ಕುಂಟಲ

ಸಸ್ಯ ಪ್ರಭೇದ
ಕುಂಟಲ/ಕುಂಟು ನೇರಳೆ
ಕುಂಟಲದ ಎಲೆಗಳು, ಹೂಗಳು ಹಾಗೂ ಕಾಯಿ
Conservation status
Scientific classification e
Unrecognized taxon (fix): Syzygium
ಪ್ರಜಾತಿ:
S. caryophyllatum
Binomial name
Syzygium caryophyllatum
(L.) Alston

ಕುಂಟಲ ಎಂಬುದು ಮಿರ್ಟೇಸಿಯೆ ಕುಟುಂಬಕ್ಕೆ ಸೇರಿದ ಒಂದು ಮರ. ಕರ್ನಾಟಕದ ಕರಾವಳಿ ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಈ ಮರ ಬೆಳೆಯುತ್ತದೆ. ಉಳಿದಂತೆ ಶ್ರೀ ಲಂಕಾ, ಕೇರಳ ಹಾಗೂ ತಮಿಳುನಾಡಿನಲ್ಲಿಯೂ ಬೆಳೆಯುತ್ತದೆ. ಇದನ್ನು ಕುಂಟು ನೇರಳೆ ಎಂಬುದಾಗಿ ಕೂಡಾ ಕರೆಯುತ್ತಾರೆ[].

ಗುಣ ಲಕ್ಷಣ

ಬದಲಾಯಿಸಿ

ಮರವು ಸುಮಾರು ೬ ಮೀ. ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ಸರಳವಾಗಿದ್ದು ವಿರುದ್ಧ ದಿಕ್ಕಿನಲ್ಲಿರುತ್ತವೆ. ತೊಗಟೆಯು ಸುಮಾರಾಗಿ ದಪ್ಪವಿದ್ದು ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿರುತ್ತದೆ. ಹೂಗಳು ಸಣ್ಣವು, ಬಿಳಿಯ ಬಣ್ಣದಲ್ಲಿದ್ದು ಗಂಡು, ಹೆಣ್ಣು ಎರಡೂ ಭಾಗಗಳನ್ನು ಹೊಂದಿರುತ್ತವೆ. ಇದರ ಹಣ್ಣುಗಳು ಕಡು ನೇರಳೆ/ನೀಲಿ ಬಣ್ಣವನ್ನು ಹೊಂದಿದ್ದು, ಸಿಹಿ, ಒಗರು ಹಾಗೂ ಹುಳಿ ಮಿಶ್ರಿತ ರುಚಿಯನ್ನು ಹೊಂದಿರುತ್ತವೆ. ಗಾತ್ರದಲ್ಲಿ ಹಣ್ಣುಗಳು ಸುಮಾರು ೫ ಮಿ.ಮೀ ನಿಂದ ೧ ಸೆಂ.ಮೀ ವರೆಗೂ ಇರುತ್ತವೆ.

ಚಿತ್ರ ಸಂಪುಟ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. World Conservation Monitoring Centre 1998. Syzygium caryophyllatum. 2006 IUCN Red List of Threatened Species. Downloaded on 23 August 2007.
  2. "ಆರ್ಕೈವ್ ನಕಲು". Archived from the original on 2019-10-11. Retrieved 2019-10-11.
"https://kn.wikipedia.org/w/index.php?title=ಕುಂಟಲ&oldid=1223133" ಇಂದ ಪಡೆಯಲ್ಪಟ್ಟಿದೆ