ಕಿಲ್ಲಾ ಮುಬಾರಕ್ ಕಾಂಪ್ಲೆಕ್ಸ್, ಪಟಿಯಾಲಾ
ಈ ಕಿಲ್ಲಾವನ್ನು ಸಿಖ್ ಅರಮನೆಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆ ಎನ್ನಬಹುದು. ಇದು ನಗರದ ಒಂದು ಪ್ರಮುಖ ಆಕರ್ಷಣೆ. [೧]ಈ ಕಾಂಪ್ಲೆಕ್ಸ್ ಸುತ್ತಲೂ ಪಟಿಯಾಲಾ ನಗರವು ಭವ್ಯವಾಗಿ ಬೆಳೆದಿರುವುದನ್ನು ಗಮನಿಸಬಹುದು. ಈ ಸಂಕೀರ್ಣವನ್ನು ಮಹಾರಾಜ ಅಲಾ ಸಿಂಗ್‍ರಿಂದ 1764 ರಲ್ಲಿ ನಿರ್ಮಿಸಲಾಗಿದ್ದು, ಹಳೆಯ ಮೋತಿ ಬಾಗ್ ಅರಮನೆ ನಿರ್ಮಾಣವಾಗುವವರೆಗೂ ಪಟಿಯಾಲಾ ರಾಜವಂಶಸ್ಥರು ಇಲ್ಲಿಯೆ ವಾಸ ಮಾಡಿದ್ದರು.[೨] ಮೊದಲಿಗೆ ಈ ಸಂಕೀರ್ಣವನ್ನು ಒಂದು ಮಣ್ಣಿನ ಕೋಟೆಯನ್ನಾಗಿ ಹತ್ತು ಎಕರೆ ವಿಸ್ತೃತ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು ನಂತರ ಇದನ್ನು ನೈಜವಾದ ಕೋಟೆಯನ್ನಾಗಿ ಮರುನಿರ್ಮಾಣ ಮಾಡಲಾಯಿತು.[೩]
ಈ ಸಂಕೀರ್ಣವನ್ನು ಒಳಭಾಗ ಹಾಗು ಹೊರಭಾಗವೆಂದು ಎರಡು ವಿಭಾಗಗಳಲ್ಲಿ ವಿಂಗಡಿಸಬಹುದು.[೪] ಒಳಭಾಗವನ್ನು ಕಿಲ್ಲಾ ಅಂದ್ರೂನ್ ಎಂದು ಕರೆದರೆ ಹೊರಭಾಗವನ್ನು ದರ್ಬಾರ್ ಹಾಲ್ ಎಂದು ಕರೆಯಲಾಗುತ್ತದೆ. ಇಲ್ಲಿರುವ ದರ್ಶನಿ ದ್ವಾರ, ಶಿವ ದೇವಾಲಯ, ಸಾಂಪ್ರದಾಯಿಕ ಆಭರಣಗಳು ಮತ್ತು ಬಟ್ಟೆಗಳನ್ನು ಮಾರುವ ಮಳಿಗೆಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತವೆ. ಈ ಸಂಕೀರ್ಣದ ವಾಸ್ತುಶೈಲಿಯು ಮುಘಲ್ ಅಂತ್ಯದ ಹಾಗು ರಾಜಸ್ಥಾನಿ ಶೈಲಿಯ ಉತ್ತಮ ಮಿಶ್ರಣವಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2010-01-18. Retrieved 2016-07-09.
- ↑ "ಆರ್ಕೈವ್ ನಕಲು". Archived from the original on 2010-07-28. Retrieved 2016-07-09.
- ↑ 4 heritage sites find saviour in Monument Fund
- ↑ "ಆರ್ಕೈವ್ ನಕಲು". Archived from the original on 2009-08-02. Retrieved 2016-07-09.