ಕುಮಾರ ರಾಮಾ
ಕುಮಾರ ರಾಮ ನು ಕರ್ನಾಟಕದ ಇತಿಹಾಸದಲ್ಲಿ ವಿಜಯನಗರವನ್ನು ಸ್ಥಾಪಿಸುವಲ್ಲಿ ಪ್ರಮುಖ ವ್ಯಕ್ತಿಯಾಗಿದ್ದನು. ಕಂಪ್ಲಿ ಕೋಟೆ ರಾಜನಾದ ಕಂಪ್ಲಿ ರಾಯ ಮತ್ತು ಹರಿಹಲಾದೇವಿ ಮಗ. ಕಂಪ್ಲಿಯು ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಒಂದು ದೊಡ್ಡ ಪಟ್ಟಣ. ಅವರ ಕಾಲ ೧೨೯೦- ೧೩೨೦. ಅವರು ವಿಜಯನಗರ ಸಾಮ್ರಾಜ್ಯದ ಸಥಾಪನೆಯ ಅಡಿಪಾಯವಾಗಿದ್ದರು. ಇವರು ಆದರ್ಶ ರಾಜಕುಮಾರರಾಗಿದ್ದರು. ನಾಯಕ ಸಮುದಾಯಕ್ಕೆ ಸೇರಿದ್ದವರು. ಹರಿಹರ ಮತ್ತು ಬುಕ್ಕ ಸೋದರಸಂಬಂಧಿಯಾಗಿದ್ದರು. ಇವರು ವಾರಂಗಲ್ ಕಾಕತೀಯ ವಂಶ, ಹೊಯ್ಸಳರ ವೀರಬಲ್ಲರು ಮತ್ತು ಮೊಹಮ್ಮದ ಬಿನ್ ತುಘಲಕ್ ಅವರ ಜೊತೆ ಸತತ ಯುದ್ಧ ಮಾಡಿದ್ದರು. ತಂದೆಯ ತರಹ ಎಲ್ಲಾ ರೀತಿಯ ಸದ್ಗುಣಗಳು ಅವರಲ್ಲಿ ಕಾಣುತಿತ್ತು. ಮೊಹಮ್ಮದ ರಾಜನ ಜೊತೆ ಹೋರಾಡುವಾಗ ನೆರೆ ರಾಜ್ಯದ ಮಾತಂಗಿ ಇವರ ಹತ್ಯೆಮಾಡಿದಳು. ಇವಳು ಪ್ರತಾಪ್ ರುದ್ರನ ಸಾಕು ಮಗಳು. ಆಗ ಅವರಿಗೆ ಇನ್ನು ಸಣಣ ವಯಸ್ಸು.ಅವರ ಸಹೋದರ ಚೆನ್ನಿಗ ರಾಮನಿಗಾಗಿ ಪ್ರಾಣವನ್ನು ತ್ಯಜಿಸಿದರು. ಕರ್ನಾಟಕದ ಕಾಡು ಜನರು ಮತ್ತು ಬುಡಕಟ್ಟು ಜನಾಂಗದವರು ಕುಮಾರ ರಾಮನನ್ನು ಪೂಜಿಸುತ್ತಾರೆ. ಅವರ ಹೆಸರಿನಲ್ಲಿ ಹಲವಾರು ದೇವಸ್ಥಾನಗಳಿವೆ.ಗಂಡುಗಲಿ ಕುಮಾರ ರಾಮಾ ಎಂದು ಕನ್ನಡದಲ್ಲಿ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಅದರಲ್ಲಿ ಖ್ಯಾತ ಕನ್ನಡ ನಟರಾದ ಶಿವರಾಜ್ ಕುಮಾರ್ ಅಭಿನಯಿಸಿದ್ದಾರೆ.