ಕುದುರೆಯು ಬಂದೂಕು, ಗಾಳಿಗೋವಿ, ಅಡ್ಡಬಿಲ್ಲು ಅಥವಾ ಈಟಿ ಕೋವಿಯ ಗುಂಡು ಸಿಡಿಸುವ ಅನುಕ್ರಮವನ್ನು ಉಂಟುಮಾಡುವ ಯಾಂತ್ರಿಕ ರಚನೆ. ಕುದುರೆಯು ಗುಂಡು ಹಾರಿಸುವಿಕೆಯಲ್ಲದ ಇತರ ಪ್ರಕ್ರಿಯೆಗಳನ್ನು ಕೂಡ ಆರಂಭಿಸಬಹುದು, ಉದಾಹರಣೆಗೆ ಟ್ರ್ಯಾಪ್, ಸ್ವಿಚ್ ಅಥವಾ ಕ್ಷಿಪ್ರ ಬಿಡುಗಡೆ. ಕುದುರೆಗೆ ವಿನಿಯೋಗಿಸಲಾದ ಸಣ್ಣ ಪ್ರಮಾಣದ ಶಕ್ತಿಯು ಇನ್ನೂ ಹೆಚ್ಚಿನ ಶಕ್ತಿಯ ಬಿಡುಗಡೆಯನ್ನು ಉಂಟುಮಾಡುತ್ತದೆ. "ಇಮ್ಮಡಿ ಕ್ರಿಯೆ"ಯ ಬಂದೂಕು ವಿನ್ಯಾಸಗಳಲ್ಲಿ, ಕುದುರೆಯನ್ನು ಗುಂಡು ಹಾರಿಸುವ ಸಲುವಾಗಿ ಬಂದೂಕನ್ನು ಸಿದ್ಧಪಡಿಸಲು ಕೂಡ ಬಳಸಲಾಗುತ್ತದೆ - ಮತ್ತು ಕುದುರೆಯನ್ನು ಅನೇಕ ಇತರ ಕಾರ್ಯಗಳಿಗೆ ಬಳಸಲಾಗುವ ಅನೇಕ ವಿನ್ಯಾಸಗಳಿವೆ. ಕುದುರೆಗಳು ಸಾಮಾನ್ಯವಾಗಿ ತೋರುಬೆರಳಿನಿಂದ ನಡೆಸಲಾಗುವ ಸನ್ನೆಕೀಲನ್ನು ಹೊಂದಿರುತ್ತಾವಾದರೂ, ಎಮ್೨ ಬ್ರೌನಿಂಗ್ ಮಷೀನ್ ಗನ್‍ನಂತಹ ಕೆಲವು ಕುದುರೆಗಳು ಹೆಬ್ಬೆರಳನ್ನು ಬಳಸುತ್ತವೆ, ಮತ್ತು ಸ್ಪ್ರಿಂಗ್‍ಫ಼ೀಲ್ಡ್ ಆರ್ಮರಿ ಎಮ್೬ ಸ್ಕೌಟ್‍ನಂತಹ ಇತರ ಬಂದೂಕುಗಳು "ಹಿಂಡು-ಪಟ್ಟಿ ಕುದುರೆ"ಯನ್ನು ಬಳಸುತ್ತವೆ. ಬಂದೂಕುಗಳು ಆಯುಧದ ಹಾರಿಸುವಿಕೆ ಕೋಶದಲ್ಲಿ ಗುಂಡಿನ ಹಾರಿಸುವಿಕೆಯನ್ನು ಆರಂಭಿಸಲು ಕುದುರೆಗಳನ್ನು ಬಳಸುತ್ತವೆ.