ಕೆಸುವಿನ ಗಡ್ಡೆ
ಕೇಸುವಿನ ಗೆಡ್ಡೆಯ ಬಗ್ಗೆ
ಬದಲಾಯಿಸಿಕೆಸುವಿನ ಗೆಡ್ಡೆ ದಕ್ಷಿಣ ಭಾರತದಲ್ಲಿ ಬಹುತೇಕ ಎಲ್ಲರಿಗೂ ಗೊತ್ತಿರುತ್ತದೆ. ಹಳ್ಳಿಗಳಲ್ಲಿ ಇದನ್ನು ಬೆಳೆಯುವುದಾದರೂ ನಗರದ ತರಕಾರಿ ಅಂಗಡಿಗಳಲ್ಲಿ ಇದು ಸಿಕ್ಕೇ ಸಿಗುತ್ತದೆ. ಹಳ್ಳಿಗಳಲ್ಲಿ ಬಹುತೇಕರ ಮನೆಗಳಲ್ಲಿ ಇರುವುದರಿಂದ ಇದರ ಬೆಲೆ ಅಷ್ಟಾಗಿ ಗೊತ್ತಿರುವುದಿಲ್ಲ,. ಇದರ ಸಿಪ್ಪೆ ಸುಲಿಯುವಾಗ ಕೆಲವೊಮ್ಮೆ ತುರಿಕೆ ಉಂಟಾಗುವುದು, ಆದರೆ ಬೇಯಿಸಿದ ಮೇಲೆ ಆಲೂಗಡ್ಡೆಯಂತೆ ಮೆತ್ತಗೆ ಇರುತ್ತದೆ. ಇದರ ಸಾರು, ಗೊಜ್ಜು ಹೆಚ್ಚಾಗಿ ಮಾಡಲಾಗುವುದು. ಈ ಕೆಸುವಿನ ಗೆಡ್ಡೆ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ. ನಾವಿಲ್ಲಿ ಕೆಸುವಿನ ಗೆಡ್ಡೆಯಲ್ಲಿರುವ ಅದ್ಭುತ ಆರೋಗ್ಯಕರ ಗುಣಗಳು.
ಕೆಸುವಿನ ಗಡ್ಡೆಯಲ್ಲಿರುವ ಪೋಷಕಾಂಶಗಳು
ಬದಲಾಯಿಸಿನಾರಿನಂಶ ಹಾಗೂ ಇತರ ಪೋಷಕಾಂಶಗಳು ಅಧಿಕವಿದೆ ಬೇಯಿಸಿದ ಒಂದು ಕಪ್ ಕೆಸುವಿನ ಗಡ್ಡೆಯಲ್ಲಿ 187 ಕ್ಯಾಲೋರಿ, ಅಧಿಕ ಕಾರ್ಬ್ಸ್ ಹಾಗೂ ಒಂದು ಗ್ರಾಂಗಿಂತಲೂ ಕಡಿಮೆ ಪ್ರೊಟೀನ್ ಹಾಗೂ ಕೊಬ್ಬಿನಂಶವಿರುತ್ತದೆ. ಇದರಲ್ಲಿ ಈ ಕೆಳಗಿನ ಪೋಷಕಾಂಶಗಳಿರುತ್ತದೆ ನಾರಿನಂಶ 6.7ಗ್ರಾಂ ದಿನದಲ್ಲಿ ಅವಶ್ಯವಿರುವ ಶೇ.30ರಷ್ಟು ಮ್ಯಾಂಗನೀಸ್,ವಿಟಮಿನ್ ಬಿ6 ವಿಟಮಿನ್ ಇ ಪೊಟಾಷ್ಯಿಯಂ ತಾಮ್ರ ರಂಜಕ ಮೆಗ್ನಿಷ್ಯಿಯಂ ವಿಟಮಿನ್ ಸಿ ವಿಟಮಿನ್ ಇ
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಬದಲಾಯಿಸಿಕೆಸುವಿನ ಗೆಡ್ಡೆಯಲ್ಲಿ ಪಿಷ್ಠ ಅಂಶ ಅಧಿಕವಿದ್ದರೂ ಇದರಲ್ಲಿ ಎರಡು ಬಗೆಯ ಕಾರ್ಬೋಹೈಡ್ರೇಟ್ಸ್ ಇದ್ದು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ. ಇದರಲ್ಲಿ ನಾರಿನಂಶದ ಕಾರ್ಬೋಹೈಡ್ರೇಟ್ಸ್ ಜೀರ್ಣವಾಗುವುದಿಲ್ಲ, ಆದ್ದರಿಂದಾಗಿ ದೇಹ ಇದನ್ನು ಹೀರಿಕೊಳ್ಳುವುದಿಲ್ಲ, ಹಾಗಾಗಿ ರಕ್ತದಲ್ಲಿನ ಸಕ್ಕರೆಯಂಶದಲ್ಲಿ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ. ಅಲ್ಲದೆ ಇದು ಜೀರ್ಣಕ್ರಿಯೆಯನ್ನು ನಿಧಾನವಾಗಿಸುವುದರಿಂದ ಇತರ ಕಾರ್ಬ್ಸ್ ಅನ್ನು ದೇಹ ನಿಧಾನಕ್ಕೆ ಹೀರಿಕೊಳ್ಳುತ್ತದೆ, ಇದರಿಂದಾಗಿ ಇದನ್ನು ತಿಂದ ಬಳಿಕ ದೇಹದಲ್ಲಿ ಸಕ್ಕರೆಯಂಶ ತುಂಬಾ ಹೆಚ್ಚಾಗುವುದಿಲ್ಲ. ಆದ್ದರಿಂದ ಕೆಸುವಿನ ಗೆಡ್ಡೆಯನ್ನು ಮಧುಮೇಹಿಗಳು ಕೂಡ ತಿನ್ನಬಹುದು ಎಂದು ಸಂಶೋಧನೆಗಳು ಹೇಳಿವೆ.
ಕೆಸುವಿನ ಗಡ್ಡೆಯಲ್ಲಿ ಹೃದಯದ ಕಾಯಿಲೆಗೆ ನಿವಾರಣೆ
ಬದಲಾಯಿಸಿಹೃದಯದ ಕಾಯಿಲೆಯ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ ಇದರಲ್ಲಿರುವ ನಾರಿನಂಶ ಹಾಗೂ ಪಿಷ್ಠದ ಅಂಶ ಹೃದಯ ಸಂಬಂಧಿ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಅಧಿಕ ನಾರಿನಂಶವಿರುವ ಆಹಾರವನ್ನು ತಿಂದಷ್ಟೂ ಹೃದಯ ಸಂಬಂಧಿ ಕಾಯಿಲೆಗಳು ಕಾಡುವುದು ಕಡಿಮೆ ಎಂದು ಸಂಶೋಧನೆಗಳು ಹೇಳಿವೆ. ಒಂದು ಸಂಶೋಧನೆ ಪ್ರಕಾರ ದಿನದಲ್ಲಿ ಸೇವಿಸಬೇಕಾದ ನಾರಿನಂಶಕ್ಕಿಂತ 10ಗ್ರಾಂ ಅಧಿಕ ನಾರಿನಂಶದ ಆಹಾರ ತಿಂದರೆ ಹೃದಯ ಸಂಬಂಧಿ ಕಾಯಿಲೆ ಕಾಡುವುದು ಶೇ. 17ರಷ್ಟು ಕಡಿಮೆಯಾಗುತ್ತದೆ ಎಂದು ಹೇಳಿದೆ. 1 ಕಪ್‌ನಷ್ಟು ಕೆಸುವಿನ ಗೆಡ್ಡೆ ಸೇವಿಸಿದರೆ 6ಗ್ರಾಂ ನಾರಿನಂಶ ದೊರೆಯುತ್ತದೆ ಅಂದರೆ ಆಲೂಗಡ್ಡೆಯಲ್ಲಿ ನಿರುವುದಕ್ಕಿಂತ ಎರಡು ಪಟ್ಟು ಅಧಿಕವಾಗಿದೆ. ಆದ್ದರಿಂದ ಇದು ಅತ್ಯುತ್ತಮವಾದ ನಾರಿನಂಶವಿರುವ ಆಹಾರವಾಗಿದೆ. ಭಾರತದಲ್ಲಿ ಬಹುತೇಕ ಶ್ವಾಸಕೋಶ ಕ್ಯಾನ್ಸರ್ ರೋಗಿಗಳು ಧೂಮಪಾನ ಮಾಡಿರೋದೆ ಇಲ್ಲ..!
ಕ್ಯಾನ್ಸರ್ ಕಣಗಳ ವಿರುದ್ಧವೂ ಹೋರಾಡುತ್ತದೆ
ಬದಲಾಯಿಸಿಗೆಡ್ಡೆ ಬೆಳೆಯುವ ಗಿಡಗಳಲ್ಲಿ ಪಾಲಿಪೀನೋಲ್ಸ್ ಅಂಶವಿದ್ದು, ಇದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೂ ಕ್ಯಾನ್ಸರ್ ತಡೆಗಟ್ಟುವ ಸಾಮಾರ್ಥ್ಯ ಹೊಂದಿದೆ. ಇದರಲ್ಲಿ ಈರುಳ್ಳಿ, ಸೇಬು ಇವುಗಳಲ್ಲಿ ಇರುವಂಥ quercetin ಎಂಬ ಪಾಲಿಫೀನೋಲ್ ಅಂಶವೂ ಇದೆ. ಈ ಅಂಶವು ದೇಹದಲ್ಲಿರುವ ಬೇಡದ ಕಶ್ಮಲ ಹಾಗೂ ರಾಸಾಯನಿಕಗಳನ್ನು ಹೊರಹಾಕುವುದರಿಂದ ಕ್ಯಾನ್ಸರ್ ಅಪಾಯ ಕಡಿಮೆ.
ತೂಕ ಇಳಿಕೆಗೆ ಸಹಕಾರಿ
ಬದಲಾಯಿಸಿನಾರಿನಂಶ ಅಧಿಕವಿರುವ ತರಕಾರಿಗಳು ತೂಕ ಇಳಿಕೆಗೆ ತುಂಬಾನೇ ಸಹಕಾರಿ. ಯಾರು ತೂಕ ಕಡಿಮೆಮಾಡಬೇಕೆಂದು ಬಯಸುತ್ತಾರೋ ಅವರು ತಮ್ಮ ಆಹಾರಕ್ರಮದಲ್ಲಿ ಅತ್ಯಧಿಕ ನಾರಿನಂಶವಿರುವ ಆಹಾರ ಸೇರಿಸಬೇಕು. ನಾರಿನಂಶವಿರುವ ಆಹಾರ ನಿಧಾನಕ್ಕೆ ಜೀರ್ಣವಾಗುವುದರಿಂದ ಬೇಗನೆ ಹಸಿವು ಉಂಟಾಗುವುದಿಲ್ಲ, ಇದರಿಂದ ದಿನದಲ್ಲಿ ತೆಗೆದುಕೊಳ್ಳುವ ಕ್ಯಾಲೋರಿ ಪ್ರಮಾಣವೂ ಕಡಿಮೆಯಾಗುತ್ತದೆ ಹೀಗಾಗಿ ತೂಕ ಇಳಿಕೆಗೆ ಸಹಕಾರಿಯಾಗಿದೆ. ಹೊಟ್ಟೆಯ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು ಇದರಲ್ಲಿರುವ ಪಿಷ್ಠ ಅಂಶ ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಕೆಸುವಿನ ಗೆಡ್ಡೆ ತಿಂದಾಗ ನಮ್ಮ ದೇಹದವು ಅದರಲ್ಲಿರುವ ನಾರಿನಂಶವನ್ನು ಜೀರ್ಣಿಸಿಕೊಳ್ಳುವುದಿಲ್ಲ, ಶದ್ದರಿಂದ ಅದು ನಮ್ಮ ಜಠರದಲ್ಲಿ ಉಳಿದು ನಂತರ ಕರುಳನ್ನು ತಲುಪಿ ಆರೋಗ್ಯಕರ ಬ್ಯಾಕ್ಟಿರಿಯಾ ಉತ್ಪತ್ತಿಗೆ ಸಹಕಾರಿಯಾಗಿದೆ. ಅಲ್ಲದೆ ಇದು ಕರುಳಿನ ಕ್ಯಾನ್ಸರ್ ಹಾಗೂ ಉರಿಯೂತ ತಪ್ಪಿಸುತ್ತದೆ.
ಕೆಸುವಿನ ಗೆಡ್ಡೆ ಗೊಜ್ಜು
ಬದಲಾಯಿಸಿಬೇಕಾಗುವ ಸಾಮಗ್ರಿ
ಬದಲಾಯಿಸಿಕೆಸುವಿನ ಗಡ್ಡೆ 5-6, ಬ್ಯಾಡಗಿ ಮೆಣಸು 8, ಎಣ್ಣೆ, ಕೊತ್ತಂಬರಿ ಬೀಜ- 2 ಚಮಚ, ಕಡ್ಲೆ ಬೇಳೆ- 2 ಚಮಚ, ಮೆಂತ್ಯೆ- 1 ಚಮಚ, ಜೀರಿಗೆ -1 ಚಮಚ, ಸಾಸಿವೆ, ಅರಿಶಿನ- 1 ಚಮಚ, ಇಂಗು, ಉಪ್ಪು ರುಚಿಗೆ ತಕ್ಕಷ್ಟು, ತೆಂಗಿನ ತುರಿ – ಅರ್ಧ ಕಪ್, ಹುಣಸೆ ಹಣ್ಣು- ಲಿಂಬೆ ಗಾತ್ರ, ಬೆಲ್ಲ ರುಚಿಗೆ ತಕ್ಕಷ್ಟು, ಕರಿಬೇವು.
ಮಾಡುವ ವಿಧಾನ
ಬದಲಾಯಿಸಿಕೆಸುವಿನ [೧] ಗೆಡ್ಡೆಯನ್ನು ತೊಳೆದು ಕುಕ್ಕರ್‌ನಲ್ಲಿ ಎರಡು ವಿಷಲ್ ಕೂಗಿಸಿ. ಬೆಂದ ಕೆಸುವಿನ ಗೆಡ್ಡೆಯ ಸಿಪ್ಪೆ ತೆಗೆದು ಎರಡು ಭಾಗ ಮಾಡಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಕಡ್ಲೆಬೇಳೆ, ಉದ್ದಿನ ಬೇಳೆ, ಮೆಂತ್ಯೆ, ಜೀರಿಗೆ, ಸಾಸಿವೆ, ಮೆಣಸಿನಕಾಯಿಯನ್ನು ಒಂದೊಂದೇ ಹಾಕಿ ಫ್ರೈ ಮಾಡುತ್ತಾ . ಸ್ವಲ್ಪ ಫ್ರೈ ಆದ ಮೇಲೆ, ಕರಿಬೇವು ಹಾಕಿ ಹೊಂಬಣ್ಣ ಬರುವವರೆಗೆ ಫ್ರೈ ಮಾಡಿ. ಈಗ ಕೊತ್ತಂಬರಿ ಬೀಜ ಹಾಕಿ. ನಂತರ ಮಿಕ್ಸಿಗೆ ಕಾಯಿತುರಿ ಹಾಕಿ, ಫ್ರೈ ಮಾಡಿದ ಮಸಾಲೆ ಮಿಕ್ಸ್ ಮಾಡಿ, ನೀರು ಹಾಕಿ ಸ್ವಲ್ಪ ತರಿತರಿಯಾಗಿ ರುಬ್ಬಿ. ಈಗ ಮಸಾಲೆ ರೆಡಿ. ಇನ್ನೊಂದು ಬಾಣಲೆಗೆ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿ ಇದಕ್ಕೆ ಬಿಡಿಸಿಟ್ಟ ಕೆಸುವಿನ ಗೆಡ್ಡೆ ಹಾಕಿ ಫ್ರೈ ಮಾಡಿ. ಫ್ರೈ ಮಾಡುವಾಗಲೇ ಅರಿಶಿನ ಮತ್ತು ಹುಣಸೆಹಣ್ಣು ಹಾಕಿ. ಕೆಸುವಿನ ಲೋಳೆ ಅಂಶ ಹೋಗುವವರೆಗೆ ಫ್ರೈ ಆಗಲಿ. ನಂತರ ರುಬ್ಬಿದ ಮಸಾಲೆ, ನೀರು ಹಾಕಿ. ಹದ ಸ್ವಲ್ಪ ಗಟ್ಟಿಯಾಗೇ ಇರಲಿ. ಈಗ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ. ಸಾಸಿವೆ ಇಂಗಿನ ಒಗ್ಗರಣೆ ಕೊಡಬಹುದು.
ಉಲ್ಲೇಖ
ಬದಲಾಯಿಸಿ- ↑ "Kesuvina gedde gojju ( ಕೆಸುವಿನ ಗೆಡ್ಡೆ ಗೊಜ್ಜು )". 13 June 2013.