ಕುಂಚಿಟಿಗರು ಉತ್ತರ ಭಾರತದಿಂದ ವಲಸೆ ಬಂದು ದೇವಗಿರಿ ಮತ್ತು ವಾರಂಗಲ್ ಭಾಗಗಳಲ್ಲಿ ವಾಸಿಸುತ್ತಿರುವಾಗ 101 ಕುಲಗಳಿದ್ದವು ಎಂದು ಹಲವು ಇತಿಹಾಸತಜ್ಞರ ಅಭಿಪ್ರಾಯ. ನಂತರ ಅಲ್ಲೂ ಮುಸಲ್ಮಾನರ ದಾಳಿಗೆ ಸಿಲುಕಿದ ಕುಂಚಿಟಿಗರು ಅಲ್ಲಿಂದ ಕರ್ನಾಟಕದ ಕಡೆಗೆ ಸುಮಾರು 11, 12 ನೇ ಶತಮಾನದಲ್ಲಿ ಕರ್ನಾಟಕದ ಭಾಗಗಳಿಗೆ ವಲಸೆ ಬಂದರೆಂದು ಹೇಳುತ್ತಾರೆ. ಹೀಗೆ ವಲಸೆ ಬಂದಂತಹ ಕುಂಚಿಟಿಗರು ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕು ನಂದನಹೊಸೂರಿನಲ್ಲಿ ಬೀಡುಬಿಟ್ಟು ತಾಮ್ರಶಾಸನವನ್ನು ಬರೆಸಿ ಕುಂಚಿಟಿಗರ ಎಲ್ಲ ಕುಲಗಳಿಗೂ ಅತಿಹೆಚ್ಚು ಆಗ ಆರಾಧಿಸುತ್ತಿದ್ದ ಆಂಜನೇಯಸ್ವಾಮಿ ದೇವರನ್ನ ಪ್ರತಿಷ್ಠಾಪಿಸಿ ಇಡೀ ಸಮುದಾಯಕ್ಕೆ ಇದೊಂದು ಕಟ್ಟೆಮನೆಯಾಗಿರಲಿ ಎಂಬ ಭಾವನೆಯೊಂದಿಗೆ ಇದ್ದರು. ಈ ರೀತಿಯಾಗಿ ಬಂದ ಎಲ್ಲರು ಒಂದೇ ಕಡೆ ಜೀವಿಸಲು ಕಷ್ಟಸಾಧ್ಯವಾದ ಪರಿಣಾಮ ಅವರಿಗೆ ಅನುಕೂಲವಾದ ರೀತಿಯಲ್ಲಿ ಅವರ ಜೀವನ ನೆಲೆ ಕಂಡುಕೊಳ್ಳುವಂತೆ ಮಾತನಾಡಿ ಕುಲಗಳ ಮೂಲಪುರುಷರ ನೇತೃತ್ವದಲ್ಲಿ ಒಂದೊಂದೆ ಕಡೆ ಚದುರಿದರು. ಹೀಗೆ ಚದುರಿದ ಕುಲಗಳ ಜನರು ಅಲ್ಲಿಂದ ಬರುವಾಗ ಅಲ್ಲಿ ಮನೆದೇವರುಗಳಾಗಿ ಪೂಜಿಸುತ್ತಿದ್ದ ಚಿಕ್ಕಚಿಕ್ಕ ವಿಗ್ರಹಗಳು, ಕೇಲುಗಳು, ದೇವರ ಗುಡಿಯಲ್ಲಿದ್ದ ಮನೆದೇವರುಗಳ ನೆನಪಿಗಾಗಿ ಕೆಲವೊಂದು ವಸ್ತುಗಳನ್ನ ತೆಗೆದುಕೊಂಡು ಬಂದು ಅದನ್ನೆ ಮನೆದೇವರುಗಳನ್ನಾಗಿ ಪೂಜಿಸತೊಡಗಿ ಅದನ್ನೆ ಅವರಿಗೆ ಸರಿಹೊಂದಿದ ಸ್ಥಳದಲ್ಲೆ ಪ್ರತಿಷ್ಠಾಪಿಸಬೇಕೆಂದು ತೀರ್ಮನಿಸಿ ಆ ಊರು ಅಥವಾ ಆ ದೇವಾಲಯ ವೇ ಕಟ್ಟೇಮನೆಯನ್ನಾಗಿ ಮಾಡಿಕೊಂಡರು ಹಾಗೇಯೇ ಪ್ರತಿಯೊಂದು ಕುಲಗಳಿಗೂ ಜಂಗಮ (ಸ್ವಾಮೇರು ಎಂದು ಕರೆಯುತ್ತಿದ್ದರು) ಗುರುಗಳು ಇದ್ದರೆಂದು ಕೆಲವು ಇತಿಹಾಸತಜ್ಞರು ತಿಳಿಸಿದ್ದಾರೆ ಆ ಗುರುಗಳ ನೆನಪಿಗಾಗಿ ಗುರುಮನೆಯನ್ನು ಮಾಡಿಕೊಂಡು ಆ ಗುರುಗಳ ಆಜ್ಞಾನುಸಾರವಾಗಿ ತಮ್ಮ ಕರ್ತವ್ಯಗಳನ್ನ ನಿಭಾಯಿಸಿಕೊಂಡು ಹೋಗುತ್ತಿದ್ದರು.

ಹೀಗೆ ಹೆಚ್ಚು ಜನರು ಒಂದೊಂದು ಕಡೆ ಜೀವನ ನಿರ್ವಹಣೆ ಕಷ್ಟಸಾಧ್ಯವಾದ್ದರಿಂದ ಮುಂದೆ ಮುಂದೆ ದೂರದ ಪ್ರದೇಶಗಳಿಗೆ ತೆರಳಿ ಜೀವನ ಮಾಡುತ್ತಿದ್ದರು. ಆಗ ಮನೆದೇವರುಗಳಿಗೆ ಕಟ್ಟೆಮನೆ ಮತ್ತು ಗುರುಮನೆಗಳಿಗೆ ಅಥವಾ ಎಲ್ಲರು ಸೇರಿ ಮಾಡಿಕೊಂಡ ಮನೆದೇವರುಗಳಿಗೆ ಹೋಗಿ ಬರಲು ತುಂಬಾ ಕಷ್ಟವಾದ್ದರಿಂದ ಸಾರಿಗೆ ಸಂಪರ್ಕಗಳು ಅನುಕೂಲ ಇಲ್ಲದ್ದರಿಂದ ತಾವು ಇರುವ ಕಡೆಯಲ್ಲೆ ಮುಖ್ಯಮನೆದೇವರುಗಳು ಆಜ್ಞೆಯ ಮೇರೆಗೆ ತಾವಿರುವೆಡೆಯಲ್ಲಿ ಅದೇ ದೇವರುಗಳ ಹೆಸರಲ್ಲಿ ಅಥವಾ ಅಲ್ಲಿನ ಮುಖ್ಯಸ್ಥನ ಇಷ್ಟದೇವರಗಳ ಹೆಸರಲ್ಲಿ ದೇವಾಲಯಗಳನ್ನು ನಿರ್ಮಿಸಿದರು ಇದನ್ನೆ ಕೆಲವರು ಅಮಾವಾಸ್ಯೆ ಮನೆಗಳು ಎಂದು ಹೇಳುತ್ತಾರೆ. ಇನ್ನು ಕೆಲವರು ಅಲ್ಲಿಂದ ತಂದಿದ್ದ ದೇವರುಗಳ ವಸ್ತುಗಳನ್ನ ಕತ್ತಲೆಮನೆಯಲ್ಲಿ ಇಟ್ಟು ಪೂಜಿಸುತ್ತಿದ್ದರು ಅವು ಅಮಾವಾಸ್ಯೆ ಮನೆಗಳು ಎಂದು ಹೇಳುತ್ತಾರೆ. ಹಾಗೆಯೇ ಅಲ್ಲಿಂದ ಬರುವಾಗ ಬಂಡಿಗಳ ಸಹಾಯದಿಂದ ಬಂದಿದ್ದರಿಂದ ಆ ಬಂಡಿಗಳ ಇರುವೆಡೆಯಲ್ಲು ಆ ಬಂಡಿಗಳೆ ದೇವರೆಂದು ಆ ಬಂಡಿಗಳು ಇರುವ ಸ್ಥಳಕ್ಕೆ ಬಂಡಿಮನೆಯೆಂತಲು ಕರೆಯುತ್ತಾರೆ. ಪೂರ್ವಜರ ಮುಖ್ಯಸ್ಥರು ಕಾಲನಂತರ ಕುಲಗಳ ಇನ್ನಿತರೆ ಮುಖ್ಯಸ್ಥರಲ್ಲಿ ಹೊಂದಾಣಿಕೆ ಇಲ್ಲದ್ದರಿಂದ ಕೆಲವೊಂದು ಬುಡಕಟ್ಟುಗಳನ್ನು ಸೃಷ್ಟಿಸಿಕೊಂಡು ಕುಲವೊಂದೆ ಆದರೂ ನಾವು ಈ ಬುಡಕಟ್ಟಿನವರು ಆ ಬುಡಕಟ್ಟಿನವರು ಎಂದು ಹೇಳುವ ವಾಡಿಕೆಯನ್ನು ಸಹ ಬೆಳೆಸಿಕೊಂಡರು.

ಮನೆದೇವರುಗಳ ವಿಷಯದಲ್ಲಿ ತುಂಬಾ ಗಮನಿಸಿ ನೋಡಿದಾಗ ಪ್ರತಿಯೊಂದು ಕುಲಕ್ಕು ಒಂದು ಗಂಡುದೇವರು ಒಂದು ಹೆಣ್ಣುದೇವರು ಇರುವುದು ಕಂಡುಬರುತ್ತದೆ. ಗಂಡು ದೇವರು ಒಂದು ಊರಿನಲ್ಲಿದ್ದರೆ ಹೆಣ್ಣುದೇವರು ಒಂದು ಊರಿನಲ್ಲಿ ಇರುತ್ತದೆ. ಅದು ನಲವತ್ತು ಐವತ್ತು ಕಿಮೀ ದೂರದಲ್ಲಿಯೂ ಕೆಲವೊಂದು ಕುಲಗಳ ಎರಡು ದೇವರುಗಳು ಅಕ್ಕಪಕ್ಕದಲ್ಲಿಯೂ ಹಾಗೂ ಒಂದೇ ಊರಿನಲ್ಲೂ ಇರುವುದು ಕಂಡುಬರುತ್ತದೆ. ಈಗೀನ ಕಾಲದಲ್ಲಿ ಸಾಕಷ್ಟು ಸಾರಿಗೆ ಸಂಪರ್ಕವಿದ್ದರೂ ಓಡಾಡಲೂ ಕಷ್ಟಪಡುವಾಗ ಆಗ ಹೇಗೆ ಓಡಾಡುತ್ತಿದ್ದರು ಎಂದು ಯೋಚಿಸಿದರೆ ಮೈ ಜುಂ ಎನಿಸುತ್ತದೆ. ಆದರೂ ಮನೆದೇವರುಗಳ ವಿಷಯದಲ್ಲಿ ತುಂಬ ಶ್ರದ್ದೆ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು ಎಂದು ಹೇಳಲು ಪದಗಳೆ ಸಿಗದು ಎಂದು ಹೇಳಬಹುದು. ಇನ್ನು ಕೆಲವರು ತಾವು ಮದುವೆ ಆದ ಮನೆಯವರ ಮನೆದೇವರುಗಳಿಗೆ ಹೋಗುತ್ತಾ ಬರುತ್ತಾ ಅಲ್ಲಿಂದ ಒಳ್ಳೆಯದಾಗಿ ಅದೇ ಮನೆದೇವರುಗಳಾಗಿ ಅವರ ಮಕ್ಕಳು ಮುಂದುವರೆಸಿರುವುದು ಹಾಗೂ ಕೆಲವೊಂದು ಕಷ್ಟದ ಸಮಯದಲ್ಲಿ ಬೇರೆ ದೇವರುಗಳಿಗೆ ಹೋದಾಗ ಅಲ್ಲಿ ಬೇಡಿಕೊಂಡಾಗ ಅವರಿಗೆ ಆ ಸಮಯದಲ್ಲಿ ಕಷ್ಟಗಳು ಪರಿಹಾರವಾಗಿ ಅವನ್ನೆ ಮನೆದೇವರುಗಳನ್ನಾಗಿ ಮಾಡಿಕೊಂಡಿರುವುದು ಉಂಟು.

ರಾಜರ ಕಾಲದಲ್ಲಿ ಅವರ ಆಡಳಿತ ಅನುಕೂಲಕ್ಕಾಗಿ ಜನರನ್ನ ಸ್ಥಳಾಂತರಿಸಿದಾಗ ಅವರಿಗೆ ಆ ಸಮಯದಲ್ಲಿ ಎಲ್ಲಿ ಮನೆದೇವರುಗಳಿಗೆ ಹೋಗಲು ತಿಳಿಯದೆ ಸಾರಿಗೆ ಅನುಕೂಲವಿರುವ ಕಡೆ ಅಥವಾ ತಾವಿರುವ ಕಡೆ ಮನೆದೇವರುಗಳನ್ನಾಗಿ ಮಾಡಿಕೊಂಡಿರುವ ಪ್ರಸಂಗಗಳನ್ನ ಕಾಣಬಹುದು. ಇನ್ನು ವಿಜಯನಗರದ ಅರಸರ ಕಾಲದಲ್ಲಿ ಹಾಗೂ ಟಿಪ್ಪುಸುಲ್ತಾನರ ಆಳ್ವಿಕೆಯ ಕಾಲದಲ್ಲಿ ತಮಿಳುನಾಡಿನಲ್ಲಿ ತಮ್ಮ ಎಲ್ಲೆಯನ್ನು ವಿಸ್ತರಿಸಿದಾಗ ಕೊಯಮತ್ತೂರು, ದಿಂಡಿಗಲ್ ಥೇಣಿ ಜಿಲ್ಲೆಗಳಿಗೆ ಲಕ್ಷಾಂತರ ಕುಂಚಿಟಿಗರನ್ನ ಸ್ಥಳಾಂತರಿಸಿದರು. ಅವರು ಸಹ ದೂರದ ಮನೆದೇವರುಗಳಿಗೆ ಬರಲಾರದೆ ಅಲ್ಲಿಯೇ ಮನೆದೇವರುಗಳನ್ನ ಮಾಡಿಕೊಂಡಿರುವುದು ಮುಂದೆ ನೀವು ನೋಡುವ ಮನೆದೇವರುಗಳ ಲೀಸ್ಟ್ ನಲ್ಲಿ ಕಾಣಬಹುದು. ಅದರಲ್ಲಿ ಕೊಯಮತ್ತೂರು ಭಾಗದ ಕುಂಚಿಟಿಗರು ಇಂದಿಗೂ ಕರ್ನಾಟಕದ ಭಾಗಕ್ಕೆ ಬರುತ್ತಿದ್ದಾರೆ. ಮಿಕ್ಕ ಜಿಲ್ಲೆಯಲ್ಲಿ ವಾಸವಿರುವವರು ಕೆಲವರ ನೇತೃತ್ವದಲ್ಲಿ ವರ್ಷಕ್ಕು ಎರಡು ವರ್ಷಕ್ಕು ಬಸ್ಸುಗಳನ್ನ ಮಾಡಿಕೊಂಡು ಬಂದು ಹೋಗುತ್ತಿರುವುದು ಸಹ ನಾವು ನೋಡಿದ್ದೇವೆ.

ಇನ್ನು ವಿಶೇಷವೆಂದರೆ ಕುಂಚಿಟಿಗರ ಮನೆದೇವರುಗಳು ಹೆಚ್ಚು ಹಿರಿಯೂರು, ಸಿರಾ, ಮಡಕಸಿರಾ, ಪಾವಗಡ, ಮಧುಗಿರಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ , ಚಿತ್ರದುರ್ಗ, ಹೊಳಲ್ಕೆರೆ ಹೊಸದುರ್ಗ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ.

ಇತಿಹಾಸ

ಬದಲಾಯಿಸಿ

ಸುಮಾರು ಕ್ರಿ ಶ. 12ನೇ ಶತಮಾನದ ಸುಮಾರಿನಲ್ಲಿ ಗೋದಾವರಿ ನದಿಯ ದಡದಲ್ಲಿನ “ವಾರಂಗಲ್” ನ ಸುತ್ತಮುತ್ತಲಿನ ಭಾಗದಲ್ಲಿ (ಈಗಿನ ಆಂಧ್ರಪ್ರದೇಶದ ಹೈದರಾಬಾದ್ ನ ಸುತ್ತಮುತ್ತಲ ಪ್ರದೇಶವಾದ ತೆಲಂಗಾಣ ಸೀಮೆ) ಕಾಕತೇಯ ರಾಜರು ರಾಜ್ಯವಾಳಿದರು. ಇಂತಹ ವಾರಂಗಲ್ ರಾಜ್ಯದಲ್ಲಿ “ಕುಂಡುಟಿ”ಗಳು ಎಂಬ ಜನಾಂಗ ಅಪಾರ ಸಂಖ್ಯೆಯಲ್ಲಿದ್ದರು. ಕಾಕತೇಯ ರಾಜರೂ ಇವರ ಬಂಧುಗಳೇ ಆಗಿದ್ದರು. ಹಾಗಾಗಿ ಹಲವಾರು “ಕುಂಡುಟಿ”ಗಳು ರಾಜನ ಆಪ್ತ ಮಂತ್ರಿಗಳಾಗಿ ಹಾಗೂ ರಾಜ್ಯದ ಹಲವಾರು ಪಟ್ಟಣಗಳಲ್ಲಿ ರಾಜಪ್ರತಿನಿಧಿಗಳಾಗಿ ಆಯಕಟ್ಟಿನ ಜಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರ ವೃತ್ತಿಗನುಗುಣವಾಗಿ ಇವರ ಕುಲ/ಗೋತ್ರ/ಬೆಡಗುಗಳನ್ನು ವಿಂಗಡಿಸಲಾಗಿತ್ತು. ಹೀಗೆ ಕುಂಡುಟಿಗಳಲ್ಲಿ ಆ ಕಾಲದಲ್ಲಿ 100ಕುಲ/ಗೋತ್ರ/ಬೆಡಗುಗಳಿದ್ದವು (ನಂತರ ತುಂಗಭದ್ರಾ ನದಿ ದಾಟುವಾಗ ಸಹಾಯ ಮಾಡಿದ್ದಕ್ಕಾಗಿ ಜಲದಿ ಬಪ್ಪ ರಾಯರ ಜಲದೇನವರ ಕುಲವನ್ನು ಸೇರಿಸಲಾಯಿತು). ಅಲ್ಲಿನ”ಕುಂಡುಟಿ” ಜನರುತಮ್ಮವಿವಿಧ ಕಸುಬುಗಳನ್ನು ಹಾಗೂ ವ್ಯಾಪಾರಗಳನ್ನು ಮಾಡಿಕೊಂಡಿದ್ದರು. ತಮ್ಮ ವ್ಯಾಪಾರದ ಹಾಗೂ ಕುಲ ಕಸುಬಿನ (ಕುಂಚಿಟಿಗರ ಕುಲ ಕಸುಬುಗಳನ್ನು ಮುಂದೆ ಪಟ್ಟಿ ಮಾಡಲಾಗಿದೆ, ಆಶ್ಚರ್ಯವೆಂದರೆ ಎಲ್ಲೂ ಒಕ್ಕಲುತನವನ್ನು ಕುಂಡುಟಿಗಳು ತಮ್ಮ ಕುಲ ಕಸುಬು ಎಂದು ಭಾವಿಸದಿರುವುದು! ) ಉತ್ಪನ್ನಗಳನ್ನು ತಮ್ಮ ಸುತ್ತಮುತ್ತಲಿನ ಸೀಮೆಗಳಲ್ಲಿ ತೆಗೆದುಕೊಂಡು ಹೋಗಿ ಮಾರಾಟಮಾಡಿ ತಮಗೆದಿನಬಳಕೆಗೆ ಬೇಕಾದ ದೇವಗಿರಿ ಬಣ್ಣದಸೀರೆ, ಮತ್ತಿತರ ಪದಾರ್ಥಗಳನ್ನು ತೆಗೆದುಕೊಂಡು ಬರುತ್ತಿದ್ದರು.

ಶತ್ರು ಕಾಟ ಮತ್ತು ಪ್ರತಿಭಟನೆ

ಬದಲಾಯಿಸಿ

ಗಡಿ ಭಾಗದ “ಕುಂಡುಟಿ” ಜನರಲ್ಲಿ ಉಂಡೆತ್ತರಾಯ ಎನ್ನುವವರೊಬ್ಬರು ತಮ್ಮ ಸಮಾಜದ ಮುಖಂಡರಾಗಿದ್ದರು. ಅವರಿಗೆ ಅತ್ಯಂತ ಸುಂದರರಾದ ದೊಡ್ಡಭೈರೇದೇವಮ್ಮ ಮತ್ತು ಚಿಕ್ಕಭೈರೇದೇವಮ್ಮ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ಒಮ್ಮೆ ಚಿಕ್ಕಬೈರೇದೇವಮ್ಮ ಮತ್ತು ದೊಡ್ಡಭೈರೇದೇವಮ್ಮ ದೇವಗಿರಿಗೆ ಬೆಣ್ಣೆ, ಮೊಸರು, ತುಪ್ಪ ಮಾರಾಟ ಮಾಡಲು ಹೋದಾಗ ಅಲ್ಲಿನ ಮುಸ್ಲಿಂ ನವಾಬ ಇವರನ್ನು ನೋಡಿ ಮೋಹಗೊಂಡು ಮದುವೆಯಾಗಲು ಬಯಸಿದ. ಅವರು ಒಪ್ಪದಿದ್ದಾಗ ಊರಿನ ದಿಡ್ಡಿ ಬಾಗಿಲನ್ನು ಹಾಕಿಸಿದ. ಆಗ ಸುದ್ದಿ ತಿಳಿದ “ಕುಂಡುಟಿ” ಜನಾಂಗದವರೆಲ್ಲಾ ಸೇರಿ ಒಮ್ಮೆಲೇ ದಿಡ್ಡಿ ಬಾಗಿಲನ್ನು ಒದ್ದಾಗ ಬಾಗಿಲು ಮುರಿದು ಹೊಯಿತು. ಹೆಣ್ಣು ಮಕ್ಕಳೆಲ್ಲಾ ಓಡಿಹೋದರು. ನವಾಬ ಕುದುರೆ ಹತ್ತಿ ಬೆನ್ನತ್ತಿದ. ಅವರ ಪೈಕಿ ದೊಡ್ಡಭೈರೇದೇವಮ್ಮ ನವಾಬನಿಗೆ ಸೆರೆ ಸಿಕ್ಕಿದಳು. ನವಾಬ ಮಿಕ್ಕವರಿಗಾಗಿ ಉಂಡೆತ್ತರಾಯರ ಬೆನ್ನತ್ತಿದ.

ಮಹಾಪ್ರಯಾಣ

ಬದಲಾಯಿಸಿ

ನವಾಬನ ಉಪಟಳ ಹೆಚ್ಚಾಗಿ, “ಕುಂಡುಟಿ” ಸಮಾಜದ ಮುಖಂಡರೆಲ್ಲಾ ಸಮಾಲೋಚಿಸಿ, ನವಾಬನಿಂದ ತಪ್ಪಿಸಿಕೊಳ್ಳಲು ತಮ್ಮ ಸುತ್ತಮುತ್ತಲಿನ “ಕುಂಡುಟಿ” ಸಮಾಜದ 47 ಕುಲ/ಗೋತ್ರ/ಬೆಡಗುಗಳ ಜನ, ದನ, ಹಸು ಕರುಗಳೊಂದಿಗೆ ದಕ್ಷಿಣ ದಿಕ್ಕಿಗೆ ಹೊರಟರು. ದಾರಿಯಲ್ಲಿ ಅವರಿಗೆ ತುಂಬಿ ಹರಿಯುತ್ತಿದ್ದ ಕೃಷ್ಣಾ ನದಿ ಅಡ್ಡ ಬಂದಿತು. ಆಗ ಒಬ್ಬ ನಾಯಕರವನು ಹಾಗೂ ಒಬ್ಬ ದೊಂಬರವನು ಹೊಂಗೆಮರ ತೋರಿಸಿದರು. ನದಿಗೆ ಅಡ್ಡಲಾಗಿ ಬೆಳೆದಿದ್ದ ಆ ಬೃಹತ್ತಾದ ಹೊಂಗೆ ಮರ ಮತ್ತು ಜೊಂಡಿನ ನೆರವಿನಿಂದ “ಕುಂಡುಟಿ”ಗರು ಕೃಷ್ಣಾ ನದಿಯನ್ನು ದಾಟಿದರು.

ಹೀಗೆ ಮುಂದೆ ಸಾಗುತ್ತಿರುವಾಗ ರಭಸದಿಂದ ಭೋರ್ಗರೆಯುತ್ತಿದ್ದ ತುಂಗಭದ್ರಾ ನದಿ ಅಡ್ಡವಾಯಿತು. ತುಂಗಭದ್ರಾ ನದಿ ದಾಟಲು ಯಾವುದೇ ಉಪಾಯ ಕಾಣಲಿಲ್ಲ. ಹಿಂದಿನಿಂದ ಬೆನ್ನಟ್ಟುತ್ತಿದ್ದ ನವಾಬರ ಸೈನ್ಯ ಹಾಗೂ ಮುಂದಿನಿಂದ ತುಂಬಿ ಹರಿಯುವ ತುಂಗಭದ್ರಾ ನದಿ. ಇವೆರಡರ ನಡುವೆ “ಕುಂಡುಟಿ” ಮುಖಂಡರಿಗೆ ಚಿಂತೆಯಾಯಿತು.

ಜಲದಿ ಬಪ್ಪ ರಾಯರ ಸಹಾಯ:

ಬದಲಾಯಿಸಿ

ಭೋರ್ಗರೆಯುತ್ತಿದ್ದ ತುಂಗಭದ್ರಾ ನದಿ ದಾಟುವ ವಿಧಾನ ತೋಚದೆ ಚಿಂತಿಸುತ್ತಿದ್ದಾಗ, ಆಗ ಅಲ್ಲೆ ಕುರಿ ಕಾಯುತ್ತಿದ್ದ ಕುರುಬಗೌಡನೂಬ್ಬನ ಪರಿಚಯವಾಯಿತು. ಉಂಡೆತ್ತರಾಯರು ಆತನನ್ನು ನದಿ ದಾಟುವ ಪರಿ ಹೇಗೆಂದು ಕೇಳದಾಗ, ಆತ “ನಿಮ್ಮನ್ನು ನದಿ ದಾಟಿಸಿದರೆ ನನಗೇನು ಲಾಭ” ಎಂದು ಆತ ಕೇಳಿದ. ಆ ಮಾತಿಗೆ ಉಂಡೆತ್ತರಾಯರು ಆತನೊಂದಿಗೆ ತನ್ನ ಮಗಳನ್ನು ವಿವಾಹ ಮಾಡಿ ಕೊಡುವ ಹಾಗು ಆತನ ಉಪಕಾರವನ್ನು ತಮ್ಮ “ಕುಂಡುಟಿ” ಸಮಾಜ ಇರುವವರೆಗೆ ಸ್ಮರಿಸುವ ಏರ್ಪಾಟು ಮಾಡುವುದಾಗಿ ಮಾತು ಕೊಟ್ಟರು. ಅದರಂತೆ ಆತ ನದಿ ದೇವತೆಯನ್ನು ಪ್ರಾರ್ಥಿಸಿದಾಗ, ನದಿಯ ರಭಸ ಕಡಿಮೆಯಾಯಿತು.ಆಗ ಎಲ್ಲರೂ ಸುರಕ್ಷಿತವಾಗಿ ನದಿ ದಾಟಿದರು.

“ಕುಂಡುಟಿ” “ಕುಂಚಿಟಿಗ”ನಾಗಿ ಪರಿವರ್ತನೆ: ಆಗ ಮುಖಂಡರಾದ ಉಂಡೆತ್ತರಾಯರು ತಮ್ಮನ್ನೆಲ್ಲಾ ಸುರಕ್ಷಿತವಾಗಿ ನದಿ ದಾಟಿಸಿದ ಅ ಮಹೋಪಕಾರಿಯನ್ನು “ಜಲದಿ ಬಪ್ಪ ರಾಯ”ನೆಂದು ನಾಮಕರಣ ಮಾಡಿ ಉಂಡೆತ್ತರಾಯರು ಕೊಟ್ಟ ಮಾತಿನಂತೆ ತಮ್ಮ ಮಗಳಾದ ಚಿಕ್ಕಬೈರೇದೇವಮ್ಮನನ್ನು ಆತನಿಗೆ ಕೊಟ್ಟು ಮದುವೆಮಾಡಿದರು. ಆತನ ಕುಲವನ್ನು ಜಲದೇನವರು ಎಂದು ನಾಮಕರಣ ಮಾಡಿದರು. ನಂತರ ಆತನ ಉಪಕಾರವನ್ನು ಸ್ಮರಿಸುವ ಸಲುವಾಗಿ ಆತ ಹೊಂದಿದ್ದ “ಕುಂಚ”ವನ್ನು ತಮ್ಮ ಬಳಿ ಇಟ್ಟುಕೊಂಡರು. ತಮ್ಮ ಬಳಿ ಜಲದಿ ಬಪ್ಪ ರಾಯರ”ಕುಂಚ”ಇಟ್ಟುಕೊಂಡಿದ್ದರಿಂದ ತಮ್ಮ”ಕುಂಡುಟಿ” ಸಮಾಜವನ್ನು “ಕುಂಚಿಟಿ” ಎಂಬ ಹೆಸರಿನಿಂದ ನಾಮಕರಣ ಮಾಡಿದರು. ಹೀಗೆ “ಕುಂಚ”ದ ನೆನಪಿಗಾಗಿ”ಕುಂಡುಟಿ”ಜನಾಂಗ “ಕುಂಚಿಟಿ” ಜನಾಂಗವಾದರು. ಕಾಲಾನಂತರದಲ್ಲಿ “ಕುಂಚಿಟಿ”ಯಿಂದ “ಕುಂಚಿಟಿಗ” ಪದ ಬಳಕೆಗೆ ಬಂದಿತು.

ಹೀಗೆ ಸುರಕ್ಷಿತವಾಗಿ ತುಂಗಭದ್ರಾ ನದಿ ದಾಟಿದ “ಕುಂಚಿಟಿಗ”ರು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನನಂದನ ಹೊಸೂರು ಎಂಬಲ್ಲಿ ಬೀಡು ಬಿಟ್ಟರು. ನಂತರ ಅಲ್ಲಿಂದ ಬೇರೆ ಬೇರೆ ಕಡೆಗಳಿಗೆ ಚದುರಿದರು.

ಕ್ರಿ.ಶ.1300ರ ಸುಮಾರಿನಲ್ಲಿ ವಾರಂಗಲ್ ರಾಜ್ಯವನ್ನು ಕಾಕತೇಯರ ಪ್ರಭು ಪ್ರತಾಪದೇವರು ಆಡಳಿತ ನಡೆಸುತ್ತಿದ್ದರು. ಕ್ರಿ.ಶ.1321ರಲ್ಲಿ ಪ್ರಭು ಪ್ರತಾಪದೇವ ದೆಹಲಿ ಸುಲ್ತಾನನ ಆಕ್ರಮಣದ ವಿರುದ್ಧ ಉಗ್ರವಾಗಿ ಹೋರಾಡಿ ವೀರ ಮರಣವನ್ನಪ್ಪಿದರು. ರಾಜ್ಯದಲ್ಲಿ ದೆಹಲಿ ಸುಲ್ತಾನನಿಂದ ಪ್ರಜೆಗಳ ಮೇಲೆ ತೀವ್ರವಾದ ಸುಲಿಗೆ, ದರೋಡೆ, ಕೊಲೆ,ಮಾನಭಂಗಗಳು ಪ್ರಾರಂಭವಾದವು. ಕಾಕತೇಯ ರಾಜ್ಯ ಮತ್ತು ಪ್ರಜೆಗಳು ಅನಾಥರಾದರು.

140 ವರ್ಷಗಳ ನಂತರ: ಕುಂಚಿಟಿಗ ಸುವರ್ಣ ಯುಗದ ಪ್ರಾರಂಭ:

ಬದಲಾಯಿಸಿ

ವಿಜಯನಗರ ಮಹಾಸಾಮ್ರಾಜ್ಯದ ಉಗಮ

ಬದಲಾಯಿಸಿ

ಕ್ರಿ.ಶ.1321ರಲ್ಲಿವಾರಂಗಲ್ ನ ಪ್ರಭು ಪ್ರತಾಪದೇವರ ಮರಣಾನಂತರ ಪ್ರಭುಗಳ ಬಂಧುಗಳಾದ ರಾಜ್ಯದ ಹಣಕಾಸು ಮತ್ತು ಭಂಡಾರ ಮಂತ್ರಿಗಳಾದ ಸಂಗಮರಾಯರ ಮಕ್ಕಳಾದ ಹಕ್ಕರಾಯ ಮತ್ತು ಬುಕ್ಕರಾಯ ಕುಟುಂಬ ಪರಿವಾರ ಸಮೇತರಾಗಿ ಚಿನ್ನ, ಬೆಳ್ಳಿ ನಿಧಿಯೊಂದಿಗೆ ಚಿಕ್ಕ ಸೈನ್ಯದೊಂದಿಗೆ ದಕ್ಷಿಣದ ದೂರದ ಆನೆಗೊಂದಿಗೆ ಸಮೀಪದ ತುಂಗಭದ್ರ ನದಿ ತೀರದ ಆಯಕಟ್ಟಿನ ಸ್ಥಳವಾದ ದೊರವಾಡಿ(ಈಗಿನ ಹಂಪೆ)ಯಲ್ಲಿ ಕೋಟೆ ನಿರ್ಮಿಸಿ ವಿಜಯನಗರ ಮಹಾಸಾಮ್ರಾಜ್ಯ ಸ್ಥಾಪಿಸಿದರು. ಪ್ರಭು ಶ್ರೀ ಕೃಷ್ಣದೇವರಾಯರು ತಮಿಳುನಾಡಿನ ಮಧುರೈ, ಡಿಂಡಿಗಲ್ ಹಾಗು ತೆಣಿ ಸೀಮೆಯನ್ನು ಯುದ್ಧದಲ್ಲಿ ಗೆದ್ದಾಗ ಕುಂಚಿಟಿಗರನ್ನು ಮಧುರೈಯ ಮಾಂಡಳೀಕರನ್ನಾಗಿಸಿದರು. ಇವರನ್ನು “ನಾಯಕ”ರೆಂದೂ ಕರೆಯುತಾರೆ. ಇವರಿಂದ ವಿಜಯನಗರದ ಅರಸರು ಕರ ವಸೂಲು ಮಾಡಿಸುತ್ತಿದ್ದರು. ಹೀಗೆ ಕುಂಚಿಟಿಗರು ತಮಿಳುನಾಡಿನ ಮಧುರೈ ಪ್ರಾಂತ್ಯದಲ್ಲಿ ನೆಲೆಸಿದರು.

ವಡ್ಡಿಗೆರೆ ಮತ್ತು ತಾಡಿ ಸಂಸ್ಥಾನದ ಉಗಮ

ಬದಲಾಯಿಸಿ

ಕ್ರಿ.ಶ.1321ರಲ್ಲಿ ವಾರಂಗಲ್ ನ ಪ್ರಭು ಪ್ರತಾಪದೇವರ ಮರಣಾನಂತರ ರಾಜ್ಯದಲ್ಲಿ ದೆಹಲಿ ಸುಲ್ತಾನನಿಂದ ಪ್ರಜೆಗಳ ಮೇಲೆ ತೀವ್ರವಾದ ಸುಲಿಗೆ, ದರೋಡೆ, ಕೊಲೆ, ಮಾನಭಂಗಗಳು ಪ್ರಾರಂಭವಾದವು. ಇವುಗಳಿಂದ ತಪ್ಪಿಸಿಕೊಳ್ಳಲು ವಾರಂಗಲ್ ಪಟ್ಟಣದ ರಾಜಪ್ರತಿನಿಧಿಯಾಗಿ ಆಡಳಿತ ನಡೆಸಿದ ಮಹಾಪರಾಕ್ರಮಿ ವೀರಕೇತುರಾಯರ ನೇತೃತ್ವದಲ್ಲಿ ಮಹಾಜನತೆ ತಮ್ಮ ಆಯಾಗಾರ ಗುರುಗಳೊಂದಿಗೆ ನಗನಾಣ್ಯ, ಪಶು, ಧಾನ್ಯ, ಕುಟುಂಬದೊಂದಿಗೆ ಕೃಷ್ಣಾ ನದಿಯನ್ನು ದಾಟಿ ದೂರದ ಕನ್ನಡ ನಾಡಿನ ದಕ್ಷಿಣ ಭಾಗದಲ್ಲಿ ಈಗಿನ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ತುಂಬಾಡಿ ಪೆಮ್ಮಿಗದೇವರಹಳ್ಳಿ ಸಮೀಪದ ಒಡ್ಡಿಗೆರೆಯಲ್ಲಿ ನೆಲೆಸಿ ಕೋಟೆ ಪಟ್ಟಣ ನಿರ್ಮಿಸಿ ಪೆನಗೊಂಡ ರಾಜ ಅನೆಗೊಂದಿಜಗದೇವರಾಯರ ಮತ್ತು ಮಂತ್ರಿ ಕಂಪಣರಾಯರ ಅನುಮತಿ ಪಡೆದು ಸಾಮಂತ ರಾಜರಾಗಿ ಆಡಳಿತ ನಡೆಸಿದರು. ಮಹಾಪರಾಕ್ರಮಿ ವೀರಕೇತುರಾಯರ ಏಕೈಕ ಪುತ್ರ ರಾಜ ವೀರನಾಗಪ್ಪಮತ್ತು ಇವರ ಪತ್ನಿ ರಾಣಿ ವೀರನಾಗಮ್ಮ ದೇವಿ. ಇವರು ಒಡ್ಡಿಗೆರೆಯನ್ನು ರಾಜಧಾನಿ ಮತ್ತು ತಾಡಿಯನ್ನು ಉಪ ರಾಜಧಾನಿಯಾಗಿ ಮಾಡಿಕೊಂಡು ಆಡಳಿತ ನಡೆಸಿದರು. ಪತಿರಾಜ ವೀರನಾಗಪ್ಪರ ಮರಣಾನಂತರ ಕೆಲಕಾಲ ಆಡಳಿತ ನಡೆಸಿದ ರಾಣಿ ವೀರನಾಗಮ್ಮ ದೇವಿ ಕೊನೆಗಾಲದಲ್ಲಿ ದಾನ ಧರ್ಮ ಮಾಡಿ ಅಗ್ನಿಕುಂಡದಲ್ಲಿ ನಡೆದು ದೇವಿ ಸ್ಥಾನ ಪಡೆದರು.

ಕೊಂಡವಾಡಿ ಸಂಸ್ಥಾನದ ಉಗಮ

ಬದಲಾಯಿಸಿ

ವಾರಂಗಲ್ ನ ಪ್ರಭು ಪ್ರತಾಪದೇವರ ಕಾಲದಲ್ಲಿ ರಾಜ್ಯದಲ್ಲಿ ವಾರಂಗಲ್ ಸಮೀಪದ ಬಡುವಲವಾಡಿ ಪಟ್ಟಣದ ರಾಜಪ್ರತಿನಿಧಿಯಾಗಿದ್ದ ಚದುವಲರಾಯರ(ಜನತೆ ಪ್ರೀತಿಯಿಂದ ಕರೆದ ಹೆಸರು ಬಡುವಲರಾಯ) ವಂಶಸ್ಥರು, ಪ್ರಭು ಪ್ರತಾಪದೇವರ ಮರಣಾನಂತರ, ಕೊಂಡವಾಡಿ ರಾಮಲಿಂಗೇಗೌಡರ ಮೊಮ್ಮಗ ಚಿಕ್ಕಪ್ಪಗೌಡರ ಮಗ ಮಹಾಪರಾಕ್ರಮಿಮಾರೇಗೌಡ ಮತ್ತು ಇವರ ಸಹೋದರರು ವಡ್ಡಿಗೆರೆ ಸಂಸ್ಥಾನದ ಅಧೀನದಲ್ಲಿ ಕೊಂಡವಾಡಿ ಮತ್ತು ಪುರವರ ಪಟ್ಟಣಗಳ ಸಮೀಪದಲ್ಲಿ ಹರಿಯುವ ಜಯಮಂಗಲಿ ನದಿ ತೀರದಲ್ಲಿ ವಿಜಯನಗರ ಅರಸರ ಅನುಮತಿ ಪಡೆದು ಕೋಟೆ ಪಟ್ಟಣ ನಿರ್ಮಿಸಿ ಮುಮ್ಮಡಿ ಎಂದು ನಾಮಕರಣ ಮಾಡಿ ಕ್ರಿ.ಶ.1399ರಲ್ಲಿ ಮಹಾನಾಡಿನ ಆಡಳಿತ ಪ್ರಾರಂಭಿಸಿದರು.

ಬೆಡಗುಗಳು

ಬದಲಾಯಿಸಿ

ಕುಂಚಿಟಿಗರ 48 ಕುಲಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕುಂಚಿಟಿಗರು ತಮ್ಮ ಕುಲ/ಗೋತ್ರ/ಬೆಡಗುಗಳ ವಿಭಾಗವನ್ನು ಪ್ರಾಣಿಪಕ್ಷಿ, ಗಿಡಮರಬಳ್ಳಿ, ದವಸಧಾನ್ಯ, ರಾಜಮನೆತನ, ಸೈನಿಕ, ನಂಬಿಕೆ ಮತ್ತು ವಿವಿಧ ವೃತ್ತಿಗಳ ಹೆಸರಿನಲ್ಲಿ ವಿಂಗಡಿಸಿಲಾಗಿದೆ. ಕುಂಡುಟಿಗಳು ವಾರಂಗಲ್ ಮತ್ತು ದೇವಗಿರಿ ಪ್ರದೇಶವನ್ನು ಬಿಡುವ ಮೊದಲೇ ಸುಮಾರು 110 ಕುಲಗಳಿದ್ದವು.


ಅಂಡೇನವರು

ಬದಲಾಯಿಸಿ

ಉಂಡೇನವರು ಮನೆದೇವರಾದ ಅರೆರಂಗನಾಥಸ್ವಾಮಿ ದೇವಾಲಯ. ವಜ್ಜನಕುರಿಕೆ, ಕೋಳಾಲ ಹೋಬಳಿ, ಕೊರಟಗೆರೆ ತಾಲ್ಲೂಕು. ಇಲ್ಲಿಗೆ ಹುಳಿಯಾರರು ಕೂಡ ಮನೆದೇವರಾಗಿ ನಡೆದುಕೊಳ್ಳುತ್ತಾರೆ. ಹಾವೇರಿ ಜಿಲ್ಲೆಯ ಹಾನಗಲ್ಲು ತಾಲ್ಲೂಕಿನಲ್ಲಿ ಇರುವ ಉಂಡೇನವರು ಸಹ ಇಲ್ಲಿಗೆ ಮನೆದೇವರಾಗಿ ನಡೆದುಕೊಳ್ಳುತ್ತಿವಿ ಎಂದು ತಿಳಿಸಿದರು. ತಮಿಳುನಾಡಿನ ದಿಂಡಿಗಲ್ ಸುತ್ತಮುತ್ತಲಿನ ಉಂಡೇನವರು ಇಲ್ಲಿಗೆ ಬರುತ್ತಾರೆ.



ಶ್ರೀ ದೊರೆಸಿದ್ದಪ್ಪ ಸ್ವಾಮಿ ಮತ್ತಬೆಟ್ಟ ಹೊಳಲ್ಕೆರೆ ತಾ. ಚಿತ್ರದುರ್ಗ ಜಿಲ್ಲೆ

ಶ್ರೀ ಹನುಮಂತರಾಯ ಸ್ವಾಮಿ ನಂದನಹೊಸೂರು ಹೊಳಲ್ಕೆರೆ ತಾ. ಚಿತ್ರದುರ್ಗ ಜಿಲ್ಲೆ


Sri Andisamy(ಶ್ರೀ ಆಂಡಿ ಸಾಮಿ) Oorkoundanpatti, Nilakattai Dindigal Dist. TN

Sri Sandanadevi(ಶ್ರೀ ಸಂಧಾನ ದೇವಿ) K.Pudupatti, Kodai Road, Uthamapalayam Tq. Theni Dist. TN

ಅಟ್ಟೇನವರು

ಬದಲಾಯಿಸಿ

ಕುಂಚಿಟಿಗ ಅಟ್ಟೆನೋರು ಕುಲದ ಮನೆದೇವತೆ ಶ್ರೀ ಈರಮಾಳಮ್ಮ ದೇವಿ, ಈಚಲಡ್ಡಿ ,ಮಡಕಾಶಿರಾ ತಾಲ್ಲೂಕು.



ಅಣ್ಣತಮ್ಮಂದಿರು:- ಜಲಧೇನವರು,ಹಾವಿನವರು ಹಾಗೂ ಅಟ್ಟೇನವರು.

ಅಟ್ಟೇನವರ ಕುಲದೇವತೆ ವೀರಮಾಳಮ್ಮ ಹಾಗೂ ಬಸಲೇನವರ ಕುಲದೇವತೆ ವೀರನಾಗಮ್ಮ ದೇವಿಯರು ಅಕ್ಕತಂಗಿಯರು ಹಾಗೂ ಮಧುಗಿರಿ ತಾಲೂಕಿನ ಹೊಸಕೆರೆಯ ಎಲೆಯವರು ಕುಲದ ಬೊಮ್ಮಲಿಂಗೇಶ್ವರ ಅವರ ಮಕ್ಕಳು ಎಂಬ ಮಾಹಿತಿ ಇದೆ.

ಮಡಕಾಶಿರಾದಿಂದ ಜಿಲ್ಲಾ ಅನಂತಪುರಕ್ಕೆ ಹೋಗುವ ರಸ್ತೆಯಲ್ಲಿ 3-4 ಕಿ ಮೀ ಹೋಗಿ ಬಲಭಾಗದಲ್ಲಿ ಅಮ್ಮಾಜಿಯ ದೇವಾಲಯ ಕಾಣುತ್ತದೆ. ಹಾಗೆಯೇ ಗಂಡು ದೇವರಾದ ಮಡಕಾಶಿರಾ ತಾಲೂಕಿನ ತಿರುಮಲದೇವರಹಳ್ಳಿಯ ಬೆಟ್ಟದ ರಂಗನಾಥ ಸ್ವಾಮಿಯನ್ನು ಮನೆದೇವರನ್ನಾಗಿ ಪೂಜಿಸುತ್ತಾರೆ.

ದೇವಿಯ ಕಥೆ ಅದ್ಭುತವಾಗಿದೆ ಒಮ್ಮೆ ಮನಸಿಟ್ಟು ಓದಿ. ಈರಮಾಳಮ್ಮ ದೇವಿಯ ಪತಿಯಾದ ಈರಹಾಲಪ್ಪ ಏಳುಗೂಡಿನ ದನಗಳನ್ನು ತುಂಬಾಡಿ ಕಾವಲಿನಲ್ಲಿ ಮೇಯಿಸುತ್ತಿದ್ದನು. ಆ ಪ್ರಾಂತ್ಯದ ದೊರೆಯಾದ ನಾಗಸಾನಿಯ ಮಗಳು ಆತನನ್ನು ನೋಡಿ ಮೋಹಗೊಂಡು ಮದುವೆ ಆಗಬೇಕೆಂದು ತನ್ನ ತಂದೆಯ ಹತ್ತಿರ ಈ ವಿಚಾರ ಚರ್ಚಿಸಿದಳು.ದೊರೆ ತನ್ನ ಮಗಳಿಗೆ ಬುದ್ದಿವಾದಗಳನ್ನು ಹೇಳಿದರು ಕೇಳದೆ ಹಠಮಾಡಿದಳು.

ಆಗ ಮಗಳ ಆಸೆಯಂತೆ ಸೇವಕನನ್ನು ಆಸ್ಥಾನಕ್ಕೆ ಕರೆತರಲು ಆಜ್ಞಾಪಿಸಿದನು. ಅದರಂತೆ ಈರ ಹಾಲಪ್ಪನನ್ನು ಕರೆದರು ಅದಕ್ಕೆ ಅವರು ಒಪ್ಪಲಿಲ್ಲ .ದೊರೆಯು ಕೋಪಗೊಂಡು ಕೊಲ್ಲಲು ಆಜ್ಞಾಪಿಸಿದನು. ಚಪ್ಪಲಿ ಮಾಡುವವನಿಗೆ ತೊಡಿಸುವಾಗ ಹಿಮ್ಮಡಿಯ ನರ ಕತ್ತರಿಸಿ ಎಂದು ರಾಜ ಹೇಳಿದನು, ಅದರಂತೆ ಹೊಸ ಚರ್ಮದ ಚಪ್ಪಲಿಯನ್ನು ತೆಗೆದುಕೊಂಡು ಆತನ ಬಳಿ ಹೋಗಿ ನಮ್ಮ ದೊರೆ ಉಡುಗೊರೆಕೊಟ್ಟಿದ್ದಾರೆ ಇದನ್ನು ನಮ್ಮ ಕೈಯಾರ ತೊಡೆಸುತ್ತೇವೆ ಎಂದು ಕೇಳಿಕೊಂಡಾಗ ಅವರ ಮೋಸದ ಮಾತಿಗೆ ಮಾರುಹೋಗಿ ಗುಂಡಿನ ಮೇಲೆ ಕುಳಿತಿರುವ ಕಾಲುಗಳನ್ನು ಕೆಳಗೆ ಬಿಟ್ಟರು.

ದೊರೆಯ ಮಾತಿನಂತೆ ಚಪ್ಪಲಿತೊಡಿವಾಗ ಹಿಮ್ಮಡಿ ನರವನ್ನು ಕತ್ತರಿಸಿದರು. ಅವರು ಸಾಕಿದ್ದ “ಹಾಲ-ಜೂಲ”ಎಂಬ ಎರಡು ನಾಯಿಗಳು ರಕ್ತವನ್ನು ಮುಖಕ್ಕೆಬಳಿದುಕೊಂಡು ಈರ ಮಾಳಮ್ಮ ದೇವಿಯ ಬಳಿಗೆ ತೆರಳಿದವು. ಮಾಳಮ್ಮ ಮತ್ತು ಅವರ ಅತ್ತೆ ಹತ್ತಿಯ ತೋಟದಲ್ಲಿ ಕೆಲಸ ಮಾಡಿ ನೀರುಕುಡಿಯಲು ಹಳ್ಳಕ್ಕೆ ಹೋಗಿ ಚಿಲುಮೆ ತೋಡಿದಾಗ ಅತ್ತೆಯ ಚಿಲುಮೆಯಲ್ಲಿ ನೀರು,ಮಾಳಮ್ಮನ ಚಿಲುಮೆಯಲ್ಲಿ ರಕ್ತ ಬಂತು. ಆಗ ಮಾಳಮ್ಮ ದೇವಿಯು ತನ್ನ ಪತಿಗೆ ಏನೋ ತೊಂದರೆಯಾಗಿದೆಯೆಂದು ಕಳವಳಗೊಂಡಳು.

ಆಗ ಎರಡು ನಾಯಿಗಳು ಬಂದು ಆಕೆಯ ಸೀರೆಯ ಸೆರಗನ್ನು ಹಿಡಿದು ಗಂಡನ ಬಳಿ ಕರೆದುಕೊಂಡು ಹೋದವು. ಅಷ್ಟೊತ್ತಿಗೆ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಪತಿಯ ಸಾವಿಗೆ ಕಾರಣರಾದವರನ್ನು ಮತ್ತು ಆ ಜಾತಿಯವರನ್ನು ಮನೆಯ ಮುಂದೆ ಬಿಟ್ಟುಕೊಳ್ಳುವುದಾಗಲಿ ಅವರಿಗೆ ಅನ್ನ ನೀರು ನೀಡುವುದಾಗಲಿ ಬೇಡ ಎಂದು ತನ್ನ ಕುಲದವರಾದ ಅಟ್ಟೆನೋರಲ್ಲಿ ಭಾಷೆ ಮಾಡಿಸಿಕೊಂಡಳು.

ಅದೇ ರೀತಿ ಅಟ್ಟೆನೋರು ಹೀಗಲೂ ಸಹ ಅದನ್ನು ಪಾಲಿಸುತ್ತ ಬಂದಿದ್ದಾರೆ. ಮಾಳಮ್ಮ ದೇವಿ ಪತಿಯನ್ನು ಅಗಲಿ ಇರಲಾರೆನೆಂದು ಎಲ್ಲಾ ಅಟ್ಟೆನೋರು ಕುಲದವರ ಸಮ್ಮುಖದಲ್ಲಿ ” ಅಗ್ನಿಪ್ರವೇಶ “ಮಾಡಿದರು.ಎಲ್ಲರು ಮುಂದೆ ನಮ್ಮಗತಿಯೇನು ಎಂದು ಪ್ರಾಥಿಸಿದಾಗ ಅಗ್ನಿಯಲ್ಲಿ ತನ್ನ ಬಲ ಕೈ ಯನ್ನು ಎತ್ತಿ ನಾನು ನಿಮ್ಮಲ್ಲಿದ್ದು ಕಾಪಾಡುತ್ತೆನೆ ಎಂದಾಗ ಕೈ ಗುರುತನ್ನೇ ದೇವರನ್ನಾಗಿ ಪೂಜಿಸುತಿದ್ದೇವೆ, ಕೆಳಗಿನ ಫೋಟೋದಲ್ಲಿ ನೀವು ನೋಡಬಹುದಾಗಿದೆ.

ಅಟ್ಟೆನೋರಲ್ಲಿ “ಅಡ್ಡಮನೆಯವರು, ಗುಬ್ಬು ಗುಡಿಸವರು” ಎಂಬುದಾಗಿ ವಿಂಗಡಿಸಲಾಗಿದೆ ಅಂದರೆ ಒಂದೇ ದೇವಸ್ಥಾನ, ಮಾಳಮ್ಮ ದೇವಿಯೆ ದೇವರು ಯಾವುದೇ ಬೇಧವಿಲ್ಲ .

ಇದಕ್ಕೆ ಒಂದು ಕಥೆಯಿದೆ ಅಟ್ಟೆನೋರು ಕುಲದ ಒಂದೇ ತಾಯಿಯ ಮಕ್ಕಳ ಅಣ್ಣ ತಮ್ಮ ಹೊಲದಲ್ಲಿ ಆಟಆಡುವಾಗ ಮಳೆಬಂದು ಹಳ್ಳ ಹರಿಯುತ್ತಿರ ಬೇಕಾದರೆ ಹಳ್ಳ ನೋಡಲು ಹೋದಾಗ ನೀರಿನಲ್ಲಿ ಪೆಟ್ಟಿಗೆಕೊಚ್ಚಿಕೊಂಡು ಬರುತ್ತದೆ. ಅದನ್ನು ತೆಗೆದು ನೋಡಿದಾಗ ಅದರಲ್ಲಿ ದೇವರ ವಿಗ್ರಹಗಳು ಇರುತ್ತವೆ, ಆಗ ಸೋದರರು ವಿಗ್ರಹಗಳನ್ನ ಆಟ ಆಡಲು ಬಳಸಿಕೊಂಡು ಹುಡುಗಾಟದಂತೆ ದೇವಸ್ಥಾನ ಕಟ್ಟಿದರು, ಅಣ್ಣ ಅಡ್ಡವಾಗಿ, ತಮ್ಮ ಗೋಪುರದಂತೆ ಕಟ್ಟಿದ್ದಕ್ಕೆ ಅಣ್ಣನ ಸಂತತಿ ಅಡ್ಡಮನೆಯವರು, ತಮ್ಮನ ಸತತಿ ಗುಬ್ಬು ಗುಡಿಸಿಲಿನವರಾದರು.

ಅಟ್ಟೆನೋರ ಗೋತ್ರದಲ್ಲಿ ಏಳುಅಮಾವಾಸ್ಯೆ ಮನೆಗಳು, ಏಳುಬಂಡಿಗಳಿವೆ. 1.ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಅಮಾವಾಸ್ಯೆ ಬಂಡಿ. 2.ಮಡಕಸಿರಾ ಹತ್ತಿರದ ರಾಡಲಪಲ್ಲಿ ಈರಪ್ಪಸ್ವಾಮಿ ಅಮಾವಾಸ್ಯೆ ಬಂಡಿ. 3. ಮಡಕಸಿರಾ ತಾಲ್ಲೂಕು ಬುರುಗುಬೆಟ್ಟ ಹತ್ತಿರ ಹೊಸಹಳ್ಳಿ ಅಮಾವಾಸ್ಯೆ ಬಂಡಿ. 4. ಮಡಕಸಿರಾ ತಾಲ್ಲೂಕು ನೇರಲೆಕೆರೆ ಅಮಾವಾಸ್ಯೆ ಬಂಡಿ. 5.ಮಡಕಸಿರಾ ತಾಲ್ಲೂಕು ಮರಿತಿಮ್ಮನಹಳ್ಳಿ ಅಮಾವಾಸ್ಯೆ ಬಂಡಿ. 6.ಹಿರಿಯೂರು ತಾಲ್ಲೂಕು ಕುಂದಲಗೂರ ಹಟ್ಟಿಲಕ್ಕಮ್ಮ ಅಮಾವಾಸ್ಯೆ ಬಂಡಿ. 7 ಮಡಕಸಿರಾ ತಾಲ್ಲೂಕು ಹಿರೆತೀರುಪೆ ಅಮಾವಾಸ್ಯೆ ಬಂಡಿ.

ಮಾಳಮ್ಮ ದೇವಿಯು ಉರಲ್ಲಿ ಇರದೆ ನಿರ್ಜನ ಪ್ರದೇಶದಲ್ಲಿ ನೆಲೆ ನಿಂತಿದ್ದಾಳೆ.ಈ ತಾಯಿ ಶಾಂತಿ ಸ್ವರೂಪಳು. ಆಡಂಬರ, ಉತ್ಸವ ಬೇಕಿಲ್ಲ ಭಕ್ತಿಯೊಂದಿದ್ದರೆ ಸಾಕು ಸಕಲ ಇಷ್ಟಾರ್ಥಗಳನ್ನು ನೆರವೇರಿಸುವ ಮಹಾ ತಾಯಿ.

ಜಾತ್ರೆ ಜಾತ್ರೆಯು ಪ್ರತಿವರ್ಷ ಮಾಡುವುದಿಲ್ಲ ಏಕೆಂದರೆ ಕಟ್ಟು ಪಾಡುಗಳಿವೆ. ದೇವಿಯ ಅರ್ಚಕರು ಉಪವಾಸವಿದ್ದು ಭದ್ರಾವತಿಗೆ ಹೋಗಿ ಬಿದಿರ ಅಕ್ಕಿ ಮತ್ತು ಬಿದಿರಿನಿಂದ ತಯಾರಿಸಿದ ಬುಟ್ಟಿಯನ್ನು ತಂದು ಆ ಬುಟ್ಟಿಯಲ್ಲಿ ಬಿದಿರಕ್ಕಿಯ ತಂಬಿಟ್ಟನ್ನು ದೇವಿಗೆ ನೈವೇದ್ಯ ಮಾಡುತ್ತಾರೆ . ಮತ್ತು ತವರುಮನೆಯಾದ ಹೊಸಕೆರೆ ನಾಗಮ್ಮ ದೇವಿಯ ಪೂಜಾರರ ಮನೆಯಿಂದ ಮಡಿಲಕ್ಕಿ,ಸೀರೆ ಬಂದರೆ ಮಾತ್ರ ಜಾತ್ರೆ ನಡೆಯುವುದು.

ರಾತ್ರಿಯಿಡಿ ದೇವಿಗೆ 24 ಅರೆ ಮತ್ತು ಘಂಟಘೋಶದಿಂದ ನಿಲ್ಲಿಸದೆ ಒಂದೇ ಸಮನೆ ಪೂಜೆ ಮಾಡುತ್ತಾರೆ. ದೇವಿಯ ಹಿರಿಯ ಅರ್ಚಕರು ಮೊಳಕಾಲೂರಿ ಕೈ ಹಿಡಿದು ಕುಳಿತುಕೊOಡಿರುತ್ತಾರೆ ಬೆಳಗಿನ ಜಾವ ಸುಮಾರಿಗೆ ಕರಗ ತಾನಾಗಿಯೇ ಬOದು ಪೂಜಾರಿಯ ಕೈ ಮೇಲೆ ಕೂರುತ್ತದೆ. ಅರ್ಚಕರು, ಗುಡಿಗೌಡರು, ಯಜಮಾನರು, ಅಣ್ಣ ತಮ್ಮಂದಿರು ಹಾಗೂ ನೆಂಟರು ಸಮೇತ ಕರಗದೊಂದಿಗೆ ಸಾಗಿ ಜಲಧಿ ಮಾಡುತ್ತಾರೆ.

ಜಾತ್ರೆಯ ಪ್ರಮುಖ ಆಕರ್ಷಣೆಯೆಂದರೆ ಏಳು ಊರಿನಿಂದ ಬಂದಂತಹ ಬಂಡಿಗಳನ್ನು ನಮ್ಮ ಬಂಡಿ ಮೊದಲು, ನಮ್ಮ ಬಂಡಿ ಮೊದಲು ಎಂದು ಸದ್ದು ಗದ್ದಲಗಳು ನಡೆಯುತ್ತವೆ. ಅದಕ್ಕೆ ಎಲ್ಲರು ತೀರ್ಮಾನಿಸಿ ಮೊದಲು ಹೆಣ್ಣುಮಗಳು ಓಡಿಸುಂತೆ ಬಿಟ್ಟುಕೊಟ್ಟಿದ್ದಾರೆ. ಹಿಂದಿನ ಬಾರಿ ಮೈಸೂರ್ ಮಾಳಕ್ಕ ಬಂಡಿ ಓಡಿಸಿದರು. ಹಾಗೆಯೇ ಮುಡಿತೆಗಿವುದು, ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ.

2)ಶ್ರೀ ಈರಮಾಳಮ್ಮ ದೇವಿ ಈಚಲಡಿ ಮಡಕಶಿರಾ ತಾ. ಅನಂತಪುರ ಜಿಲ್ಲೆ, AP 3)ಶ್ರೀ ಜಲದಿಬೊಪ್ಪರಾಯ ಸ್ವಾಮಿ ನಾರಾಯಣಪುರ ಚಳ್ಳಕೆರೆ ತಾ. ಚಿತ್ರದುರ್ಗ ಜಿಲ್ಲೆ

ಅರಳೇನವರು

ಬದಲಾಯಿಸಿ

ಅರಸನವರು

ಬದಲಾಯಿಸಿ

ಅಲ್ಪೇನವರು

ಬದಲಾಯಿಸಿ

ಅಳುವನವರು

ಬದಲಾಯಿಸಿ

ಅಷ್ಟೇನವರು

ಬದಲಾಯಿಸಿ

ಆವಿನವರು

ಬದಲಾಯಿಸಿ

ಉಂಡೇನವರು

ಬದಲಾಯಿಸಿ

ಎಮ್ಮೇನವರು

ಬದಲಾಯಿಸಿ

ಎರಡು ಕೆರೆಯವರು

ಬದಲಾಯಿಸಿ

ಒಳಕಲ್ಲು

ಬದಲಾಯಿಸಿ

ಕಂಬಳಿಯವರು

ಬದಲಾಯಿಸಿ

ಕಕ್ಕೇನವರು

ಬದಲಾಯಿಸಿ

ಕಠಾರದವರು

ಬದಲಾಯಿಸಿ

ಕರಡೆನವರು

ಬದಲಾಯಿಸಿ

ಕಾಗೇನವರು

ಬದಲಾಯಿಸಿ

ಕೊಗ್ಗೇನವರು

ಬದಲಾಯಿಸಿ

ಗರಿಕೇನವರು

ಬದಲಾಯಿಸಿ

ಗಾಳೇನವರು

ಬದಲಾಯಿಸಿ

ಗುಡಿಯವರು

ಬದಲಾಯಿಸಿ

ಗೋಣೆನವರು

ಬದಲಾಯಿಸಿ

ಜರಿಯವರು

ಬದಲಾಯಿಸಿ

ಜಲದೇನವರಿಗೆ ಮುಖ್ಯವಾಗಿ ಹಾವಿನವರು ಮತ್ತು ಹಟ್ಟೆನವರು ಅಣ್ಣ ತಮ್ಮಂದಿರು. ಜಲದೇವರು ಅತಿ ಮುಖ್ಯವಾಗಿ ಸಿರಾ ತಾಲೂಕು ಬೆಜ್ಜಿಹಳ್ಳಿ ಗ್ರಾಮದಲ್ಲಿ ನೆಲೆಸಿರುವಂತಹ ಜಲದೀ ಬೊಪರಾಯ ಸ್ವಾಮಿ ಹಾಗೂ ಕೊಮ್ಮರೆನಹಳ್ಳಿಯ ಬೀರಲಿಂಗೇಶ್ವರ ಸ್ವಾಮಿ ಮತ್ತು ಹಿರಿಯೂರು ತಾಲೂಕಿನ ಬೇವಿನಹಳ್ಳಿ ನೆಲೆಸಿರುವಂತಹ ಬೇವಿನಾಳಮ್ಮ ನನ್ನು ಪೂಜೆ ಮಾಡುತ್ತಾರೆ.

ಜಾನಕಲ್ಲೋರು

ಬದಲಾಯಿಸಿ

ಜೀರಿಗೆನವರು

ಬದಲಾಯಿಸಿ

ದಮಗತ್ತಿಯವರು

ಬದಲಾಯಿಸಿ

ದಸಲೇನವರು

ಬದಲಾಯಿಸಿ

ಧಾನ್ಯದವರು

ಬದಲಾಯಿಸಿ

ಬಡವನವರು

ಬದಲಾಯಿಸಿ

ಬಸಲೇನವರು

ಬದಲಾಯಿಸಿ

ಬೆಳ್ಳೆನವರು

ಬದಲಾಯಿಸಿ

ಮಾಣಸೇನವರು

ಬದಲಾಯಿಸಿ

ಮಾಯಿನವರು

ಬದಲಾಯಿಸಿ

ಮೀಸ್ಲೇನವರು

ಬದಲಾಯಿಸಿ

ಯರ್ರೇನವರು

ಬದಲಾಯಿಸಿ

ಯಲೆಯವರು

ಬದಲಾಯಿಸಿ

ರಾಗೇನವರು

ಬದಲಾಯಿಸಿ

ರಾವುತದವರು

ಬದಲಾಯಿಸಿ

ವನಮನವರು

ಬದಲಾಯಿಸಿ

ವುಳ್ಳೇನವರು

ಬದಲಾಯಿಸಿ

ಶೆಟ್ಟೇನವರು

ಬದಲಾಯಿಸಿ

ಸಹಸ್ರದವರು

ಬದಲಾಯಿಸಿ

ಸಾರಂಗದವರು

ಬದಲಾಯಿಸಿ

ಸೂರೇನವರು

ಬದಲಾಯಿಸಿ

ಹಾಲೇನವರು

ಬದಲಾಯಿಸಿ

ಹುತ್ತದವರು

ಬದಲಾಯಿಸಿ

ಹುಳಿಯಾರರು

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ