಸ್. ಶಾರದಮ್ಮ ದಂಪತಿಯ ಜೇಷ್ಠಪುತ್ರರಾಗಿ ದಿನಾಂಕ ೨೩-೧೨-೧೯೪೯ರಲ್ಲಿ ಜನಿಸಿದರು.
ವಿದ್ಯಾಭ್ಯಾಸ
ಬದಲಾಯಿಸಿ- ಇವರು ತಮ್ಮ ಹುಟ್ಟೂರಿನಲ್ಲಿಯೇ ಎಸ್.ಎಸ್.ಎಲ್.ಸಿ.ಯನ್ನು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮುಗಿಸಿ ಮೈಸೂರಿನಲ್ಲಿರುವ ಸೆಂಟ್ ಫಿಲೋಮಿನಾ ಶಾಲೆಯಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮಾಡಿ, ನಂತರ ಇದೇ ಮೈಸೂರಿನ ಡಿ. ಬನುಮಯ್ಯ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು.
- ವಿದ್ಯಾರ್ಥಿಯಾಗಿದ್ದಾಗಲೇ ಹಳ್ಳಿಗಾಡುಗಳಲ್ಲಿ ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು ಹಾಗೂ ಬಡ ಮಹಿಳೆಯರುಗಳು ಅನುಭವಿಸುತ್ತಿದ್ದ ಯಾತನಮಯ ಜೀವನಗಳನ್ನು ಕಣ್ಣಾರೆ ಕಂಡಿದ್ದ ಈ ಪದವೀದರ ಕೆ.ಎಸ್. ಪುಟ್ಟಣ್ಣಯ್ಯ ಅವರು ತಮ್ಮ ಮುಂದಿನ ವ್ಯಾಸಂಗಕ್ಕೆ ಹಾಗೂ ಸರ್ಕಾರಿ ನೌಕರಿಗೆ ಎಡತಾಕದೆ ಜನರ ಏಳಿಗೆಗಾಗಿ ದುಡಿಯಬೇಕೆಂಬ ಅಚಲ ವಿಶ್ವಾಸ ಹೊಂದಿದ್ದರು.
ರಾಜಕೀಯ ಪ್ರವೇಶ
ಬದಲಾಯಿಸಿ- ಎಸ್.ಡಿ. ಜಯರಾಂ ರವರ ಮಾರ್ಗದರ್ಶನದಲ್ಲಿ ಆಗಸ್ಟ್ 1983ರಲ್ಲಿ ಕರ್ನಾಟಕ ರಾಜ್ಯರೈತ ಸಂಘದ ಸಾಮಾನ್ಯ ಕಾರ್ಯಕರ್ತನಾಗಿ ಸೆರಿದರು.
- ಇಪ್ಪತ್ತು ವರ್ಷಗಳ ಕಾಲ ರಾಜಕೀಯದಲ್ಲಿ ಹಳ್ಳಿಗಾಡಿನ ರೈತರ, ಕೃ ಕಾರ್ಮಿಕರ, ಕೂಲಿ ಕಾರ್ಮಿಕರ, ಮಹಿಳೆಯರ ಪರವಾಗಿ ಹೋರಾಟ ಮಾಡಿದ್ದಾರೆ.
- ಸಾಮಾನ್ಯ ಕಾರ್ಯಕರ್ತರಿಂದ ಪಾಂಡವಪುರ ತಾಲ್ಲೂಕು ರೈತ ಸಂಘದ ಅಧ್ಯಕ್ಷರಾಗಿ, ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷರಾಗಿ ಹಾಗೂ ಮೈಸೂರು ವಿಭಾಗ ಮಟ್ಟದ ಸಂಘಟನಾ ಕಾರ್ಯದರ್ಶಿಗಳಾಗಿ ಜನಪರ ಕಾರ್ಯಗಳನ್ನು ನೆರವೇರಿಸಿಕೊಂಡು ಬಂದು ಸಫಲತೆಯನು ಕಣ್ಣಾರೆ ಕಂಡಂತಹ ಸುಧಿನಗಳಲ್ಲಿ ಇವರನ್ನು
- ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಞರಾಗಿ 1999 ರಿಂದ 2012.
- ಸರ್ವವರ್ಗದವರನ್ನು ಒಗ್ಗೂಡಿಸಿ ಸಂಘವನ್ನು ಮುನ್ನೆಡಿಸಿಕೊಂಡು ಬಂದು ಸರ್ವರಿಗೂ ಸೇವಾ ಸೌಲಭ್ಯಗಳ ಒದಗಿಸಿಕೊಂಡು ಬಂದಂತಹ ಕೀರ್ತಿ ಈ ಶ್ರೀ ಕೆ.ಎಸ್. ಪುಟ್ಟಣ್ಣಯ್ಯನವರಿಗೆ ಸಲ್ಲಿರುತ್ತವೆ. ನಂತರ ಕರ್ನಾಟಕ ರಾಜ್ಯ ರೈತ ಸಂಘದ ರಾಜಕೀಯ ಪಕ್ಷವಾದ, ‘ಸರ್ವೋದಯ ಕರ್ನಾಟಕ ಪಕ್ಷ’ದ ಕಾರ್ಯಾಧ್ಯಕ್ಷರಾಗಿ ಈವರೆವಿಗೂ ಸೇವೆ ಸಲ್ಲಿಸುತ್ತಿದ್ದರು.
- ಸರ್ವಜನಾಂಗದವರ ಹಿತೈಷಿಯಾದ ಶ್ರೀ ಕೆ.ಎಸ್. ಪುಟ್ಟಣ್ಣಯ್ಯನವರಿಂದ ಹೆಚ್ಚಿನ ಜನಪರ ಯೋಜನೆಗಳನ್ನು ಜಾರಿಗೊಳಿಸಿ ಸದುಪಯೋಗ ಪಡಿಸಿಕೊಳ್ಳಬೇಕೆಂಬ ಮಹದಾಸೆಯಿಂದ ಇವರನ್ನು 1994ನೇ ಇಸವಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಾಂಡವಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರರಾಗಿ ಚುನಾಯಿಸಿ ಜಯಶೀಲರಾಗಿ ವಿಧಾನಸಭೆ ಪ್ರವೇಶಿಸಿ ಚೊಚ್ಚಲ ಅಧಿವೇಶನದಲ್ಲಿಯೇ ವಿಜೃಂಭಿಸಿದ್ದರು. ಈ ಅವಧಿಯಲ್ಲಿ ವಿಧಾನ ಸಭಾಧ್ಯಕ್ಷರಾಗಿದ್ದ ಜನರುಗಳ ಜೀವನದ ಸಾರಾಂಶಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಏಕೈಕ ಶಾಸಕರಾಗಿದ್ದರು.
ಹೋರಾಟಗಳು/ಯೋಜನೆಗಳು
ಬದಲಾಯಿಸಿಯಶಸ್ವಿ ಹೋರಾಟಗಳು – ಇವರ ಪ್ರಗತಿ ಹೋರಾಟದಿಂದ ಹಲವಾರು ಸಂಗತಿಗಳು ಪ್ರಗತಿಪರವಾಗಿರುತ್ತವೆ.
- ಯಾವುದೇ ಹಳ್ಳಿಗಳಿಗೆ ಕಂದಾಯ ಅಧಿಕಾರರಿಗಳ ಮುನ್ಸೂಚನೆ ಇಲ್ಲದೆ ಏಕಾಏಕಿ ಮನೆಗಳನ್ನು ಜಪ್ತಿಮಾಡುವ ಪ್ರಕ್ರಿಯೆ ನಿರ್ಭಂಧಿಸಿರುವುದು.
- ರಾಷ್ಟ್ರಕವಿ ಕುವೆಂಪುರವರ ಮಾರ್ಗದರ್ಶನದಂತೆ ಕರ್ನಾಟಕದಾದ್ಯಂತ ‘ಸರಳ ವಿವಾಹ’ ನಡೆಸಲಾಗಿದೆ.
- ರೈತರುಗಳು ಬೆಳೆದ ಬೆಳೆಗಳಿಗೆ ಹೋರಾಟಮಾಡಿ ಕಬ್ಬಿಗೆ, ರೇಷ್ಮೆ ಬೆಳೆಗೆ, ಭತ್ತಕ್ಕೆ ಇನ್ನಿತರೆ ಪದಾರ್ಥಗಳಿಗೆ ಸರ್ಕಾರದಿಂದ ಬೆಂಬಲ ಬೆಲೆ ನೀಡುವಂತೆ ಕ್ರಮಕೈಗೊಂಡಿರುವುದು.
- ರೈತರುಗಳು ಬೆಳೆದ ಹಸಿರು ತರಕಾರಿಗಳು, ಹೂ ಹಣ್ಣುಗಳನ್ನು ಮಾರಾಟ ಮಾಡಲು ಯಾವುದೇ ಮಧ್ಯವರ್ತಿಗಳ ಹಾವಳಿುಲ್ಲದೆ ರೈತರುಗಳೇ ನೇರವಾಗಿ ಮಾರುಕಟ್ಟೆಗಳಲ್ಲಿ ಮಾರಾಟಮಾಡಲು ಅವಕಾಶ ಮಾಡಿಕೊಡಲಾಗಿದೆ.
- ಆರ್ಥಿಕವಾಗಿ ಹಿಂದುಳಿದಿರುವ ಜನಾಂಗದವರ ಏಳಿಗೆಗಾಗಿ ಶ್ರಮಿಸುವುದು.
- ರೈತರುಗಳು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀತಿಯನ್ನು ರೂಪಿಸುವುದು.
- ರೈತರು ಭೂಮಿಗಳಿಗೆ ಹನಿ ನೀರಾವರಿ ಯೋಜನೆಯ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಒದಗಿಸಿ ಇದರ ಸದುಪಯೋಗದಿಂದ ಹೆಚ್ಚುವರಿ ಇಳುವರಿ ಪಡೆದು ವ್ಯವಸಾಯಯಕ್ಕೆ ಉತ್ತೇಜನ ನೀಡುವುದು ಹಾಗೂ ನೀರಾವರಿ ಪ್ರದೇಶಗಳನ್ನು ಯಾವುದೇ ರೀತಿ ತಾರತಮ್ಯವಿಲ್ಲದೆ ಸಮನಾಗಿ ವಿದ್ಯುತ್, ಕುಡಿಯುವ ನೀರಿನ ಸೌಲಭ್ಯಗಳ ಬಗ್ಗೆ ಹೆಚ್ಚನ ಗಮನ ಹರಿಸುವುದು.
- ನಗರ ಮತ್ತು ಹಳ್ಳಿಗಳ ಪ್ರದೇಶ ಇವುಗಳಿಗೆ ಯಾವುದೇ ರೀತಿಯ ತಾರತಮ್ಯವಿಲ್ಲದೆ ಸಮಾನವಾಗಿ ವಿದ್ಯುತ್, ಕುಡಿಯುವ ನೀರಿನ ಸೌಲಭ್ಯ, ರಸ್ತೆ, ಸಾರಿಗೆ, ಆರೋಗ್ಯ ಸೇವೆ, ಇನ್ನಿತರೆ ಮೂಲ ಭೂತ ಸೌಲಭ್ಯಗಳ ಬಗ್ಗೆ ಹೆಚ್ಚಿನ ಗಮನಹರಿಸುವುದು.
- ಹಳ್ಳಿಯಲ್ಲಿನ ಮಹಿಳೆಯರಿಗೆ ಅತಿ ಹೆಚ್ಚಾಗಿ ಗರ್ಭಕೋಶದ ಖಾುಲೆಗಳಿಗೆ ತುತ್ತಾಗುತ್ತಿದ್ದು ಇದನ್ನು ತಡೆಗಟ್ಟಲು ಸರ್ಕಾರದಿಂದಲೇ ಒಂದು ಆರೋಗ್ಯ ಕಾರ್ಡನ್ನು ಇವರುಗಳಿಗೆ ಒದಗಿಸಿ ಉಚಿತ ಚಿಕಿತ್ಸೆ ನೀಡಲು ನೆರವು ಮಾಡುವುದು.
ನಿಧನ
ಬದಲಾಯಿಸಿರೈತ ಮುಖಂಡ, ಮೇಲುಕೋಟೆ ಕ್ಷೇತ್ರದ ಸರ್ವೋದಯ ಪಕ್ಷದ ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ವಿಧಿವಶರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಮೃತರ ಅಂತ್ಯಕ್ರಿಯೆಯನ್ನು ಬುಧವಾರದಂದು ಕ್ಯಾತನಹಳ್ಳಿಯಲ್ಲಿ ನೆರವೇರಿಸಲಾಗುತ್ತದೆ ಎಂದು ಪುತ್ರ ದರ್ಶನ್ ಹೇಳಿದ್ದಾರೆ. ಕಬಡ್ಡಿ ಪಂದ್ಯ ವೀಕ್ಷಿಸುತ್ತಿದ್ದ ಪುಟ್ಟಣ್ಣಯ್ಯ ಅವರು ಎದೆ ನೋವಿನಿಂದ ಕುಸಿದು ಬಿದ್ದಿದ್ದಾರೆ. ಅವರನ್ನು ತಕ್ಷಣವೇ ಮಿಮ್ಸ್ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ನಿಧನರಾಗಿದ್ದಾರೆ.[೪][೫][೬][೭]
ಉಲ್ಲೇಖ
ಬದಲಾಯಿಸಿ- ↑ https://www.thestate.news/current-affairs/2018/02/18/k-s-puttannaiah-no-more[ಶಾಶ್ವತವಾಗಿ ಮಡಿದ ಕೊಂಡಿ]
- ↑ https://www.thestate.news/videos/2018/02/19/documentar-on-farmers-leader-k-s-puttannaiah[ಶಾಶ್ವತವಾಗಿ ಮಡಿದ ಕೊಂಡಿ]
- ↑ http://agniastra.com/tag/%E0%B2%95%E0%B3%86-%E0%B2%8E%E0%B2%B8%E0%B3%8D-%E0%B2%AA%E0%B3%81%E0%B2%9F%E0%B3%8D%E0%B2%9F%E0%B2%A3%E0%B3%8D%E0%B2%A3%E0%B2%AF%E0%B3%8D%E0%B2%AF/[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಆರ್ಕೈವ್ ನಕಲು". Archived from the original on 2018-02-22. Retrieved 2018-02-20.
- ↑ http://kannada.asianetnews.com/news/farmer-leader-mla-ks-puttanayya-passes-away
- ↑ http://zeenews.india.com/kannada/karnataka/farmer-leader-legislator-ks-puttannaiah-is-no-more-3440
- ↑ http://bp9news.com/tmk-former-farmer-ks-puttannaiah-felicitated-by-raitha-sangha-and-elite/[ಶಾಶ್ವತವಾಗಿ ಮಡಿದ ಕೊಂಡಿ]