ಕೆಣಕು ಮಾತು ("Sarcasm") ಎಂದರೆ ತೀಕ್ಷ್ಣವಾದ, ಕಹಿ, ಅಥವಾ ಮನನೋಯಿಸುವ ಹೇಳಿಕೆ ಅಥವಾ ಟೀಕೆ; ಕಹಿಯಾದ ಮೂದಲಿಕೆ ಅಥವಾ ಹಂಗಿಸುವ ಮಾತು.[] ಕೆಣಕು ಮಾತು ಉಭಯಭಾವವನ್ನು ಬಳಸಬಹುದು, ಆದರೆ ಕೆಣಕು ಮಾತು ವ್ಯಂಗಾತ್ಮಕವಿರಬೇಕೆಂದು ಅಗತ್ಯವೇನಿಲ್ಲ. ವಾಕ್ ಭಾಷೆಯಲ್ಲಿ ಅತ್ಯಂತ ಗಮನಿಸಬಹುದಾದ ಕೆಣಕು ಮಾತನ್ನು ಮುಖ್ಯವಾಗಿ ಅದನ್ನು ಮಾತನಾಡಲಾಗುವ ಸ್ಥಾಯಿ ಬದಲಾವಣೆಯಿಂದ ವ್ಯತ್ಯಾಸ ಮಾಡಲಾಗುತ್ತದೆ ಮತ್ತು ಹೆಚ್ಚಾಗಿ ಸಂದರ್ಭವನ್ನು ಅವಲಂಬಿಸಿರುತ್ತದೆ.

ಡಿಕ್ಷನರಿಡಾಟ್‍ಕಾಮ್ ಜಾಲತಾಣವು ಕೆಣಕು ಮಾತನ್ನು ಹೀಗೆ ವಿವರಿಸುತ್ತದೆ: ಕೆಣಕು ಮಾತಿನಲ್ಲಿ, ಅಪಹಾಸ್ಯ ಅಥವಾ ಅಣಕವನ್ನು ಕಠೋರವಾಗಿ ಬಳಸಲಾಗುತ್ತದೆ, ಹಲವುವೇಳೆ ವಿನಾಶಕಾರಿ ಉದ್ದೇಶಗಳಿಗಾಗಿ ಒರಟಾಗಿ ಮತ್ತು ತಿರಸ್ಕಾರದ ರೀತಿಯಲ್ಲಿ ಬಳಸಲಾಗುತ್ತದೆ. ಇದನ್ನು ಪರೋಕ್ಷ ರೀತಿಯಲ್ಲಿ ಬಳಸಬಹುದು, ಮತ್ತು ಕಟಕಿಯ ರೂಪವನ್ನು ಹೊಂದಿರಬಹುದು, ಉದಾ. "ನೀನು ಎಷ್ಟು ಒಳ್ಳೆ ಸಂಗೀತಗಾರನಾಗಿಬಿಟ್ಟೆ", "ನೀನು ಈಗ ಸಂಪೂರ್ಣವಾಗಿ ಬೇರೆ ವ್ಯಕ್ತಿ ಆದಂತಿದೆ...", ಮತ್ತು "ಓ... ಸರಿ ಹಾಗಿದ್ದರೆ ಹಲವು ವರ್ಷಗಳು ನೀಡಿದ ಪ್ರಥಮ ಚಿಕಿತ್ಸೆಗೆ ಧನ್ಯವಾದಗಳು", ಅಥವಾ ಇದನ್ನು ನೇರ ವಾಕ್ಯದ ರೂಪದಲ್ಲಿ ಬಳಸಬಹುದು, "ನಿನಗೆ ಇಬ್ಬರು ಸಹಾಯಕರು ಇದ್ದಿದ್ದರೆ ನೀನು ಒಂದೂ ಖಂಡವನ್ನು ಸರಿಯಾಗಿ ನುಡಿಸುತ್ತಿರಲಿಲ್ಲ". ಕೆಣಕು ಮಾತಿನ ವಿಶಿಷ್ಟ ಗುಣವು ವಾಕ್ ಭಾಷೆಯಲ್ಲಿ ಇರುತ್ತದೆ ಮತ್ತು ಮುಖ್ಯವಾಗಿ ಧ್ವನಿಯ ಸ್ವರದ ಬದಲಾವಣೆಯಿಂದ ವ್ಯಕ್ತವಾಗುತ್ತದೆ ...

"ಹೊರಗೆ ಕಾಣುವಂತೆ ಸನ್ನಿವೇಶಕ್ಕೆ ಸೂಕ್ತವೆಂದೆನಿಸುವ ಕಾರ್ಯತಂತ್ರಗಳ ಬಳಕೆ, ಆದರೆ ಮುಖ ನಿರ್ವಹಣೆಯ ವಿಷಯದಲ್ಲಿ ವಿರುದ್ಧ ಅರ್ಥದ್ದೆಂದು ತೆಗೆದುಕೊಳ್ಳಬೇಕಾಗಿರುತ್ತದೆ. ಅಂದರೆ, ಹೊರಗೆ ಗ್ರಾಹಿಯ ಮುಖವನ್ನು ಕಾಪಾಡುವ ಅಥವಾ ಹೆಚ್ಚಿಸುವಂತೆ ಕಾಣುವ ಹೇಳಿಕೆಯು ವಾಸ್ತವವಾಗಿ ಗ್ರಾಹಿಯ ಮುಖಕ್ಕೆ ಹೊಡೆತ ಕೊಟ್ಟು ಹಾನಿಮಾಡುತ್ತದೆ. ... ಕೆಣಕು ಮಾತು ಒಬ್ಬರ ಸಂವಾದಕರ ಮನಸ್ಸನ್ನು ನೋಯಿಸಲು ಬಳಸಲಾಗುವ ಸುಶಿಷ್ಟತೆಯ ಅಪ್ರಾಮಾಣಿಕ ರೂಪವಾಗಿದೆ", ಎಂದು ಬೌಸ್‍ಫ಼ೀಲ್ಡ್ ಕೆಣಕು ಮಾತನ್ನು ಲಘು ವಿನೋದದಿಂದ ವ್ಯತ್ಯಾಸ ಮಾಡುತ್ತಾರೆ ಮತ್ತು ಕೆಣಕು ಮಾತಿನಲ್ಲಿ ವಿಡಂಬನದ ಬಳಕೆಯನ್ನು ಸೂಚಿಸುತ್ತಾರೆ.

"ಕೆಣಕು ಮಾತು ಮತ್ತು ವಿಡಂಬನದ ನಡುವೆ ಬಹಳ ನಿಕಟ ಸಂಬಂಧವಿದೆ, ಮತ್ತು ವಿಶೇಷವಾಗಿ ಸಾಹಿತ್ಯಿಕ ಸಿದ್ಧಾಂತವಾದಿಗಳು ಹಲವುವೇಳೆ ಕೆಣಕುಮಾತನ್ನು ಸರಳವಾಗಿ ವಿಡಂಬನದ ಅತ್ಯಂತ ಒರಟು ಹಾಗೂ ಅತ್ಯಂತ ಕಡಿಮೆ ಆಸಕ್ತಿಯುಳ್ಳ ರೂಪವೆಂದು ಕಾಣುತ್ತಾರೆ" ಎಂದು ಹೈಮನ್ ಬರೆಯುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. Boxer, D. (2002). "4 - 'Yeah right:' sociolinguistic functions of sarcasm in classroom discourse". Applying Sociolinguistics: Domains and Face-to-Face Interaction. John Benjamins Publications. p. 100. ISBN 978-90-272-1850-6. Only people can be sarcastic, whereas situations are ironic.