ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್

ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿ ನಿಯಮಿತ (KIOCL), ಒಂದು ಭಾರತ ಸರ್ಕಾರದ ಉದ್ಯಮ ಅದರ ಮತ್ತು ಆಡಳಿತಾತ್ಮಕ ಮುಖ್ಯ ಕಛೇರಿ ಬೆಂಗಳೂರಿನಲ್ಲಿದೆ ಹಾಗೂ ಇದು ಮಂಗಳೂರಿನಲ್ಲಿ ಒಂದು ಪೆಲೆಟ್ಟೇಶನ್ ಪ್ಲಾಂಟ್ಅನ್ನು ಮತ್ತು ಕುದುರೆಮುಖ(ಚಿಕ್ಕಮಗಳೂರು ಜಿಲ್ಲೆ)ದಲ್ಲಿ ಒಂದು ಕಬ್ಬಿಣದ ಅದಿರಿನ ಗಣಿ ಹೊಂದಿತ್ತು. ಕುದುರೆಮುಖ ಗಣಿ, ವಿಶ್ವದ ಅತಿ ದೊಡ್ಡ ಕಬ್ಬಿಣದ ಅದಿರು ಗಣಿಗಳಲ್ಲಿ ಒಂದಾಗಿದೆ, ಇದನ್ನು ೨೦೦೬ ರಲ್ಲಿ ಮುಚ್ಚಲಾಯಿತು [].

ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿ ನಿಯಮಿತ
ಸಂಸ್ಥೆಯ ಪ್ರಕಾರಸಾರ್ವಜನಿಕ ವಲಯದ ಸಂಸ್ಥೆ
ಸ್ಥಾಪನೆ೧೯೭೬
ಮುಖ್ಯ ಕಾರ್ಯಾಲಯ ಬೆಂಗಳೂರು, ಭಾರತ
ಪ್ರಮುಖ ವ್ಯಕ್ತಿ(ಗಳು)ಶ್ರೀ ಎಂ.ವಿ.ಸುಬ್ಬಾ ರಾವ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ[]
ಉದ್ಯಮ
  • ಗಣಿಗಾರಿಕೆ ಮತ್ತು ಕಬ್ಬಿಣ ತಯಾರಿಕೆ
ಉತ್ಪನ್ನ
  • ಕಬ್ಬಿಣದ ಅದಿರು ಸಂಸ್ಕರಣೆ
ಆದಾಯ ೪೯೭.೩ ದಶಲಕ್ಷ ರೂ (2016-17)[]
ಪೋಷಕ ಸಂಸ್ಥೆಉಕ್ಕು ಸಚಿವಾಲಯ
ಜಾಲತಾಣwww.kioclltd.in

ಪಶ್ಚಿಮ ಘಟ್ಟದ ​​ವ್ಯಾಪ್ತಿಯಲ್ಲಿ ಬರುವ ಕುದುರೆಮುಖದಲ್ಲಿ ಅದಿರಿನ ಗಣಿಗಾರಿಕೆ ನಡೆಯುತ್ತಿತ್ತು. ಗಣಿಗಾರಿಕೆ ಅದಿರನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೂಲಕ 110 ಕಿಮೀ ಕೊಳವೆ ಮಾರ್ಗದ ಮೂಲಕ ಹೊಸ ಮಂಗಳೂರು ಪಕ್ಕದಲ್ಲಿರುವ ಪಣಂಬೂರು ಬಂದರಿಗೆ ಸಾಗಿಸಲಾಗುತ್ತಿತು. ಮಂಗಳೂರಿನ ಕಂಪನಿಯು ೧೯೮೭ ರಲ್ಲಿ ಮಂಗಳೂರಿನಲ್ಲಿ ವಾರ್ಷಿಕವಾಗಿ 3.5 ದಶಲಕ್ಷ ಟನ್ನುಗಳ ಸಾಮರ್ಥ್ಯವಿರುವ ಪೆಲೆಟ್ ಘಟಕವನ್ನು ನಿರ್ಮಿಸಿತು []. ಈ ಸ್ಥಾವರವು 2011 ರಲ್ಲಿ ಸ್ಥಗಿತಗೊಂಡಿತು ಆದರೆ 2014 ರಲ್ಲಿ ಈ ಘಟಕ ಎನ್ಎಂಡಿಸಿ ಲಿಮಿಟೆಡ್ ಸರಬರಾಜು ಮಾಡಿದ ಅದಿರನ್ನು ಸಂಸ್ಕರಿಸಿ ಚೀನಾ, ಇರಾನ್, ಜಪಾನ್ ಮತ್ತು ತೈವಾನ್ ದೇಶಗಳಿಗೆ ಕಳುಹಿಸಿತು.

ಮಂಗಳೂರಿನಲ್ಲಿರುವ ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ ಸ್ಥಾವರ

ಇತಿಹಾಸ

ಬದಲಾಯಿಸಿ

೧೯೧೩ ರಲ್ಲಿ 'ಮೈಸೂರಿನ ಭೂಶೋಧಕ,ಸಂಪತ್ ಅಯ್ಯಂಗಾರ್ 'ಕುದುರೆ ಮುಖ ಬೆಟ್ಟ'ದಲ್ಲಿ ಕಬ್ಬಿಣದ ಅಂಶವಿರುವ ಅದಿರಿನ ಪತ್ತೆಹಚ್ಚಿದ್ದರು. ೪ ಮಿಲಿಯನ್ ಟನ್ ಅದಿರು ಸಿಗಬಹುದೆಂದು ಅಂದಾಜುಮಾಡಿದ್ದರು. ನ್ಯಾಷನಲ್ ಮಿನರಲ್ ಡೆವೆಲಪ್ ಮೆಂಟ್ ಕಾರ್ಪೊರೇಷನ್, ೧೯೬೫ ರಲ್ಲಿ ಉತ್ಖನನ ನಡೆಸಿ, ಪ್ರತಿವರ್ಷ ೨೫ ಮಿಲಿಯನ್ ಅದಿರು ತೆಗೆದರೂ ಮೋಸವಿಲ್ಲ ಎಂದು ವರದಿ ನೀಡಿತ್ತು. ೧೯೭೫ ರಲ್ಲಿ ಭಾರತ-ಇರಾನ್ ಮಧ್ಯೆ ಅದಿರು ರಫ್ತು ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಲಾಗಿತ್ತು. ಮೈಸೂರು ಸರಕಾರದ ಸ್ವಾಮ್ಯದ ಭಾರಿ ಗಣಿ ಸಂಸ್ಥೆ ದ ಕುದುರೆಮುಖ ಐರನ್ ಓರ್ ಲಿಮಿಟೆಡ್ ೧೯೭೬ ರ, ಏಪ್ರಿಲ್ ೨ ರಂದು ಅಸ್ತಿತ್ವಕ್ಕೆ ಬಂತು. ವಾರ್ಷಿಕ ೭೫ ಮಿಲಿಯನ್ ಕಬ್ಬಿಣದ ಅದಿರು ತೆಗೆಯುವ ಗುರಿಯಿಂದ ಸ್ಥಾಪಿತವಾದ ಕುದುರೆ ಮುಖ ಬೆಟ್ಟಶ್ರೇಣಿಗೆ ೪,೬೦೫ ಹೆಕ್ಟೇರ್ ಭೂಪ್ರದೇಶವನ್ನು ಗುತ್ತಿಗೆಯಾಗಿ ಪಡೆಯಿತು. ಸಂಪೂರ್ಣ ರಫ್ತಿಗೇ ಮೀಸಲಾಗಿದ್ದ ಕಂಪೆನಿ, ಅನೇಕ ಸಾವಿರಾರು ಚಿಕ್ಕ ಕೈಗಾ ರಿಕೆಗಳಿಗೆ ಮನೆಮಾಡಿಕೊಟ್ಟು ಅಲ್ಲಿನ ಜನರಿಗೆ ಉದ್ಯೋಗಾವಕಾಶ ಮಾಡಿಕೊಟ್ಟಿತು.


ಗಣಿಗಾರಿಕೆ ಅಂತ್ಯ

ಬದಲಾಯಿಸಿ

ಗಣಿಗಾರಿಕೆ ಗುತ್ತಿಗೆಯನ್ನು ೨೫ ವರ್ಷಗಳ ಕಾಲ ಕೆಐಓಸಿಎಲ್ ಗೆ ನೀಡಲಾಯಿತು ಮತ್ತು ಅದನ್ನು ಡಿಸೆಂಬರ್ ೨೦೦೧ ರೊಳಗೆ ಮುಚ್ಚಬೇಕೆದಾಯಿತು.ಕುದ್ರೆಮುಖ ಪ್ರದೇಶವು ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಹತ್ತಿರವಿದೆ. ಗಣಿಗಾರಿಕೆ ಗುತ್ತಿಗೆಯನ್ನು ತಾತ್ಕಾಲಿಕವಾಗಿ ವಿಸ್ತರಿಸಲಾಯಿತು. ಪರಿಸರ ಮತ್ತು ವನ್ಯ ಜೀವಿಗಳ ಬದುಕಿನ ಮೇಲೆ ಆಗುತ್ತಿರುವ ಪರಿಣಾಮ ಮತ್ತಿತರ ಅಂಶಗಳನ್ನು ಗಮನಿಸಿದ ಸುಪ್ರೀಂ ಕೋರ್ಟ್ ಗಣಿಗಾರಿಕೆ ನಿಲ್ಲಿಸಲು ಆದೇಶ ನೀಡಿತು. ೨೦೦೫ ಡಿಸೆಂಬರ್ ೩೦ ರ ಮಧ್ಯರಾತ್ರಿ ಗಣಿಗಾರಿಕೆ ಸ್ಥಗಿತಗೊಂಡಿತು. ಗಣಿಗಾರಿಕೆ ನಿಂತದ್ದು ಪರಿಸರವಾದಿಗಳಿಗೆ ಸಮಾಧಾನ ತಂದಿದೆ. ಸ್ಥಳೀಯ ಜನ ಗಣಿಗಾರಿಕೆಯನ್ನೇ ತಮ್ಮ ಜೀವನಕ್ಕೆ ಅವಂಭಿಸಿದ್ದು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕುಟುಂಬಗಳು ನಲುಗಿವೆ.

ವಿವಾದಗಳು

ಬದಲಾಯಿಸಿ

2016 ರಲ್ಲಿ ಕೆಐಓಸಿಎಲ್ ಅರಣ್ಯ ಪರಿಸರ ಮತ್ತು ಇಲಾಖೆಯ ಅನುಮತಿ ಇಲ್ಲದೆ ಒಂದು ವಾಣಿಜ್ಯ ರೆಸಾರ್ಟ್ ಅನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಅಭಿವೃದ್ಧಿಪಡಿಸಲು ಹಾಗೂ ಅದರ ಕೆಲವು ಕಟ್ಟಡಗಳನ್ನು ನವೀಕರಿಸಲು ಯೋಜಿಸಿತು. ಅದರೆ ಅಕ್ಟೋಬರ್ 2016 ರಲ್ಲಿ ಪರಿಸರ ಮತ್ತು ಅರಣ್ಯ ಇಲಾಖೆಯು ತಕ್ಷಣ ಆ ಕೆಲಸವನ್ನು ನಿಲ್ಲಿಸುವಂತೆ ಆದೇಶಿಸಿತು []

ಉಲ್ಲೇಖಗಳು

ಬದಲಾಯಿಸಿ
  1. "Our Chairman". KIOCL Limited. Archived from the original on 16 ಅಕ್ಟೋಬರ್ 2017. Retrieved 16 October 2017.
  2. "Annual Report". KIOCL Limited. Annual Report 2016-2017. Archived from the original on 16 ಅಕ್ಟೋಬರ್ 2017. Retrieved 16 October 2017.
  3. name="Origin"
  4. "After 7 years, Kudremukh Iron Ore Company Limited comes to life again". DNA India. 12 January 2014. Retrieved 16 October 2017.
  5. "KIOCL ordered to terminate work on resort in Kundremukh National Park". ದಿ ಹಿಂದೂ. 12 November 2016. Retrieved 16 October 2017.