ಕೆವಿನ್ ಕಾರ್ಟರ್

ಕೆವಿನ್ ಕಾರ್ಟರ್

ಬದಲಾಯಿಸಿ

ಕೆವಿನ್ ಕಾರ್ಟರ್ ದಕ್ಷಿಣ ಆಫ್ರಿಕಾದ ಛಾಯಾಚಿತ್ರಕಾರ ಮತ್ತು ಬ್ಯಾಂಗ್-ಬ್ಯಾಂಗ್ ಕ್ಲಬ್ ಸದಸ್ಯರಾಗಿದ್ದರು.ಅವರು ಸೂಡಾನ್ನಲ್ಲಿ 1993 ರ ಕ್ಷಾಮವನ್ನು ಚಿತ್ರಿಸುವ ಛಾಯಾಚಿತ್ರಕ್ಕಾಗಿ ಪುಲಿಟÐರ್ ಪ್ರಶಸ್ಥಿಯನ್ನು ಸ್ವೀಕರಿಸಿದರು. ಅವರು ತಮ್ಮ 33 ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಕಾರ್ಟರ್ ಅವರ ಕಥೆಯನ್ನು 2010 ಅ ಚಲನಚಿತ್ರ ಬ್ಯಾಂಗ್-ಬ್ಯಾಂಗ್ ಕ್ಲಬ್ನಲ್ಲಿ ಚಿತ್ರಿಸಲಾಗಿದೆ. ಇದರಲಿ ಆತನ ಪಾತ್ರದಲ್ಲಿ ಟೇಲರ್ ಕಿಟ್ಶ್ ನಟಿಸಿದ್ದಾರೆ.

ಆರಂಭಿಕ ಜೀವನ

ಬದಲಾಯಿಸಿ

ಕೆವಿನ್ ಕಾರ್ಟರ್ ಅವರು ದಕ್ಷಿಣ ಆಫ್ರಿಕಾದ ಜೋಹಾನ್ಸ್ಬಗ್ರ್ನಲ್ಲಿ ಜನಿಸಿದರು. ನೆರೆಹೊರೆಯವರಾದ ಮಧ್ಯಮವರ್ಗದ ಬಿಳಿಯರ ಜೊತೆ ಬೆಳೆದರು. ಮಗುವಾಗಿದ್ದಾಗ, ಆ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದ ಕರಿಯರನ್ನು ಬಂಧಿಸಲು ಪೊಲೀಸ್ ದಾಳಿಗಳನ್ನು ಅವರು ಸಾಂದರ್ಭಿಕವಾಗಿ ನೋಡಿದರು. ವರ್ಣಭೇದ ನೀತಿ ವಿರುದ್ಧ ಹೋರಾಡುವ ಬಗ್ಗೆ ಕ್ಯಾಥೋಲಿಕ್ ಕುಟುಂಬದವರು ಹೇಗೆ ಉದಾರವಾದಿಗಳು ಎಂದು ತಮ್ಮ ಪೋಷಕರನ್ನು ಪ್ರಶ್ನಿಸಿದರು. ಪ್ರೌಢಶಾಲೆ ಶಿಕ್ಷಣದ ನಂತರ ಕಾರ್ಟರ್ ತನ್ನ ಅಧ್ಯಯನದಿಂದ ಹೊರಬಂದು ಸೈನ್ಯದಲ್ಲಿ ಔಷಧಿಕಾರರಾಗಲು ಅತ್ತ ತೆರಳಿದರು. ಪದಾತಿ ದಳದಿಂದ ತಪ್ಪಿಸಿಕೊಳ್ಳಲು ಅವರು ಏರ್‍ಫೋರ್ಸ್‍ನಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದರು. 1980 ರ ಕಪ್ಪು ಅವ್ಯವಸ್ಥೆಯಲ್ಲಿ ನಡೆದ ಹಾಲ್ ವೇಟರ್ ಅವಮಾನಕ್ಕೆ ಸಾಕ್ಷಿಯಾದರು. ಅಲ್ಲಿ ಅವರು ವೇಟರ್ ನ್ನು ಸಮರ್ಥಿಸಿಕೊಂಡರು. ಅದರ ಪರಿಣಾಮವಾಗಿ ಕಾರ್ಟರ್ ನ್ನು ಇತರ ಸೇವಕರು ಹಲ್ಲೆ ನಡೆಸಿದರು. ಹಾಗೂ ರಜೆಯಲ್ಲೂ ಕೆಲಸ ಮಾಡುವಂತಹ ಶಿಕ್ಷೆಗೆ ಒಳಪಟ್ಟರು. ನಂತರ ಅವರು ಡೇವಿಡ್ ಹೆಸರಿನಲ್ಲಿ ರೇಡಿಯೋ ಡಿಸ್ಕ್ ಜಾಕಿಯಾಗಿ ಹೊಸ ಜೀವನವನ್ನು ಪ್ರಾರಂಭಿಸಿದರು. ಅದೂ ಅವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕಷ್ಟಕರವಾಗಿದೆ ಎಂದು ಸಾಬೀತಾಯಿತು. ಇದಾದ ಕೆಲವೇ ದಿನಗಳಲ್ಲಿ ಕಾರ್ಟರ್ ಅವರು ತಮ್ಮ ಮಿಲಿಟರಿ ಸೇವೆಯ ಉಳಿದ ಭಾಗವನ್ನು ಪೂರೈಸಲು ನಿರ್ಧರಿಸಿದರು. 1983 ರಲ್ಲಿ ಪ್ರಿಟೋರಿಯಾದಲ್ಲಿ ನಡೆದ ಚರ್ಚ್ ದಾಳಿಯನ್ನು ವೀಕ್ಷಿಸಿದ ನಂತರ ಅವರು ಸುದ್ದಿ ಛಾಯಾಗ್ರಾಹಕ ಮತ್ತು ಪತ್ರಕರ್ತರಾಗಲು ನಿರ್ಧರಿಸಿದರು.

1983 ರಲ್ಲಿ ಕಾರ್ಟರ್ ಅವರು ವಾರಾಂತ್ಯದ ಕ್ರೀಡಾ ಛಾಯಾಚಿತ್ರಕಾರರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. 1984 ರಲ್ಲಿ ವೃತ್ತಿಜೀವನಕ್ಕಾಗಿ ಜೋಹಾನ್ಸ್‍ಬರ್ಗ್ ಗೆ ತೆರಳಲಿದರು. ಅಲ್ಲಿ ಅವರು ವರ್ಣಭೇದ ನೀತಿಯ ಕ್ರೂರತೆಯನ್ನು ಬಹಿರಂಗಪಡಿಸಿದರು. 1980 ರ ಮಧ್ಯಭಾಗದಲ್ಲಿ ದಕ್ಷಿಣ ಆಫ್ರಿಕಾದ ಕಪ್ಪು ಆಫ್ರಿಕನ್ನರ ಸಾರ್ವಜನಿಕ ಮರಣದಂಡನೆಯನ್ನು ಚಿತ್ರೀಕರಿಸಿದವರಲ್ಲಿ ಕಾರ್ಟರ್ ಮೊದಲಿಗರು. ನಂತರ ಅವರು ಆ ಚಿತ್ರಗಳ ಕುರಿತು ಮಾತನಾಡಿದರು. ಅವರು ಏನು ಮಾಡುತ್ತಿದ್ದಾರೆಂದು ನಾನು ದಿಗಿಲುಗೊಂಡಿದ್ದೇನೆ. ಆದರೆ ಜನರು ಆ ಚಿತ್ರಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಅಂತಹ ಭಯಾನಕ ಕೃತ್ಯಗಳನ್ನು ಮಾಡುವುದನ್ನು ಚಿತ್ರೀಕರಿಸಿದ ನನ್ನ ಕ್ರಮಗಳು ಕೆಟ್ಟದಲ್ಲ ಎಂದು ಅರಿತುಕೊಂಡೆನು.

ಸುಡಾನ್ ನಲ್ಲಿ

ಬದಲಾಯಿಸಿ

ಮಾರ್ಚ್ 1993 ರಲ್ಲಿ ಸುಡಾನ್ ನ ಯು ಎನ್ ಆಪರೇಷನ್ ಲೈಫ್‍ಲೈನ್ ನ ರಾಬರ್ಟ ಹ್ಯಾಡ್ಲಿ , ಜುವಾವ್ ಸಿಲ್ವಾಗೆ ಸುಡಾನ್ ಗೆ ಪ್ರಯಾಣಿಸಲು ಅವಕಾಶ ನೀಡಿದರು. ಹಾಗೂ ಆ ಪ್ರದೇಶದಲ್ಲಿ ಬಂಡುಕೋರರೊಂದಿಗೆ ನಡೆದ ನಾಗರಿಕ ಯುದ್ಧದ ಸಮಯದಲ್ಲಿ ಉಂಟಾದ ಕ್ಷಾಮವನ್ನು ವರದಿ ಮಾಡುವ ಜವಾಬ್ದಾರಿಯನ್ನೂ ನೀಡಿದರು. ಅದನ್ನು ಸಿಲ್ವಾ ಕಾರ್ಟರ್ ಗೆ ವರ್ಗಾಯಿಸಿದರು. ಇದು ಸ್ವತಂತ್ರ್ಯ ವೃತ್ತಿಜೀವನವನ್ನು ವಿಸ್ತರಿಸಲು ಮತ್ತು ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸುವ ಒಂದು ಮಾರ್ಗವಾಗಿ ಕೆಲಸ ಮಾಡಲು ಅವಕಾಶವನ್ನು ನೀಡಿತು. ಸುಡಾನ್ ನ ಆಪರೇಷನ್ ಲೈಫ್‍ಲೈನ್ ಹಣಕಾಸಿನ ಸಮಸ್ಯೆಯನ್ನು ಹೊಂದಿತ್ತು. ಆದುದರಿಂದ ಯು ಎನ್ ಪ್ರದೇಶದ ಕ್ಷಾಮ ಮತ್ತು ಅಲ್ಲಿನ ಅಗತ್ಯತೆಗಳನ್ನು ಪ್ರಚಾರ ಮಾಡುವುದು ಸಂಸ್ಥೆಗಳಿಗೆ ಹಣಕಾಸಿನ ನೆರವು ಒದಗಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿತ್ತು. ಸಿಲ್ವಾ ಮತ್ತು ಕಾರ್ಟರ್ ಗೆ ರಾಜಕೀಯದಲ್ಲಿ ಆಸಕ್ತಿಯಿರಲಿಲ್ಲ. ಅವರು ಕೇವಲ ಛಾಯಾಚಿತ್ರ ತೆಗೆಯುವುದನ್ನು ಅಪೇಕ್ಷಿಸಿದ್ದರು. ಸುಡಾನ್‍ನಲ್ಲಿನ ಹೊಸ ಹೋರಾಟವು ಸಿಲ್ವಾ ಮತ್ತು ಕಾರ್ಟರ್ ನಗರವನ್ನು ಅನಿರ್ದಿಷ್ಟವಾಗಿ ಕಾಯುವಂತೆ ಒತ್ತಾಯಿಸಿತು. ದಕ್ಷಿಣ ಸುಡಾನ್ ನ ಜುಬಾಕ್ಕೆ ಯು ಎನ್ ಜೊತೆ ಒಂದು ದಿನದ ಪ್ರವಾಸ ಮಾಡಿದ ಕಾರ್ಟರ್ ಆ ಸಮಯದಲ್ಲಿ ಆ ಪ್ರದೇಶಕ್ಕೆ ಆಹಾರ ನೆರವು ನೀಡುವ ದೋಣಿಯ ಛಾಯಾಚಿತ್ರವನ್ನು ಚಿತ್ರಿಸಿದರು. ಶೀಘ್ರದಲ್ಲಿಯೇ ಯು ಎನ್ ಅಯೋದ್ ಗೆ ಆಹಾರ ನೆರವು ನೀಡಲು ಬಂಡಾಯ ಗುಂಪಿನಿಂದ ಅನುಮತಿ ಪಡೆದುಕೊಂಡಿತು. ಸಿಲ್ವಾ ಮತ್ತು ಕಾರ್ಟರ್ ನ್ನು ಅಯೋದ್ ಗೆ ಆಹ್ವಾನ ದೊರೆಯಿತು. ಅಯೋದ್ ನಲ್ಲಿ ಒಮ್ಮೆ ಕಾರ್ಟರ್ ಮತ್ತು ಸಿಲ್ವಾ ಕ್ಷಾಮದ ಬಲಿಪಶುಗಳ ಕುರಿತ ತಮ್ಮ ಛಾಯಚಿತ್ರಗಳನ್ನು ವೀಕ್ಷಿಸುತ್ತಿದ್ದರು. ಆ ಸಂದರ್ಭದಲ್ಲಿ ತಾವು ನೋಡುತ್ತಿದ್ದ ಆಘಾತಕಾರಿ ಘಟನೆಗಳನ್ನು ಚರ್ಚಿಸಿದರು. ಅವರು ಬಂಡಾಯ ಸೈನಿಕರೊಂದಿಗೆ ಕೈ ಜೋಡಿಸಿದರು. ಇಂಗ್ಲೀಷ್ ಭಾಷೆ ಮಾತನಾಡದ ಸೈನಿಕರಲ್ಲಿ ಒಬ್ಬರಿಗೆ ಕಾರ್ಟರ್ ಧರಿಸುತ್ತಿದ್ದ ಕೈ ಗಡಿಯಾರವು ಬಹಳ ಇಷ್ಟವಾಗಿತ್ತು. ಇದನ್ನು ಅರಿತ ಕಾರ್ಟರ್ ಅವರಿಗೆ ಕೈಗಡಿಯಾರವನ್ನು ಉಡುಗೊರೆಯಾಗಿ ನೀಡಿದರು. ಸೈನಿಕರು ಅಂಗರಕ್ಷಕರಾಗಿಯೂ ತಮ್ಮ ಸೇವೆ ಸಲ್ಲಿಸಿದರು.

ಸುಡಾನ್ ನಲ್ಲಿ ಪುಲಿಟ್ಜರ್ ಪ್ರಶಸ್ತಿ ಛಾಯಾಚಿತ್ರ

ಬದಲಾಯಿಸಿ

ಹಸಿವಿನಿಂದ ತೀವ್ರ ಕಂಗೆಟ್ಟಿದ್ದ ಪುಟ್ಟ ಹುಡುಗಿಯೊಬ್ಬಳು ನೆಲದ ಮೇಲೆ ಬಿದ್ದಿದ್ದಳು. ಹತ್ತಿರದಲ್ಲೇ ಇದ್ದ ರಣಹದ್ದೊಂದು ಕುಕ್ಕಿ ತಿನ್ನುವಂತೆ ಕಾಯುತ್ತಿತ್ತು. ಕಾರ್ಟರ್ ಆ ಸನ್ನಿವೇಶವನ್ನು ಚಿತ್ರೀಕರಿಸಿದರು. ಆ ಬಳಿಕ ಸಿಲ್ವಾಗೆ, ಭೀಕರ ಪರಿಸ್ಥಿತಿಯಿಂದಾಗಿ ತೀವ್ರ ಆಘಾತಕ್ಕೊಳಗಾಗಿದ್ದೆ, ಆ ಸಂದರ್ಭದಲ್ಲಿ ದಿಕ್ಕೇ ತೋಚದಂತಾಗಿ ಛಾಯಾಚಿತ್ರವನ್ನು ತೆಗೆದೆ ಹಾಗೂ ರಣಹದ್ದನ್ನು ಓಡಿಸಿದೆ ಎಂದು ವಿವರಿಸಿದರು. ಕೆಲವು ನಿಮಿಷಗಳ ಬಳಿಕ ಕಾರ್ಟರ್ ಮತ್ತು ಸಿಲ್ವಾ ಯು ಎನ್ ವಿಮಾನ ಹತ್ತಿ ಅಯೋದ್ ನಿಂದ ಹೊರಟರು. ನ್ಯೂಯಾರ್ಕ್ ಟೈಮ್ಸ್ ಗೆ ಮಾರಾಟವಾದ ಆ ಛಾಯಾಚಿತ್ರವು 1993 ಮಾರ್ಚ್ 26 ರಂದು ಮೊದಲು ಪ್ರಕಟಗೊಂಡು ವಿಶ್ವದಾದ್ಯಂತ ಸಂಘಟಿತವಾಯಿತು. ಹುಡುಗಿಯ ಭವಿಶ್ಯವನ್ನು ಕೇಳಲು ನೂರಾರು ಜನ ಪತ್ರಿಕೆಗೆ ಸಂಪರ್ಕಿಸಿದರು. ಕಾರ್ಟರ್ ಪ್ರಕಾರ ರಣಹದ್ದು ಹಾರಿಹೋದ ನಂತರ ಹುಡುಗಿಯು ಸಾಕಷ್ಟು ಚೇತರಿಸಿಕೊಂಡಿರಬಹುದು ಆದರೆ ಅವಳು ಯು ಎನ್ ಆಹಾರ ಕೇಂದ್ರಕ್ಕೆ ತಲುಪಿರುವುದು ಖಚಿತಗೊಂಡಿಲ್ಲ ಎಂದು ಪತ್ರಿಕೆ ಹೇಳಿದೆ. ಈ ಛಾಯಾಚಿತ್ರವು 1994 ರ ಎಪ್ರಿಲ್ ನಲ್ಲಿ ಪುಲಿಟೆÐರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. 2011 ರಲ್ಲಿ ಆ ಮಗುವಿನ ತಂದೆ ಮಗು ನಿಜವಾಗಿ ಕೊಂಗ್ ನ್ಯೋಂಗ್ ಎಂಬ ಹೆಸರಿನ ಹುಡುಗ ಎಂಬುದನ್ನು ಬಹಿರಂಗಪಡಿಸಿದರು. ಹಲವು ಕಾಲಗÀಳಷ್ಟು ಯು ಎನ್ ಆಹಾರ ಕೇಂದ್ರದ ಆರೈಕೆಯಲ್ಲಿದ್ದ ನ್ಯೋಂಗ್ 2007 ರಲ್ಲಿ ಜ್ವರ ಬಾಧಿಸಿದ ಕಾರಣದಿಂದ ಮರಣ ಹೊಂದಿದನು.

ಇತರ ಕೆಲಸ

ಬದಲಾಯಿಸಿ

1994 ರ ಮಾರ್ಚ್ ನಲ್ಲಿ ದಕ್ಷಿಣ ಆಫ್ರಿಕಾದ ಚುನಾವಣೆಗೆ ಮೊದಲು ತಮ್ಮ ಅನಧಿಕೃತ ಕೆಲಸಗಳಿಂದ ಗುರುತಿಸಿಕೊಂಡ ಮೂವರು ಆಫ್ರಿಕನ್ನರು, ವೀಸ್ಟ್ರ್ಯಾಂಡ್ಸ್ ಬೀವಿಂಗ್ ಸದಸ್ಯರ ಛಾಯಾಚಿತ್ರವನ್ನು ಚಿತ್ರಿಸಿದರು. ಸುಮಾರು ಅರ್ಧದಷ್ಟು ಘಟನೆಯ ನಂತರ ಕಾರ್ಟರ್ ತಪ್ಪಿಸಿಕೊಂಡರು. ಆದರೂ ಪ್ರಪಂಚದಾದ್ಯಂತ ಪತ್ರಿಕೆಯಲ್ಲಿ ಪ್ರಕಟಿಸುವಷ್ಟು ಚಿತ್ರಗಳು ಲಭಿಸಿದವು.

ಪ್ರಶಸ್ತಿಗಳು

ಬದಲಾಯಿಸಿ

1994 ರ ಎಪ್ರಿಲ್ ನಲ್ಲಿ ಸುಡಾನ್ ಕ್ಷಾಮದಿಂದ ತತ್ತರಿಸಿ ಹೋಗಿದ್ದ ಮಗುವಿನ ಮೇಲೆ ರಣಹದ್ದಿನ ದೃಷ್ಟಿಯನ್ನು ಬಿಂಬಿಸುವ ಛಾಯಾಚಿತ್ರಕ್ಕೆ ಪುಲಿಟೆÐರ್ ಪ್ರಶಸ್ತಿ ಲಭಿಸಿತು.

1994 ಜುಲೈ 27 ರಂದು ಕಾರ್ಟರ್ ತಾವು ಬಾಲ್ಯದಲ್ಲಿ ಆಡುತ್ತಿದ್ದ ಪ್ರದೇಶ, ಫೀಲ್ಡ್ ಮತ್ತು ಸ್ಟಡೀ ಸೆಂಟರ್ ಬಳಿಯಲ್ಲಿರುವ ಪಾರ್ಕಮೋರ್ ಗೆ ವಾಹನ ಚಲಾಯಿಸಿದರು. ತಮ್ಮ ವಾಹನದ ನಿಷ್ವಾಸ ಕೊಳವೆಗೆ ಒಂದು ಮೆದುಗೊಳವೆಯನ್ನು ಟ್ಯಾಪ್ ಮಾಡುವ ಮೂಲಕ ಆತ್ಮಹತೈ ಮಾಡಿಕೊಂಡರು. ಅವರು ತಮ್ಮ 33 ನೇ ವಯಸ್ಸಿನಲ್ಲಿ ಕಾರ್ಬನ್ ಮೋನೋಕ್ಸೈಡ್ ವಿಷದಿಂದಾಗಿ ಮೃತಪಟ್ಟರು. ಕೊನೆಯಲಿ ಕ್ಷಣದಲ್ಲಿ ಕಾರ್ಟರ್ ಆತ್ಮಹತ್ಯಾ ಟಿಪ್ಪಣಿ ಬರೆದಿದ್ದರು. ನನ್ನನ್ನು ನಿಜವಾಗಿಯೂ ಕ್ಷಮಿಸಿ, ಸಂತೋಷವನ್ನು ಕಳೆದುಕೊಳ್ಳುವ ಹಂತಕ್ಕೆ ಜೀವನದ ನೋವು ಅತಿಕ್ರಮಿಸುತ್ತಿದೆ. ಸಂತೋಷವನ್ನು ಕಳೆದುಕೊಂಡಿದ್ದೇನೆ. ಖಿನ್ನತೆ, ಫೋನ್ ಇಲ್ಲದ ದುಃಖ, ಮನೆ ಬಾಡಿಗೆಗಾಗಿ ಹಣವಿಲ್ಲ, ಮಕ್ಕಳಿಗೆ ಆರ್ಥಿಕ ಸಹಾಯ ಮಾಡಲು ಹಣದ ಅವಶ್ಯಕತೆಯಿದೆ. ಎಲ್ಲಾ ಹಂತದಲ್ಲೂ ಹಣದ ಅವಶ್ಯಕತೆ ಎದ್ದು ಬರುತ್ತಿದೆ. ಹತ್ಯೆ ಮತ್ತು ಶವಗಳು, ಕೋಪ ಮತ್ತು ನೋವಿನ ನೆನಪುಗಳು, ಹಸಿವು ಮತ್ತು ಗಾಯಗಳಿಂದ ನರಳುವ ಮಕ್ಕಳು, ಆಗಾಗ್ಗೆ ಪೊಲೀಸ್, ಕೊಲೆಗಾರ, ಮರಣದಂಡನೆ ಮುಂತಾದವುಗಳಿಂದ ಬೇಸತ್ತು ಆತ್ಮಹತ್ಯೆಗೈಯುತಿದ್ದೇನೆ. ಮತ್ತು ಇತ್ತೀಚೆಗೆ ಮೃತಪಟ್ಟ ಕೆನ್ ಒಸ್ಟಬ್ರ್ರೋಕ್ ನ್ನು ಸೇರಲು ಅದೃಷ್ಟವಂತನಾಗಿರುತ್ತೇನೆ. ಕೆವಿನ್ ಕಾರ್ಟರ್ ರ ಜೀವನ ಮತ್ತು ಆತ್ಮಹತ್ಯೆಯಿಂದ ಪ್ರೇರಣೆಗೊಂಡು 1996 ರಲ್ಲಿ ಮಾನಿಕ್ ಸ್ಟ್ರೀಟ್ ಪ್ರೀಚರ್ಸ್ ರಾಕ್ ಬ್ಯಾಂಡ್ ಅವರ ನಾಲ್ಕನೇ ಆಲ್ಬಮ್ ಎವೆರಿಥಿಂಗ್ ಮಸ್ಟ್ ಗೋ ದಿಂದ ಕೆವಿನ್ ಕಾರ್ಟರ್ ಹಾಡು ಆಯ್ಕೆಗೊಂಡಿತು.

ಉಲ್ಲೇಖಗಳು

ಬದಲಾಯಿಸಿ

<refference/>