ಕಾಲಕಣ್ಣಿಯ ಕಾಮವ್ವ

ಕಾಲಕಣ್ಣಿ ಕಾಮವ್ವ
ಜನನ೧೧೬೦
ಅಂಕಿತನಾಮನಿರ್ಭೀತಿ ನಿಜಲಿಂಗ


ಕಾಲಕಣ್ಣಿ ಕಾಮವ್ವ

ಬದಲಾಯಿಸಿ

ಈಕೆಯ ವೈಯಕ್ತಿಕ ಪೂರ್ವಪರಗಳೊಂದೂ ತಿಳಿದು ಬರುವುದಿಲ್ಲ. "ಕಾಲಕಣ್ಣಿ" ಎಂಬುದು ಸ್ಥಳನಾಮ ವಿಶೇಷಣವೂ, ಕಾಯಕ ಸೂಚಕವೂ ಸ್ಪಷ್ಟವಾಗಿಲ್ಲ. ಆದರೆ ಈಕೆಯ ಕೆಲವು ವಚನಗಳಲ್ಲಿ ಕರಣೇಂದ್ರಿಯಗಳನ್ನು ಲಿಂಗದಲ್ಲಿ ಕಟ್ಟುವ ನಿಷ್ಠೆ, ಗುರು-ಲಿಂಗ-ಜಂಗಮರ ಕಾಲ ಕಟ್ಟುವ ಶ್ರದ್ಧೆ, ಹೆಣ್ಣು-ಗಂಡೆಂಬ ಭೇಧವಿಲ್ಲದೆ ತನು ಮನಗಳ ಪಾವಿತ್ರತೆಯನ್ನು ಎತ್ತಿ ಹಿಡಿಯುವ ಪ್ರಾಮಾಣಿಕತೆ, ಡಾಂಬಿಕ ಭಕ್ತರ ಬಗೆಗಿರುವ ರೊಚ್ಚು ದಂಗು ಬಡಿಸುತ್ತದೆ. ಈಕೆಯ ವಚನಗಳ ಅಂಕಿತ "ನಿರ್ಭೀತಿ ನಿಜಲಿಂಗ". ಈಕೆಯೊಬ್ಬಳು ಗೌಪ್ಯ ವಚನಕಾರ್ತಿಯಾಗಿದ್ದಳು ಎಂದು ನಂಬಲಾಗಿದೆ.[]

ಎನ್ನ ಕರಣಂಗಳ ಲಿಂಗದಲ್ಲಿ ಕಟ್ಟುವೆ
ಗುರು ಲಿಂಗ ಜಂಗಮರ ಕಾಲ ಕಟ್ಟುವೆ
ವ್ರತಭ್ರಷ್ಟರ ನಿಟ್ಟೊರಸುವೆ
ಸುಟ್ಟು ತುರತುರನೆ ತೂರುವೆ
ನಿರ್ಭೀತಿ ನಿಜಲಿಂಗದಲ್ಲಿ!

ಉಲ್ಲೇಖಗಳು

ಬದಲಾಯಿಸಿ