ಕೂಸುಕೊಳ್ಳಿ ಗ್ರಾಮ

  1. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ಕೂಸುಕೊಳ್ಳಿ ಗ್ರಾಮ ಇರುವುದು.
  2. ಕೊಪ್ಪ ಪೇಟೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿದೆ.
  3. ಕೂಸುಕೊಳ್ಳಿ ಗ್ರಾಮದಲ್ಲಿ ಹಲವಾರು ಮನೆಗಳಿವೆ, ಶಾಲೆಗಳಿವೆ.
  4. ಕೂಸುಕೊಳ್ಳಿ ಗ್ರಾಮದಲ್ಲಿ ಬೆಳೆಯುವ ಬೆಳೆಗಳೆಂದರೆ ಅಡಿಕೆ, ಬಾಳೆ, ಕಾಫಿ, ಏಲಕ್ಕಿ, ಮೆಣಸು.
  5. ಅದಲ್ಲದೆ ಒಂದು ಅರ್ಧನಾರೇಶ್ವರಿಯ ದೇವಸ್ಥಾನ ಇದೆ.
  6. ಪ್ರತಿ ಶನಿವಾರ ವಿಶೇಷ ಪೂಜೆ ನಡೆಯುತ್ತದೆ. ಊರಿನವರೆಲ್ಲಾ ಈ ದೇವಸ್ಥಾನಕ್ಕೆ ತಮ್ಮ ಮನೆಯಲ್ಲಿ ಬೆಳೆದ ಅಥವಾ ಮಾಡಿದ ವಸ್ತುವನ್ನು ನೈವೇದ್ಯ ಕೊಡಬಹುದು. ದೇವಸ್ಥಾನದ ಜವಾಬ್ದಾರಿಯನ್ನು ಊರಿನವರಿಗೇ ಯಾರಿಗಾದರೂ ಕೆಡಲಾಗುತ್ತದೆ...ಊರಿನವರೆಲ್ಲಾ ಸೇರಿ ಈ ಒಂದು ದೇವಸ್ಥಾನವನ್ನು ನಡೆಸುತ್ತಾರೆ. ಹಬ್ಬಗಳಲ್ಲಿ ವಿಶೇಷ ಪೂಜೆ ಅನ್ನು ಅರ್ಚಕರು ಬಂದು ಮಾಡುತ್ತಾರೆ. ವರ್ಷಕ್ಕೆ ಒಮ್ಮೆ ಮಾರಿ ಹರ್ಕೆ ಎಂದು ಊರಿನವರೆಲ್ಲಾ ಸೇರಿ ಕುರಿ ಕಡಿದು ಬಲಿ ಕೊಟ್ಟು ರಾತ್ರಿ ಊಟ ಇಡುತ್ತಾರೆ. ಕುರಿಯನ್ನು ಬಲಿ ಕೊಡುವ ಮುನ್ನ ಬ್ಯಾಂಡ್ ಸೆಟ್ ಒಂದಿಗೆ ಊರೆಲ್ಲಾ ಮೆರವಣಿಗೆ ಕರೆದುಕೊಂಡು ಹೋಗುತ್ತಾರೆ. ಊರವರೆಲ್ಲಾ ಪೂಜೆ ಮಾಡಿ ಬಂದ ಜನರಿಗೆ ಏನಾದರೂ ದಾನ ಕೊಡುತ್ತಾರೆ. ಅಲ್ಲೇ ಕೆಳಗಡೆ ನಾಗರ ಕಲ್ಲನ್ನು ಕೂಡ ಪ್ರತಿಷ್ಠಾಪನೆ ಮಾಡಿದ್ದಾರೆ. ಅದಕ್ಕೆ ಕುಂಕೆಮವನ್ನು ಬಳಸುವುದಿಲ್ಲ. ಹಾಗೆ ಕೆಂಪು ಹೂವು ಕೂಡ ಬಳಸುವುದಿಲ್ಲ. ಕೆಲವೊಮ್ಮೆ ಗಣವನ್ನು ಕರೆಸುತ್ತಾರೆ.