ಕುಸುಮ ಷಟ್ಪದಿ
ಕುಸುಮ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಕುಸುಮ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,೨,೪,೫ನೆಯ ಸಾಲುಗಳು ಸಮನಾಗಿದ್ದು, ೫ ಮಾತ್ರೆಯ ಎರಡು ಗಣಗಳಿರುತ್ತವೆ. ೩ ಮತ್ತು ೬ನೆಯ ಪಾದಗಳಲ್ಲಿ ೫ ಮಾತ್ರೆಯ ೩ ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ(ಲಘು ಬಂದರೂ ಗುರು ಎಂದುಕೊಳ್ಳಬೇಕು). ಗುರುಬಸವನ(೧೪೩೦)'ಮನೋವಿಜಯ'ಕಾವ್ಯಕುಸುಮ ಷಟ್ಪದಿಯಲ್ಲಿದೆ
ಉದಾಹರಣೆ:
ನಾಡುಮನಸಿಜನೊಲವಿ ನಾಡುವೆಡೆ ಸಂತತಂ ಬೀಡು ರತಿಪತಿಗೆ ಸತತ ನಿಧಾನವು ನೋಡಿದನಿಮಿಷಪತಿಗೆ ಮಾಡುವುದು ವಿನಯವನು ನಾಡಾಡಿಯವರ್ಗೆ ಬಣ್ಣಿಸಲುಮೊಗ್ಗೇ
ಇದರ ಛಂದಸ್ಸಿನ ಪ್ರಸ್ತಾರ:
ನಾಡುಮನ |ಸಿಜನೊಲವಿ| ನಾಡು ವೆಡೆ |ಸಂತತಂ | ಬೀಡು ರತಿ |ಪತಿಗೆ ಸತ|ತ ನಿಧಾನ|ವು| ನೋಡಿದ ನಿ|ಮಿಷ ಪತಿಗೆ| ಮಾಡುವುದು |ವಿನಯವನು| ನಾಡಾದಿ|ಯವರ್ಗೆ ಬ|ಣ್ಣಿಸಲು ಮೊ|ಗ್ಗೇ
'|' ಸಂಜ್ಞೆಯು ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ:
೫|೫ ೫|೫ ೫|೫|೫|- ೫|೫ ೫|೫ ೫|೫|೫|-
ನೋಡಿ
ಬದಲಾಯಿಸಿ- ಶರ
- ಕುಸುಮ
- ಭೋಗ
- ಭಾಮಿನೀ
- ಪರಿವರ್ಧಿನೀ
- ವಾರ್ಧಕ
- ಕನ್ನಡ ವ್ಯಾಕರಣ
ಉಲ್ಲೇಖ
ಬದಲಾಯಿಸಿ[[ವರ್ಗ:ಕನ್ನಡ ವ್ಯಾಕರಣ]