ಮಾರ್ಗವಾಗಿ ಚಲಿಸಿದರೆ ರಾಮನಗರ ತಾಲ್ಲೂಕಿ ನಿಂದ ೯ ಕಿ.ಮೀ ದೂರದಲ್ಲಿ ಕೂಟಗಲ್ ಗ್ರಾಮವು ಸಿಗುತ್ತದೆ. ಗ್ರಾಮದಲ್ಲಿರುವ ಶ್ರೀ ತಿಮ್ಮಪ್ಪ ಸ್ವಾಮಿ ಬೆಟ್ಟವನ್ನು ಮೆಟ್ಟಿಲಿನಿಂದಲೂ, ಹತ್ತಬಹುದು ಅಥವಾ ನೇರವಾಗಿಯೇ ವಾಹನದಿಂದಾಗಿಯೂ ಹೋಗಬಹುದಾಗಿದೆ. ಬೆಟ್ಟದ ಮೇಲೆ ನಿಂತು ನೋಡಿದರೆ ಸುತ್ತ-ಮುತ್ತಲಿನ ಪರಿಸರವನ್ನು ವೀಕ್ಷಿಸ ಬಹುದಾಗಿದೆ.

ಇತಿಹಾಸ

ಬದಲಾಯಿಸಿ

ಕೂಟಗಲ್ ಬೆಟ್ಟ ಅಥವಾಾ ಶ್ರೀ ತಿಮ್ಮಪ್ಪ ಸ್ವಾಮಿ ಬೆಟ್ಟದ ಇತಿಹಾಸ. ಈ ಕಲ್ಲನ್ನು ಓದಿದವರು ಸಾಯುತ್ತಾರೆ!, ಅಥವಾಾ ಅವರಿಗೆ ಮುಂದೆ ತೊಂದರೆ ಉಂಟಾಗುತ್ತದೆ ಎಂಬ ಮಾತುಗಳೇ ಬಹಳಷ್ಟು ಮಂದಿಯಿಂದ ಬಂದಂತಹ ಉತ್ತರ. ಆದರೆ ನಾನು ಈ ಶಾಸನವನ್ನು ಓದಲು ಪ್ರಯತ್ನಿಸಿದೆ. ಇದರ ಪ್ರಕಾರ ಅಶ್ವಯಾಗ ಎಂಬ ಪದವು ಕನ್ನಡದಲ್ಲಿ ದೂರೆತಿದ್ದು, ಈ ಅಶ್ವಯಾಗ ಪದ್ಧತಿಯು ಉತ್ತರ ವೈದಿಕ ಕಾಲ ಸುಮಾರು ಕ್ರಿ. ಪೂ. ೧೫೦೦ ಎಂದು ತಿಳಿಯ ಬಹುದಾಗಿದೆ. [೧]

ಗಳಗಲ್ಲು ಅಥವಾ ನೀಳಗಲ್ಲು

ಬದಲಾಯಿಸಿ

ಬೆಟ್ಟದ ವಾಯುವ್ಯ ಭಾಗದಲ್ಲಿ ಕೂಡುಗಲ್ಲು, ಗಳಗಲ್ಲು, ಕ್ಯಾತನ ಕಲ್ಲು, ಮಡಿವಾಳೆ-ಕಲ್ಲು ಅಥವಾಾ ಅಗಸನ ಕಲ್ಲೆಂದು ಕರೆಯುವ ಒಂದರ ಪಕ್ಕ ಒಂದರಂತೆ ನಿಂತ ಮೂರು ಕೂಡುಗಲ್ಲುಗಳ ಐತಿಹ್ಯ.

ಕಣ್ಣಾನದಿಯ ಅಣೆ ಕಟ್ಟು

ಬದಲಾಯಿಸಿ

ಶ್ರೀ ತಿಮ್ಮಪ್ಪ ಸ್ವಾಮಿ ಬೆಟ್ಟದಿಂದ ನಿಂತು ನೋಡಿದರೆ ೨೦ ಕಿ.ಮೀ ದೂರದಲ್ಲಿರುವ ಕಣ್ಣ ಅಣೆಕಟ್ಟೆ ಕಾಣಿಸುತ್ತದೆ. ಮತ್ತು ಸುತ್ತ-ಮುತ್ತ ಬೆಟ್ಟ ಗುಡ್ಡಗಳಿಂದ ಕಂಗೂಳಿಸುವ ಪರಿಸರ ನಮ್ಮ ಕಣ್ಮನ ತಣಿಸುತ್ತದೆ.

  • ಕೂಟಗಲ್ ಗ್ರಾಮದಲ್ಲಿ ಹಳೆಯದಾದ ಶಾಸನವೊಂದು ದೂರೆತಿದೆ. ಈ ಶಾಸನವು ಗ್ರಾಮದಿಂದ ೧ ಕಿ.ಮಿ ದೂರದಲ್ಲಿ ಎರೆಹಳ್ಳಿ ಮಾರ್ಗವಾಗಿ ಚಲಿಸುವ ದಾರಿಯ ಪಕ್ಕದಲ್ಲಿನ ಒಂದು ದೊಡ್ಡ ಅರಳೀಮದ ಕೆಳಗೆ ಈ ಶಾಸನವು ದೂರೆತಿದೆ. ಈ ಶಾಸನದ ಬಗ್ಗೆ ಗ್ರಾಮದಲ್ಲಿನ ಜನ-ಸಾಮಾನ್ಯರಲ್ಲಿ ವಿಚಾರಿಸಿದಾಗ, ಇದು ಶಾಸನ ಅಲ್ಲ, ಇದು ಮಸಾಣಕಲ್ಲು ಅಥವಾಾ ಶಾಸಣ ಕಲ್ಲು ಎಂದು ಹೇಳುತ್ತಾರೆ. ಈ ಕಲ್ಲನ್ನು ಓದಿದವರು ಸಾಯುತ್ತಾರೆ! ಅಥವಾಾ ಅವರಿಗೆ ಮುಂದೆ ತೊಂದರೆ ಉಂಟಾಗುತ್ತದೆ ಎಂಬ ಮಾತುಗಳೇ ಬಹಳಷ್ಟು ಮಂದಿಯಿಂದ ಬಂದಂತಹ ಉತ್ತರ. *ಆದರೆ ನಾನು ಈ ಶಾಸನವನ್ನು ಓದಲು ಪ್ರಯತ್ನಿಸಿದೆ. ಇದರ ಪ್ರಕಾರ ಅಶ್ವಯಾಗ ಎಂಬ ಪದವು ಕನ್ನಡದಲ್ಲಿ ದೂರೆತಿದ್ದು, ಈ ಅಶ್ವಯಾಗ ಪದ್ದತಿಯು ಉತ್ತರ ವೈದಿಕ ಕಾಲ ಸುಮಾರು ಕ್ರಿ. ಪೂ. ೧೫೦೦ ಎಂದು ತಿಳಿಯ ಬಹುದಾಗಿದೆ, ಇಲ್ಲವೆ ಮರಾಠರ ಕಾಲ ಕ್ರಿ. ಶ ೩೩೬ ಎಂದು ನನ್ನ ಅಭಿಪ್ರಾಯ. ಈ ಶಾಸನವನ್ನು ನಾವುಗಳು ರಕ್ಷಿಸಿ ಇದನ್ನು ಇತಿಹಾಸ ತಜ್ಞರ ಬಳಿ ಓದಿಸಿದರೆ ಈ ಗ್ರಾಮದಲ್ಲಿ ಯಾರ ಆಳ್ವಿಕೆ ನಡೆಯಲ್ಪಟಿತ್ತು ಎಂಬ ಮಾಹಿತಿಯನ್ನು ತಿಳಿಯಬಹುದಾಗಿದೆ.