ಕುಮಾರ ಪರ್ವತವು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹತ್ತಿರ ಇದೆ. ಕುಮಾರ ಪರ್ವತವು ಸಮುದ್ರ ಮಟ್ಟದಿಂದ ಸುಮಾರು ೧೭೧೨ಮೀ ಎತ್ತರದಲ್ಲಿದೆ ಹಾಗೂ ಸುಬ್ರಹ್ಮಣ್ಯ ದೇವಸ್ಥಾನದಿಂದ ಸುಮಾರು ೧೩ ಕಿ.ಮೀ ದೂರದಲ್ಲಿದೆ. ಕುಮಾರ ಪರ್ವತವು ದಕ್ಷಿಣ ಕನ್ನಡ ಜಿಲ್ಲೆ(ಮಂಗಳೂರು) ಮತ್ತು ಕೊಡಗು ಜಿಲ್ಲೆಗಳ ಗಡಿಯಲ್ಲಿ ಇದೆ.

ಮಾರ್ಗಸೂಚಿಸಂಪಾದಿಸಿ

ಕುಮಾರ ಪರ್ವತಕ್ಕೆ ಹೋಗಲು ಕುಕ್ಕೆ ಸುಬ್ರಹ್ಮಣ್ಯ ಮತ್ತು ಸೋಮವಾರಪೇಟೆ ತಾಲೂಕಿನ ಬೀದಳ್ಳಿ ಗ್ರಾಮದ ಕಡೆಯಿಂದ ದಾರಿಗಳಿವೆ.

ಇತರ ವೀಕ್ಷಣಾ ಸ್ಥಳಸಂಪಾದಿಸಿ

ಕುಕ್ಕೆ ಸುಬ್ರಹ್ಮಣ್ಯದ ಕಡೆಯಿಂದ ಹೋದರೆ ಮೊದಲು ಸುಮಾರು ೪-೫ ಕಿ.ಮೀಗಳ ದೂರ ದಟ್ಟವಾದ ಅರಣ್ಯವಿದೆ. ಇದರ ಸಮೀಪದಲ್ಲಿ ಅರಣ್ಯ ಇಲಾಖೆಯ ತಪಾಸಣೆ ಕೇಂದ್ರವಿದೆ.