ಕೆರ್ ಪರಿಣಾಮ (ವಿದ್ಯುದ್ಯುತಿ ವಿದ್ಯಮಾನ) ಎಂದರೆ ವಿದ್ಯುತ್‌ಕ್ಷೇತ್ರವನ್ನು ಪ್ರಯೋಗಿಸಿದಾಗ ವಸ್ತುವೊಂದರ ವಕ್ರೀಭವನಾಂಕ ಬದಲಾಗುವಿಕೆ (ಫೋಟೊಆಪ್ಟಿಕ್ ಫಿನಾಮಿನನ್). ಸ್ಕಾಟಿಷ್ ಭೌತವಿಜ್ಞಾನಿ ಜಾನ್ ಕೆರ್ (1824-1907) ಆವಿಷ್ಕರಿಸಿದ (1875) ವಿದ್ಯಮಾನ ಇದಾದ್ದರಿಂದ ಕೆರ್ ಪರಿಣಾಮ ಎಂದು ಹೆಸರು.[೧][೨][೩]

ಚೋದಿಸಿದ ವಕ್ರೀಭವನಾಂಕದ ಬದಲಾವಣೆ ವಿದ್ಯುತ್ ಕ್ಷೇತ್ರದ ವರ್ಗಕ್ಕೆ ಅನುಲೋಮಾನುಪಾತದಲ್ಲಿರುತ್ತದೆ. ಎಲ್ಲ ವಸ್ತುಗಳು ಕೆರ್ ಪರಿಣಾಮವನ್ನು ತೋರಿಸುತ್ತವೆ, ಆದರೆ ಕೆಲವು ದ್ರವಗಳು ಇತರ ದ್ರವಗಳಿಗಿಂತ ಇದನ್ನು ಹೆಚ್ಚು ಪ್ರಬಲವಾಗಿ ತೋರಿಸುತ್ತವೆ.

ಉಪಯೋಗಗಳು ಬದಲಾಯಿಸಿ

ಇದರಿಂದ ಬೆಳಕಿನ ಮಾಡ್ಯುಲನ (ನಿಶ್ಚಿತ ಆವೃತ್ತಿಗೆ ಅನುಗುಣವಾಗಿ ಬೆಳಕಿನ ಬದಲಾವಣೆ) ಸಾಧ್ಯ. ಮಾಹಿತಿ ಸಾಗಣೆಯಲ್ಲಿ ಇದರ ಉಪಯೋಗ ಉಂಟು.

ಉಲ್ಲೇಖಗಳು ಬದಲಾಯಿಸಿ

  1. Weinberger, P. (2008). "John Kerr and his Effects Found in 1877 and 1878" (PDF). Philosophical Magazine Letters. 88 (12): 897–907. Bibcode:2008PMagL..88..897W. doi:10.1080/09500830802526604. S2CID 119771088.
  2. Kerr, John (1875). "A new relation between electricity and light: Dielectrified media birefringent". Philosophical Magazine. 4. 50 (332): 337–348. doi:10.1080/14786447508641302.
  3. Kerr, John (1875). "A new relation between electricity and light: Dielectrified media birefringent (Second paper)". Philosophical Magazine. 4. 50 (333): 446–458. doi:10.1080/14786447508641319.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: