ಕೃತಕ ಬುದ್ಧಿಮತ್ತೆ ಕ್ರಾಂತಿ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಕೃತಕ ಬುದ್ಧಿಮತ್ತೆ ಕ್ರಾಂತಿ
ನಾಲ್ಕನೆಯ ಕೈಗಾರಿಕಾ ಕ್ರಾಂತಿ ಎಂದೇ ಕರೆಯಲ್ಪಡುವ ಯಂತ್ರಗಳ ಸ್ವಯಂ ಕಲಿಕೆ ಮತ್ತು ಕೆಲಸ ನಿರ್ವಹಣೆಯ ಕೃತಕ ಬುದ್ಧಿಮತ್ತೆ ಈ ಶತಮಾನದುದ್ದಕ್ಕೂ ತನ್ನ ಪ್ರಭಾವ ಬೀರಲಿದೆ.ಮಸ್ಕನ ಚಾಲಕರಹಿತ ಕಾರುಗಳಿಗೂ ಇದು ಬೇಕು.ಗೂಗಲ್ನ ಹೋಂ, ಅಮೇಜಾನ್ನನ ಅಲೇಕ್ಸಾ, appleನ ಸಿರಿ, ಮೈಕ್ರೋಸಾಫ್ಟ್ ನ ಕೋರ್ಟ್ನಾ ಎಲ್ಲವೂ ಕೃತಕ ಬುದ್ಧಿಮತ್ತೆ ರೂಪಗಳಾಗಿದ್ದು, ನಮ್ಮದೈನಂದಿನ ಜೀವನಕ್ಕೆ ಹಲವು ಅನುಕೂಲಗಳನ್ನು ಕಲ್ಪಿಸಿವೆ..
ಅಪರಾಧ ಪತ್ತೆಗೆ ನೆರವು ನೀಡುವ ಐಬಿಎಂನ bloocap, ಶಿಕ್ಷಣ, ಆರೋಗ್ಯ, ಕಾನೂನು ಸೇವೆಯ ನೆರವು ನೀಡುವ ಸ್ಟಾನ್ಫೋರ್ಢ ವಿವಿಯ 'ವೋಬೋಟ್' ಯು-ರಿಪೋರ್ಟ, ಬಿಲ್ ಪಾವತಿಯ ಮೋಬೈಲ್ ಆ್ಯಪ್,ಕ್ಯಾಬ್ ಬುಕ್ಕಿಂಗ್, ಮೋಬೈಲ್ ರಿಚಾರ್ಜಿಂಗ್, ಕ್ರೀಕೆಟ್ ಸ್ಕೋರ್ ತಿಳಿಸುವ 'ನಿಕಿ' ಸಾಧನಗಳೆಲ್ಲ ಕೃತಕ ಬುದ್ಧಿಮತ್ತೆಯಿಂದಲೆ ಕಾರ್ಯನಿರ್ವಹಿಸುತ್ತಿವೆ.ಆದರೆ ಮನುಷ್ಯನಿಂದ ನಿರ್ಮಿತವಾಗಿ, ಅವನಿಂದಲೇ ಬುದ್ದಿ ಪಡೆದ ಯಂತ್ರಗಳು ಮನುಷ್ಯನ ಸ್ವಾರ್ಥ ಮೈಗೂಡಿಸಿಕೊಂಡರೆ ವಿನಾಶ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ತಜ್ಞರು.ಎಲ್ಲೆಂದರಲ್ಲಿ ಬೇಹುಗಾರಿಕೆ ನಡೆಸಬಹುದಾದ ಸಾಧನಗಳು ಪ್ರಜಾಪ್ರಭುತ್ವದ ಬುಡವನ್ನೇ ಅಲ್ಲಾಡಿಸಬಲ್ಲವು; ಅವುಗಳ ಮೇಲೆ ನಿಯಂತ್ರಣವಿರಲೇಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಇದರ ಜೊತೆಗೆ ಪ್ರತಿ ಸೆಕೆಂಡಿಗೆ 70ರಿಂದ100ಜಿಬಿ ದತ್ತಾಂಶ ವರ್ಗಾಯಿಸಬಲ್ಲ 5ಜಿ ಇಂಟರ್ನೆಟ್ ಸೌಲಭ್ಯ ಸೇವೆ ಒದಗಿಸಲು ಸಜ್ಜಾಗಿ ನಿಂತಿದೆ.ಅಗಾಧ ಪ್ರಮಾಣದ ಮಾಹಿತಿ ವರ್ಗಾವಣೆ ಆಗುವಾಗ ಮಾಹಿತಿ ಸೋರಿಕೆ,ಕಳ್ಳತನ, ಎತ್ತಂಗಡಿ ಗಳಿಗೆ ಹೆಚ್ಚಿನ ಅವಕಾಶ ದೊರೆಯುವುದರಿಂದ ಸಂಪರ್ಕ ಜಾಲವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವ ದೊಡ್ಡ ಸವಾಲು ಎದುರಾಗಿದೆ......
ಕೃಪೆ ಪ್ರಜಾವಾಣಿ ಪತ್ರಿಕೆ
ಸಂಗ್ರಹ:---ಹಣಮಂತ ಬಡಿಗೇರ್ ಸರ್