ಕಾಲೆ ಕೋಲಸತ್ತವರ ಆಸೆ ತೀರಿಸಲು, ಬದುಕಿರುವವರಿಗೆ ಅಭಯ ನೀಡಲು ಮನೆಯ ಹಿರಿಯರು ಮೃತಪಟ್ಟ 13ನೇ ದಿನಕ್ಕೆ ನಡೆಸುತ್ತಿದ್ದ ಕೋಲವನ್ನು ಕಾಲೆ ಕೋಲ ಎಂದು ಕರೆಯುತ್ತಾರೆ.

ಕಾಲೆ ಕೋಲ ಎಂದರೇನು?

ಬದಲಾಯಿಸಿ

ತುಳುನಾಡಿನಲ್ಲಿ ಹಿಂದೆ ವೈಕುಂಠರಾಧನೆ ಎಂಬ ವೈದಿಕ ಆಚರಣೆ ಅವೈದಿಕರಲ್ಲಿ ಇರಲಿಲ್ಲ. ಬಡವರ ಮನೆಯಲ್ಲಿ ಸಾವು ಸಂಭವಿಸಿದರೆ, ಗುರ್ಜಿ ನಿರ್ಮಿಸಿ (ಗೋಪುರದಂತೆ ಮಾಡಿ ಬಟ್ಟೆ ಸುತ್ತಿ) ಅಥವಾ ದೇಲಗೂಡು ನಿರ್ಮಿಸಿ(ನಾಲ್ಕು ಕಂಬ ಹಾಕಿ ಅದರ ಸುತ್ತ ಸೀರೆ ಸುತ್ತಿ, ಅದರ ತಲೆಗೆ ಗುರ್ಜಿ ಕೂರಿಸುವುದು), ಅಕ್ಕಿ ಹಾಕಿ ಉತ್ತರಕ್ರಿಯೆ ಮಾಡಲಾಗುತ್ತಿತ್ತು. ಸಿರಿವಂತರ ಮನೆಯಲ್ಲಿ, ಗುರಿಕಾರರ ಮನೆಯಲ್ಲಿ ಮನೆಯ ಹಿರಿಯ ಮೃತಪಟ್ಟಾಗ ಈ ಕಾಲೇ ಕೋಲ ಅಥವಾ ಸಾವು ಕೋಲ ನಡೆಯುತ್ತದೆ.[]

ಸಾವು ಕೋಲ

ಬದಲಾಯಿಸಿ

ಉಡುಪಿಯಲ್ಲಿ ಕಾಲೆಕೋಲ ಎಂದು ಕರೆಯುವ ಈ ಕೋಲಕ್ಕೆ ದಕ್ಷಿಣ ಕನ್ನಡದಲ್ಲಿ ಸಾವುಕೋಲ ಎಂದು ಕರೆಯಲಾಗುತ್ತದೆ. ದಕ್ಷಿಣ ಕನ್ನಡದಲ್ಲಿ ಬೈದರಿರುವೆರ್, ಕುದುರೆಕೋಲ, ಎರುಕೋಲ, ಕೊರಗ್ಗೆರೆ ಕೋಲ ಎಂಬ ವಿಭಾಗಗಳಿವೆ. ಆಯಾ ಕುಟುಂಬದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಈ ಕೋಲಗಳನ್ನು ನಡೆಸಲಾಗುತ್ತದೆ. ದಕ್ಷಿಣ ಕನ್ನಡದಲ್ಲಿ ಇಂಥ ಕೋಲಗಳು ನಿಂತು ಎರಡು ದಶಕಗಳು ಕಳೆದಿವೆ.[]

ಕೋಲಕ್ಕೆ ಬಣ್ಣ ಹಚ್ಚುವುದು

ಬದಲಾಯಿಸಿ

ಹನ್ನೆರಡು ದಿನ ದುಖಃ ಸೂಚಕದ ಸೂತಕದ ಮನೆಯನ್ನು ಯಥಾಸ್ಥಿತಿಗೆ ತರಲು ಕಾಲೆ ಕೋಲವನ್ನು ಏರ್ಪಡಿಸುವುದು. ಇದೊಂದು ಮನೋರಂಜನೆ ಹೊರತು ಬೇರೆಯಾವುದೇ ವಿಧಿ ವಿಧಾನಗಳಲ್ಲ. ಶರೀರ ಪೂರ್ತಿಕಪ್ಪು ಬಣ್ಣವನ್ನು(ಕಾಲೆ ಬಣ್ಣ) ಬಳಿದುಕೊಂಡು ಅಶ್ಲೀಲವಾಗಿ ನಲಿಯುವುದು.ಮಾತಾಡುತ್ತಾ ನಟಿಸುವುದು.ಸೊಂಟಕ್ಕೆ ಒಂದು ತುಂಡು ಕಪ್ಪು ಬಟ್ಟೆಯನ್ನು ಸುತ್ತಿಕೊಂಡು ಇರುವುದು. ಹಿರಿಯರು ಹೇಳುವಂತೆ ಸಿಲಂಟಿಬಾಳೆ ಕಾಯಿಯನ್ನು ಸೊಂಟಕ್ಕೆ ಕಟ್ಟಿ ಕೊಂಡು ಅಶ್ಲೀಲಮಾತುಗಳನ್ನು ಆಡುತ್ತಾ ನಟಿಸುವುದು.

ಪೂ-ಕಲೆ ಪದವೇ ಪೂಕರೆ ಆಗಿದೆ.ಅಡಿಕೆ ಮರದಸಲಾಕೆಗಳಿಂದ ಕಂಭಗಳ ರಚನೆಯಂತೆ ಮಾಡುವರು.ಅವುಗಳಲ್ಲಿ ಗೂಡುಗಳನ್ನು ರಚಿಸಿ ಕಲಾತ್ಮಕವಾಗಿ ಬಣ್ಣ ಬಣ್ಣದ ಬಟ್ಟೆಗಳನ್ನು ಸುತ್ತುವುದು. ಅವುಗಳನ್ನುಹೂವುಗಳಿಂದ ಶೃಂಗಾರದಿಂದ ಅಲಂಕರಿಸುವುದು. ಹೂ-ಕಲೆ ಯೇ ಪೂ-ಕಲೆ(ಪೂಕರೆ) ಆಗಿದೆ. ಈ ರಚಿಸಿದ ಪೂಕಲೆಯನ್ನು ಮರಣ ಹೊಂದಿದವರ ಗೋರಿ/ದೂಪೆಯ ಸುತ್ತ ಇಡುವರು.ಅರಿ ಬಿರ್ಕುನವಿಧಿ ವಿಧಾನ ನಡೆಯುತ್ತದೆ. ಇದು ಮುಗಿದರೆ ಬೊಜ್ಜದಕಾರ್ಯಕ್ರಮ ಮುಗಿದಂತೆ. ನಂತರದ ಎಲ್ಲಾ ಕಾರ್ಯಕ್ರಮಗಳು ಮರಣಹೊಂದಿದವರಿಗೆ ಸಂಬಂಧ ಪಟ್ಟಿರುವುದಲ್ಲ. ಮದುವೆಗಳಲ್ಲಿ ದೇಸೆ(ಅಕ್ಷತೆ)ಹಾಕಿದ ಮೇಲೆಮದುವೆ ಮುಗಿದಂತೆ. ನಂತರದ ಕ್ರಮಗಳು ಮದುವೆಗೆಸಂಬಂಧ ಪಟ್ಟಿರುವುದಿಲ್ಲ. ಅದರಂತೆ ಇಲ್ಲಿ ಕೂಡಾ.

ಕಾಗೆಗೆ ಅನ್ನ ಇಡುವುದು

ಬದಲಾಯಿಸಿ

ಮರಣೋತ್ತರದ ಎಲ್ಲಾ ಹದಿಮೂರು ದಿನಗಳ ಕ್ರಮಗಳು ವಿಧಿವತ್ತಾಗಿ ಯಶಸ್ವಿಯಾಗಿ ನಡೆದಿದೆಯೇಎಂದು ನೋಡುವುದರ ವಿಧಾನವೇ ಇದಾಗಿದೆ. ಕಾಗೆಗಳು ಬಂದು ಬೊಜ್ಜದ ಊಟವನ್ನು ಸ್ವೀಕಾರಮಾಡಿದರೆ ಮಡಿದವರು ತೃಪ್ತಿ ಪಟ್ಟಿದ್ದಾರೆ ಎಂಬ ನಂಬಿಕೆ. ಮುಟ್ಟದೆ ಇದ್ದರೆ ಏನೋ ನಮ್ಮಿಂದ ತಪ್ಪಾಗಿದೆ ಎಂಬನಂಬಿಕೆ. ಮಡಿದವರು ಬಂದು ಊಟ ಸ್ವೀಕಾರ ಮಾಡುತ್ತಾರೆಂಬುದಲ್ಲ. ಅರಿ ಬಿರ್ಕಿದ ಮೇಲೆ ಮಡಿದವರ ಈ ಮಣ್ಣಿನ ಋಣ ಮುಗಿಯುತ್ತದೆ.

ಉಲ್ಲೇಖಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ಭಂಡಾರಿ, ಐ ಕೆ ಗೋವಿಂದ. "ಕಾಲೆ ಕೋಲ – ಭಂಡಾರಿವಾರ್ತೆ". Retrieved 16 July 2024.
  2. "ಕಾಲೆಕೋಲಕ್ಕೆ ಪುನರ್‌ಜೀವ: ಇದು ಭೂತಕೋಲವಲ್ಲ, ಸಾವು ಕೋಲ!". Vijay Karnataka. Retrieved 16 July 2024.