ಕಿನ್ನೋ (Kinnow) - ಅತ್ಯಂತ ಆಕರ್ಷಕ, ಸಿಹಿ-ಹುಳಿ ಮಿಶ್ರಿತ ಹಣ್ಣು ಇದು. ಕಿತ್ತಳೆ ಹಣ್ಣು ಸಿಟ್ರಸ್ ಜಾತಿಗೆ ಸೇರಿದ್ದು, ಸಾವಿರಾರು ವರ್ಷಗಳಿಂದಲೂ ಬಳಕೆಯಲ್ಲಿದೆ. ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯದಲ್ಲಿ ಎಚ್.ಬಿ. ಫ್ರಾಸ್ಟ್ ಎಂಬ ವಿಜ್ಞಾನಿ ‘ಕಿಂಗ್’ ಮತ್ತು ‘ವಿಲ್ಲೊ’ ಎಂಬ ಎರಡು ಸಿಟ್ರಸ್ ಜಾತಿಯ ತಳಿಗಳನ್ನು ಕಸಿ ಮಾಡಿ ಪಡೆದ ತಳಿಯೇ ಈ ಕಿನೋ. ಇದು ಬಹುತೇಕ ಕಿತ್ತಳೆ ಹಣ್ಣನ್ನೇ ಹೋಲುತ್ತದೆ. ಈ ಹಣ್ಣು 1949ರಲ್ಲಿಯೇ ಭಾರತ ದೇಶಕ್ಕೆ ಕಾಲಿಟ್ಟಿತು ಎಂಬುದು ಬಹುತೇಕ ತಜ್ಞರ ಅನಿಸಿಕೆ. ಭಾರತ ದೇಶದಲ್ಲಿ ಪಂಜಾಬ್, ಗುಜರಾತ್, ಉತ್ತರ ಪ್ರದೇಶ ಮುಂತಾದೆಡೆ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಇದೀಗ ಈ ಸಾಲಿನಲ್ಲಿ ಕರ್ನಾಟಕವೂ ಸೇರಿಕೊಂಡಿದೆ.

ಕಿನ್ನೋ
ಕಿನ್ನೋ

ಇದು ಬಿಸಿಲಿನ ವಾತಾವರಣದಲ್ಲಿ ೩೫ ಅಡಿಯಷ್ಟು ಎತ್ತರ ಬೆಳೆಯುತ್ತವೆ. ಕಿನ್ನೋ ಮರಗಳು ಹೆಚ್ಚು ಫಲವತ್ತಾದುದು. ಒಂದು ಮರದೆಲ್ಲಿ ಸಾಮಾನ್ಯವಾಗಿ 1000 ಹಣ್ಣುಗಳನ್ನು ಹುಡುಕುವಷ್ಟು ಇರುತ್ತದೆ. ಜನವರಿ ಅಥವಾ ಫೆಬ್ರವರಿಯಲ್ಲಿ ಹಣ್ಣುಗಳು ಪಕ್ವವಾಗಿರುತ್ತವೆ. ಅದನ್ನು ಸುಲಭವಾಗಿ ಸುಲಿಯಬಹುದಾಗಿರುತ್ತದೆ ಮತ್ತು ಅದು ಹೆಚ್ಚಿನ ರಸ ಇರುವ ಹಣ್ಣಾಗಿದೆ.

"https://kn.wikipedia.org/w/index.php?title=ಕಿನ್ನೋ&oldid=719202" ಇಂದ ಪಡೆಯಲ್ಪಟ್ಟಿದೆ