ಕುಂಚವು ಬಣ್ಣ ಅಥವಾ ಕೆಲವೊಮ್ಮೆ ಶಾಯಿಯನ್ನು ಲೇಪಿಸಲು ಬಳಸಲಾದ ಉಪಕರಣ. ಕುಂಚವನ್ನು ಸಾಮಾನ್ಯವಾಗಿ ಮೋಟುಕೂದಲುಗಳನ್ನು ಒಂದು ಹಿಡಿಕೆಗೆ ಪಟ್ಟಿವಲಯದಿಂದ ಕಟ್ಟುವ ಮೂಲಕ ತಯಾರಿಸಲಾಗುತ್ತದೆ. ಕುಂಚಗಳು ವಿವಿಧ ಗಾತ್ರಗಳು, ಆಕಾರಗಳು ಮತ್ತು ವಸ್ತುಗಳಲ್ಲಿ ಲಭ್ಯವಿವೆ. ಹೆಚ್ಚು ದಪ್ಪನೆಯ ಕುಂಚಗಳನ್ನು ಬಣ್ಣ ತುಂಬಲು ಬಳಸಲಾಗುತ್ತದೆ, ಮತ್ತು ಹೆಚ್ಚು ತೆಳ್ಳಗಿನ ಕುಂಚಗಳನ್ನು ಸೂಕ್ಷ್ಮ ಅಂಶಗಳಿಗಾಗಿ ಬಳಸಲಾಗುತ್ತದೆ. ಕುಂಚಗಳನ್ನು ಬಣ್ಣ ಹಚ್ಚಲು ಮತ್ತು ಅಲಂಕಾರ ಮಾಡಲು ಬಳಸಲಾದ ಅಲಂಕರಿಸುವವರ ಕುಂಚಗಳು ಮತ್ತು ದೃಶ್ಯ ಕಲೆಗೆ ಬಳಸಲಾದ ಕಲಾವಿದರ ಕುಂಚಗಳು ಎಂದು ವಿಭಜಿಸಬಹುದು. ಮೋಟುಕೂದಲುಗಳು ನೈಸರ್ಗಿಕ ಅಥವಾ ಸಂಶ್ಲೇಷಿತವಿರಬಹುದು. ತಂತುಗಳು ಸಂಶ್ಲೇಷಿತವಾಗಿದ್ದರೆ, ಅವುಗಳನ್ನು ಪಾಲಿಯೆಸ್ಟರ್, ನೈಲಾನ್ ಅಥವಾ ನೈಲಾನ್ ಮತ್ತು ಪಾಲಿಯೆಸ್ಟರ್‌ನ ಮಿಶ್ರಣದಿಂದ ತಯಾರಿಸಿರಬಹುದು. ತಂತುಗಳು ಟೊಳ್ಳು ಅಥವಾ ಸಾಂದ್ರವಾಗಿರಬಹುದು ಮತ್ತು ಕ್ರಮೇಣ ಮೊನಚಾಗಿದ್ದು ಅಥವಾ ಮೊನಚಾಗದ್ದಾಗಿರಬಹುದು. ಮೊನಚಾದ ತಂತುಗಳಿರುವ ಕುಂಚಗಳು ಹೆಚ್ಚು ನಯವಾದ ಒಪ್ಪವನ್ನು ನೀಡುತ್ತವೆ.

ಕುಂಚಗಳು
"https://kn.wikipedia.org/w/index.php?title=ಕುಂಚ&oldid=888939" ಇಂದ ಪಡೆಯಲ್ಪಟ್ಟಿದೆ