ಮೂಲತಃ ಧಾರವಾಡದವರಾದ 'ಕುಂದಾ ರೇಗೆ,' ಯವರು, ಕನ್ನಡ ಮರಾಠಿ, ಕೊಂಕಣಿ ರಂಗಭೂಮಿಯಲ್ಲಿ ತಮ್ಮ ಅಭಿನಯ ಕೌಶಲ್ಯದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದ ಪ್ರತಿಭಾವಂತ ಕಲಾವಿದೆ. ೨೭ ವರ್ಷ ಮುಂಬಯಿ ಆಕಾಶವಾಣಿಯ ಕನ್ನಡ ವಿಭಾಗದಲ್ಲಿ ಸತತವಾಗಿ ಪ್ರತಿವಾರವೂ ಅತ್ಯುತ್ತಮ ಕಾರ್ಯಕ್ರಮಗಳನ್ನು ಬಿತ್ತರಿಸಿ, ಮುಂಬಯಿ ರಸಿಕರಿಗೆ ಹತ್ತಿರವಾಗಿದ್ದರು.

ಚಿತ್ರ:KR. (E).jpg
'ಶ್ರೀಮತಿ,ಕುಂದಾ ರೇಗೆಯವರಿಗೆ, ಸಾಧನ ಶಿಖರ ಪ್ರಶಸ್ತಿ ಪ್ರದಾನ ಮಾಡಲಾಯಿತು'

ಬಾಲ್ಯ,ಶಿಕ್ಷಣ,ವೃತ್ತಿ ಜೀವನ

ಬದಲಾಯಿಸಿ

ಕುಂದಾರವರು ತಮ್ಮ, ಪ್ರಾಥಮಿಕ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿ, ಅನಂತರ ಮರಾಠಿ ಭಾಷೆಯಲ್ಲಿ ಎಸ್. ಎನ್. ಡಿ. ಟಿ. ಕಾಲೇಜ್ ನಿಂದ ಉಚ್ಚ ಶಿಕ್ಷಣ ಗಳಿಸಿದರು. ೧೯೫೪ ರಲ್ಲಿ ಬಾಲಕಲಾವಿದೆಯಾಗಿ ಮುಂಬಯಿ ಆಕಾಶವಾಣಿಯಲ್ಲಿ ಕನ್ನಡ ನಾಟಕಗಳಲ್ಲಿ ಭಾಗವಹಿಸಿದರು. ಪ್ರಸಿದ್ಧ ಲೇಖಕ ನಿರ್ದೇಶಕ ಮತ್ತು ಕಲಾವಿದರಾಗಿದ್ದ ಆರ್. ಡಿ. ಕಾಮತ್ ರೇಗೆ ಯವರ ಅಭಿನಯಕುಶಲ್ಯವನ್ನು ಮೆಚ್ಚಿ ತಮ್ಮ ನಾಟಕಗಳಲ್ಲಿ ಆಯ್ಕೆಮಾಡಿಕೊಂಡರು.

ಆ ನಾಟಕಗಳು

ಬದಲಾಯಿಸಿ
  • ತೊಟ್ಟಿಲ್ಲಾ ಬಿಟ್ಟಿಲ್ಲಾ,
  • ಗುಟುಕ್,
  • ಅಮ್ಮ,
  • ಸಹೋದರಿ,
  • ಟಿಪ್ಪುಸುಲ್ತಾನ,

ತೊಟ್ಟಿಲ್ಲಾ ಬಿಟ್ಟಿಲ್ಲ ಎಂಬ ಮೊದಲನಾಟಕದಲ್ಲಿ ಮಾಡಿದ ಪ್ರಧಾನ ಪಾತ್ರ ಅವರಿಗೆ ಅತ್ಯಂತ ಯಶಸ್ಸನ್ನು ತಂದುಕೊಟ್ಟಿತು. ಈ ನಾಟಕದಿಂದ ಪ್ರಸಿದ್ಧರಾದ 'ಕುಂದಾರವರು', ತಮ್ಮ ೧೭ ನೆಯ ವಯಸ್ಸಿನಲ್ಲೇ ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳ ಜಾಹಿರಾತುಗಳಿಗೆ ಕಂಠದಾನವೃತ್ತಿಗೆ ಆಯ್ಕೆಯಾದರು. ಕನ್ನಡ, ಮತ್ತು ಮರಾಠಿ ಭಾಷೆಗಳ 'ಫಿಲ್ಮ್ ಡಿವಿಷನ್' ನ ಬೇಕಾದ ವ್ಯಾಖ್ಯಾನಗಳನ್ನು ನೀಡುತ್ತಿದ್ದರು. ಮುಂಬಯಿ ಆಲ್ ಇಂಡಿಯ ರೇಡಿಯೋ ನ ಕನ್ನಡ ವಿಭಾಗದಲ್ಲಿ ತಾವು ಕೆಲಸಮಾಡಿದ ೨೭ ವರ್ಷವೂ, ಪ್ರತಿವಾರವೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಅತ್ಯಂತ ಯಶಶ್ವಿ ಪ್ರಯೋಗಗಳನ್ನು ಮಾಡಿದ್ದಾರೆ. ನ್ಯಾಷನಲ್ ಅಸೋಸಿಯೇಶನ್ ಗೊಸ್ಕರ ಅಂಧರಿಗಾಗಿ ಸುಮಾರು ೧೫೦ ಕ್ಕಿಂತ ಹೆಚ್ಚು ಕನ್ನಡ ಮರಾಠಿ, ಪಠ್ಯ ಪುಸ್ತಕಗಳ ಮತ್ತು ಕಾದಂಬರಿಗಳ ಧ್ವನಿ ಮುದ್ರಿಕೆಗಳನ್ನು ಬಿಡುಗಡೆ ಗೊಳಿಸಿದ್ದಾರೆ. ಮರಾಠಿ ರಂಗಮಂಚದದ ಸುಪ್ರಸಿದ್ದ ನಿರ್ದೇಶಕರಾಗಿದ್ದ ಅರವಿಂದ ದೇಶಪಾಂಡೆ, ದಾಜಿ ಭಾಟ ವಾಡ್ಕರ್, ಅಮೋಲ್ ಪಾಲೇಕರ್, ಮೊದಲಾದ ಕಲಾವಿದರ ಜೊತೆ ಕೊಂಕಣಿ, ಮತ್ತು ಮರಾಠಿ ನಾಟಕಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ವಿಕಾಸ್ ದೇಸಾಯ್, ಅರುಣಾ ರಾಜೆ, ಹಾಗು ಶ್ಯಾಮ್ ಬೆನೆಗಲ್, ನಿರ್ದೇಶನದಲ್ಲಿ ಹಿಂದಿ ಮತ್ತು ಮರಾಠಿ ಟೆಲಿವಿಶನ್ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ.

ವೆಂಕಟರಾವ್ ತಲಗೇರಿ ನಿರ್ದೇಶನದಲ್ಲಿ

ಬದಲಾಯಿಸಿ
  • ಸತ್ಯಮೇವ ಜಯತೆ,
  • ಪುನರಾಗಮನ,

ಬಿ.ಕೆ.ಜಿ ರಾವ್ ನಿರ್ದೇಶನದಲ್ಲಿ

ಬದಲಾಯಿಸಿ
  • ವೀರ ಯೋಧ,

ಕೆ.ಎಸ್.ಸುಬ್ಬನರಸಿಂಹ ನಿರ್ದೇಶನ

ಬದಲಾಯಿಸಿ
  • ಆಶ್ರಯ,
  • ಹೀಗಾಗಿರಲಾರದು,
  • ಕಾಡುಮಾಡಿದರು ಕೂಡಿನಡೆದರು,

ಕೆ.ಜೆ.ರಾವ್ ನಿರ್ದೇಶನ

ಬದಲಾಯಿಸಿ
  • ನಟಸಾಮ್ರಾಟ್,

ಕೆ.ಕೆ.ಸುವರ್ಣರ ನಿರ್ದೇಶನದಲ್ಲಿ

ಬದಲಾಯಿಸಿ
  • ಸಾವಿತ್ರಿ,
  • ಮಹಮ್ಮದ್ ತುಗಲಖ್
  • ಅನುರಕ್ತೆ,
  • ಯಯಾತಿ,

ಸದಾನಂದ ಸುವರ್ಣ ನಿರ್ದೇಶನದಲ್ಲಿ

ಬದಲಾಯಿಸಿ
  • ನಲವತ್ತರ ನಲುಗು, ಮತ್ತು ಇನ್ನಿತರ ನಾಟಕಗಳಲ್ಲಿ ಪಾಲ್ಗೊಂಡಿದ್ದರು.

ಪ್ರಶಸ್ತಿ, ಗೌರವಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2014-08-12. Retrieved 2014-04-03.

[]

  1. "ಸಾಧನ ಶಿಖರ ಪ್ರಶಸ್ತಿ ಪ್ರದಾನ ಸಮಾರಂಭ". Archived from the original on 2014-08-12. Retrieved 2014-04-03.