ಕುಂಟೆ' ಎಂದರೆ ಮಳೆಯ ನೀರು ಭೂಮಟ್ಟದ ತಗ್ಗಾದ ಜಾಗದಲ್ಲಿ ತಂಗಿರುವ ಸಣ್ಣಪುಟ್ಟ ಜಲಸ್ಥಾಯಿ (ಪಾಂಡ್), ಒಳಭೂಮಿಯ ಜಲಫಲಕದ (ವಾಟರ್‍ಟೇಬಲ್) ಮಟ್ಟ ಹೆಚ್ಚು ಆಳದಲ್ಲಿದ್ದಲ್ಲಿ ಕುಂಟೆಯ ನೀರು ಮಳೆಗಾಲದಲ್ಲಿ ಮಾತ್ರವಿದ್ದು ಬೇಸುಗೆಯಲ್ಲಿ ಬತ್ತಿ ಹೋಗುತ್ತದೆ. ಜಲಫಲಕದ ಮಟ್ಟ ಭೂಮಿಯ ಮೇಲ್ಮೈಗೆ ಸಮೀಪವಾಗಿದ್ದ ಕಡೆ ಮಣ್ಣನ್ನು ತೋಡಿ ಕುಂಟೆಗಳನ್ನು ನಿರ್ಮಿಸಬಹುದು. ಅನೇಕ ಕಡೆಗಳಲ್ಲಿ ಇಂಥ ಕುಂಟೆಗಳಿಗೆ ನಾಲ್ಕು ಕಡೆಗಳಲ್ಲಿಯೂ ಸೋಪಾನಗಳನ್ನು ನಿರ್ಮಿಸಿ ಸ್ನಾನ, ಬಟ್ಟೆ ಒಗೆಯುವುದು ಮುಂತಾದ ಕೆಲಸಗಳಿಗೆ ಉಪಯೋಗವಾಗುವಂತೆ ಮಾಡಿರುತ್ತಾರೆ. ಕುಂಟೆಗಳು ಜವುಳು ಪ್ರದೇಶ ಮತ್ತು ಜಲವಾಸಿ ಸಸ್ಯಗಳು ಮತ್ತು ಪ್ರಾಣಿಗಳಿರುವ ಆಳವಿರದ ನೀರನ್ನು ಹೊಂದಿರಬಹುದು.[] ಕುಂಟೆಯಲ್ಲಿನ ಜೀವಿಗಳ ಬಗೆಯು ಸಾಮಾನ್ಯವಾಗಿ ಜಲಮಟ್ಟ ವ್ಯವಸ್ಥೆ (ವಿಶೇಷವಾಗಿ ಆಳ ಮತ್ತು ಪ್ರವಾಹದ ಅವಧಿ) ಮತ್ತು ಪೋಷಕಾಂಶದ ಮಟ್ಟಗಳು ಸೇರಿದಂತೆ ಅನೇಕ ಅಂಶಗಳ ಸಂಯೋಜನೆಯಿಂದ ನಿರ್ಧಾರಿತವಾಗಿರುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. John Clegg (1986). The New Observer's Book of Pond Life. Frederick Warne. p. 460. ISBN 0723233381.


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: