ಕಿರಿಕಿರಿಯು ಕಿರುಕುಳ ಮತ್ತು ಒಬ್ಬರ ಪ್ರಜ್ಞಾಪೂರ್ವಕ ಯೋಚನೆಯಿಂದ ಗಮನಭಂಗದಂತಹ ಪರಿಣಾಮಗಳ ಲಕ್ಷಣಗಳಿರುವ ಒಂದು ಅಹಿತಕರ ಮಾನಸಿಕ ಸ್ಥಿತಿ. ಇದು ಹತಾಶೆ ಮತ್ತು ಕೋಪದಂತಹ ಭಾವನೆಗಳಿಗೆ ಕಾರಣವಾಗಬಹುದು. ಸುಲಭವಾಗಿ ಕಿರಿಕಿರಿಯಾಗುವ ಲಕ್ಷಣವನ್ನು ಸೂಕ್ಷ್ಮವೇದಿತ್ವವೆಂದು ಕರೆಯಲಾಗುತ್ತದೆ. ಒಬ್ಬರಿಗೆ ಒಂದು ನಿರ್ದಿಷ್ಟ ಪ್ರಚೋದನೆಯು ಏಕೆ ಕಿರಿಕಿರಿ ಉಂಟುಮಾಡುತ್ತದೆ ಎಂಬುದಕ್ಕೆ ವಿವಿಧ ಕಾರಣಗಳಿವೆ. ಕಿರಿಕಿರಿಯ ಮಾಪನವು ಬಹಳ ವ್ಯಕ್ತಿನಿಷ್ಠವಾಗಿದೆ. ಮಾಪನದ ಪ್ರಯತ್ನವಾಗಿ, ಕಿರಿಕಿರಿ ಮೇಲಿನ ಮನೋವೈಜ್ಞಾನಿಕ ಅಧ್ಯಯನಗಳು ಹಲವುವೇಳೆ ಭಾಗಿಗಳು ಒಂದು ಮಾಪಕದ ಮೇಲೆ ಸ್ವತಃ ಕೊಟ್ಟ ಕಿರಿಕಿರಿಯ ಮಟ್ಟಗಳ ಸ್ಥಾನಗಳನ್ನು ಅವಲಂಬಿಸುತ್ತವೆ. ಯಾವುದೇ ಬಗೆಯ ಪ್ರಚೋದನೆಗಳು ಕಿರಿಕಿರಿಯನ್ನು ಉಂಟುಮಾಡಬಲ್ಲವು, ಉದಾಹರಣೆಗೆ ಪಾರ್ಶ್ವದಲ್ಲಿ ತಿವಿಸಿಕೊಳ್ಳಲ್ಪಡುವುದು ಅಥವಾ ಒಂದು ಹಾಡನ್ನು ಮತ್ತೆಮತ್ತೆ ಕೇಳುವುದು. ಆರಂಭದಲ್ಲಿ ಒಬ್ಬರು ಅನೇಕ ಪ್ರಚೋದನೆಗಳನ್ನು ಹಿತಕರವೆಂದು ಕಾಣಬಹುದು ಅಥವಾ ಅವುಗಳಿಗೆ ತಟಸ್ಥವಿರಬಹುದು, ಆದರೆ ಪುನರಾವರ್ತಿತ ಮುಂದುವರಿದ ಒಡ್ಡಿಕೆಯಿಂದ ಇವು ಕಿರಿಕಿರಿ ಉಂಟುಮಾಡಬಹುದು. ಹಲವುವೇಳೆ ಒಬ್ಬರು ಈ ವಿದ್ಯಮಾನವನ್ನು ಜನಪ್ರಿಯ ಸಂಗೀತ, ಮೇಮ್‍ಗಳು, ಟೀವಿ ಜಾಹೀರಾತುಗಳು, ಮತ್ತು ಜಾಹೀರಾತು ಝಣಕ ಪದ್ಯಗಳಂತಹ ಮಾಧ್ಯಮಗಳಿಂದ ಎದುರಿಸಬಹುದು. ಇವನ್ನು ಸ್ವಭಾವತಃ ವಾರಗಳು ಅಥವಾ ತಿಂಗಳುಗಳ ಅವಧಿಯಲ್ಲಿ ನಿರಂತರವಾಗಿ ಪುನರಾವರ್ತಿಸಲಾಗುತ್ತದೆ.

ಕಿರಿಕಿರಿಗೆ ಒಬ್ಬರ ಪ್ರತಿಕ್ರಿಯೆಯು, ಕನಿಷ್ಠಪಕ್ಷ ಗ್ರಹಿತ ಕಾರಣವು ಮತ್ತೊಬ್ಬ ವ್ಯಕ್ತಿಯಾಗಿದ್ದಾಗ, ಹೆಚ್ಚು ವಿಪರೀತ ಮಟ್ಟಗಳಿಗೆ ಉಲ್ಬಣಿಸುತ್ತದೆ ಏಕೆಂದರೆ ಅವು ಪರಿಹಾರವಾಗದೇ ಉಳಿದುಬಿಡುತ್ತವೆ ಎಂದು ಅಂತರರಾಷ್ಟ್ರೀಯ ಸಂಘರ್ಷ ನಿರ್ವಹಣಾ ಪತ್ರಿಕೆಯಲ್ಲಿ ಪ್ರಕಟನೆಗೊಂಡ ಅಧ್ಯಯನವು ಕಂಡುಕೊಂಡಿತು.[] ಕಿರಿಕಿರಿಯು ಉಲ್ಬಣವಾದಂತೆ ಕಿರಿಕಿರಿಗೆ ಒಬ್ಬರು ತಮ್ಮನ್ನು ದೂಷಿಸಿಕೊಳ್ಳುವ ಬದಲಾಗಿ ಕಿರಿಕಿರಿಯನ್ನು ಉಂಟುಮಾಡುತ್ತಿರುವ ಪಕ್ಷವನ್ನು ದೂಷಿಸುವ ಸಾಧ್ಯತೆ ಹೆಚ್ಚು ಎಂದೂ ಇದು ಕಂಡುಕೊಂಡಿತು.

ಉಲ್ಲೇಖಗಳು

ಬದಲಾಯಿಸಿ
  1. Dean G Pruitt, John C Parker, Joseph M Mikolic. "Escalation as a reaction to persistent annoyance.", International Journalists of Conflict Management. Bowling Green: July 1997, Vol 8, Issue 3; pg. 252