ಕುಮುದೇಂದು
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಕುಮುದೇಂದು ಮುನಿ ಒಬ್ಬ ಜೈನ ಮುನಿ ಮತ್ತು ಸಿರಿಭೂವಲಯ ಕೃತಿಯ ಕರ್ತೃ. ಆದಾಗ್ಯೂ, ಈ ಸನ್ಯಾಸಿ ಬಗ್ಗೆ ಮಾಹಿತಿ ಇಲ್ಲ. ವಿದ್ವಾಂಸರು ಅವರು ವಾಸಿಸಿದ ಕಾಲದ ಬಗ್ಗೆ ವಿಭಿನ್ನ ನಿಲುವು ತಳೆದಿದ್ದಾರೆ, ಕರ್ಣಮಂಗಲ ಶ್ರೀಕಂಠಯ್ಯ ಸುಮಾರು ಕ್ರಿ.ಶ.೮೦೦ ಎಂದು ಹೇಳುತ್ತಾರೆ. ಡಾ ವೆಂಕಟಾಚಲಶಾಸ್ತ್ರಿಗಳು ೧೫ ನೇ ಶತಮಾನಕ್ಕೆ ಸೇರಿದವನು, ಮುನಿಯ ಸ್ಥಳ ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ತಾಲೂಕಿನ ನಂದಿಬೆಟ್ಟ ಬಳಿಯ ಯಳವಳ್ಳಿ ಎಂಬ ಗ್ರಾಮ ಎಂದು ಹೇಳುತ್ತಾರೆ. ಸಿರಿಭೂವಲಯ ಕ್ರಿ.ಶ.೧೫೫೦-೧೬೦೦ ಸುಮಾರು ಅವಧಿಗೂ ಇತ್ತೀಚಿನ ಕೃತಿ ಎಂದು ಸೂಚಿಸುತ್ತಾರೆ.
ಈತ ಅಂಕ ಲಿಪಿಯಲ್ಲಿ ಕೃತಿ ರಚನೆ ಮಾಡಿದ್ದಾನೆ. ಅಂದರೆ ಅಕ್ಷರಗಳ ಬದಲಿಗೆ ಸಂಖ್ಯೆಗಳನ್ನು ಬಳಸಿ ಕೃತಿ ರಚಿಸಿದ್ದಾನೆ. ಇದರ ವಿಶೇಷವೇನೆಂದರೆ 64 ಮನೆಗಳಲ್ಲಿ ಅಂಕಿಗಳನ್ನು ಬರೆಯಲಾಗಿದೆ. ಕೃತಿ ಓದಬೇಕೆಂದರೆ ಅಂಕಿಗಳ ಸ್ಥಾನದಲ್ಲಿ ಅಕ್ಷರಗಳನ್ನು ಬರೆಯಬೇಕು. ಮೂಲ ಕಾವ್ಯ ಕನ್ನಡದಲ್ಲಿದೆ. ಆದರೆ ಮೇಲಿಂದ ಕೆಳಕ್ಕೆ ಮೊದಲು ಸಾಲು ಓದಿದರೆ ತಮಿಳ್, ಎರಡನೇ ಸಾಲು ಓದಿದರೆ ತೆಲುಗು, ಮೂರನೇ ಸಾಲು ಓದಿದರೆ ಮರಾಠಿ, ಹೀಗೆ 4, 5,6,7ನೇ ಸಾಲುಗಳು ಉದ್ದುದ್ದ, ಅಡ್ಡಡ್ಡ ಓದಿದರೆ ಬೇರೆ ಬೇರೆ ಭಾಷೆಯಲ್ಲಿ ಓದಬಹುದಾಗಿದೆ. ಒಟ್ಟು 500 ಭಾಷೆಗಳಲ್ಲಿ ಓದಬಹುದಾದ ಕೃತಿ ಇದಾಗಿದೆ. ಪ್ರಪಂಚದ ಯಾವುದೇ ಭಾಷೆಯಲ್ಲಿ ಇಂತಹ ಕೃತಿ ರಚನೆ ಆಗಿಲ್ಲ.