ಜರ್ಮನಿಯ ಜೈವಿಕ ರಸಾಯನವಿಜ್ಞಾನಿಯಾಗಿದ್ದ ಕಾರ್ಲ್ ಝೀಗ್ಲರ್ರವರು 1898ರ ನವೆಂಬರ್ 26ರಂದು ಕಾಸ್ಸೆಲ್ನಲ್ಲಿ ಜನಿಸಿದರು. ಕಾರ್ಬನ್ ಪರಮಾಣುಗಳ ದೊಡ್ಡ ಉಂಗುರಗಳನ್ನು ಹೊಂದಿರುವ ಸಂಯುಕ್ತಗಳನ್ನು ತಯಾರಿಸುವ ವಿಧಾನವನ್ನು ಝೀಗ್ಲರ್ರವರು 1933ರಲ್ಲಿ ಕಂಡುಹಿಡಿದರು. ಮುಂದೆ ಸುವಾಸನಾಯುಕ್ತ ಪರಿಮಳದ್ರವ್ಯಗಳನ್ನು ಬೇಕಾದ ಕಸ್ತೂರಿಗಳನ್ನು ಸಂಶ್ಲೇಷಿಸಲು ಆ ವಿಧಾನವನ್ನು ಬಳಸಲಾಯಿತು. 1945ರಲ್ಲಿ ಅಂದರೆ ಎರಡನೆಯ ವಿಶ್ವಸಮರದ ನಂತರ ಅವರು ಅಲ್ಯೂಮಿನಿಯಂನ ಜೈವಿಕ ಸಂಯುಕ್ತಗಳ ಬಗ್ಗೆ ತಮ್ಮ ಸಂಶೋಧನೆಯನ್ನು ಆರಂಭಿಸಿ, ಅಲ್ಯೂಮಿನಿಯಂ ಲೋಹದಿಂದ ಅಲ್ಯೂಮಿನಿಯಂ ಟ್ರೈ-ಆಲ್ಕೈಲ್ ಎಂಬ ಸಂಯುಕ್ತವನ್ನು ಸಂಶ್ಲೇಷಿಸುವ ವಿಧಾನವನ್ನು ಕಂಡುಹಿಡಿದರು. ಶುದ್ಧಿಕಾರಕಗಳನ್ನು (detergents) ಅಧಿಕ ಪ್ರಮಾಣದಲ್ಲಿ ಉತ್ಪಾದಿಸುವುದಕ್ಕೆ ಇಂತಹ ಸಂಯುಕ್ತಗಳನ್ನು ಆಲ್ಕಹಾಲ್ ಗಳಾಗಿ ಪರಿವರ್ತಿಸಿ ಉಪಯೋಗಿಸಲಾಗುತ್ತದೆ. ವಿದ್ಯುತ್-ರಾಸಾಯನಿಕ (electro-chemical) ವಿಧಾನಗಳನ್ನು ಉಪಯೋಗಿಸಿ ಅಲ್ಯೂಮಿನಿಯಂನ ಅನೇಕ ಇತರ ಲೋಹಗಳ ಆಲ್ಕೈಲ್ಗಳನ್ನು ಅವರು ತಯಾರಿಸಿದರು. ಪೆಟ್ರೋಲಿಗೆ ವಿಸ್ಪೋಟ ವಿರೋಧಕ ಸಂಕಲ್ಯಗಳಾಗಿ (anti-knock additive) ಉಪಯೋಗಿಸಲಾಗುವ ಟೆಟ್ರಾಇಥೈಲ್ ಲೆಡ್ ಎಂಬ ಸಂಯುಕ್ತ ಅವುಗಳ ಮುಖ್ಯ ಸಂಶೋಧನೆಗಳಲ್ಲಿ ಒಂದಾಗಿದೆ. 1953ರಲ್ಲಿ ಝೀಗ್ಲರ್ ಮತ್ತು ಗಿಯುಲಿಯೊ ನಟ್ಟಾರವರು (1903-1979) ಅನೇಕ ಪಾಲಿಮರ್ಗಳಿಗೆ (polymer) ಸಮರ್ಪಕವಾದ ರಚನೆಯನ್ನು ನೀಡಲು ಸಹಾಯಕವಾಗುವ ನ-ವಿಶಿಷ್ಟ ಕ್ರಿಯಾವರ್ಧಕಗಳ (stereo-specific catalysts) ಕುಟುಂಬವನ್ನು (ಗುಂಪನ್ನು) ಕಂಡುಹಿಡಿದರು. ಅಂತಹ ಕ್ರಿಯಾವರ್ಧಕಗಳಲ್ಲಿ ಒಂದಾದ ಟ್ರೈಈಥೇಲ್ ಅಲ್ಯೂಮಿನಿಯಂನನ್ನು ಟೈಟಾನಿಯಂ ಟೆಟ್ರಾಕ್ಲೋರೈಡ್ ಜೊತೆ ಸಂಯೋಜಿಸಿ ಐಸೋಪ್ರಿನ್ನನ್ನು (isoprene) ಪಾಲಿಮರೀಕರಿಸಬಹುದು ಎಂಬುದಾಗಿ ಝೀಗ್ಲರ್ರವರು ಕಂಡುಹಿಡಿದರು. ಅವರ ಈ ಸಂಶೋಧನೆ ಮುಂದೆ ಮಾನವ-ನಿರ್ಮಿತ ಪ್ಲಾಸ್ಟಿಕ್ಗಳು, ತಂತುಗಳು, ರಬ್ಬರ್ಗಳ ತಯಾರಿಕೆಗೆ ಸಹಕಾರಿಯಾಯಿತು. ಝೀಗ್ಲರ್ರವರು ಝೀಗ್ಲರ್ರವರು 1963ರ ರಸಾಯನವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ಗಿಯುಲಿಯೊ ನಟ್ಟ ರವರ ಜೊತೆ ಹಂಚಿಕೊಂಡರು.[೧] 1973ರ ಆಗಸ್ಟ್ 12ರಂದು ಮುಲ್ಹೈಮ್ನಲ್ಲಿ ನಿಧನರಾದರು.

ಕಾರ್ಲ್ ಝೀಗ್ಲರ್
Karl Ziegler Nobel.jpg
Born
ಕಾರ್ಲ್ ಝೀಗ್ಲರ್

೧೮೬೬ ಏಪ್ರಿಲ್ ೧೭
ಜರ್ಮನಿ
Nationalityಜರ್ಮನಿ

ಉಲೇಖಗಳುಸಂಪಾದಿಸಿ