ಕಾರ್ಬೋಮೈಸಿನ್
ಸ್ಟ್ರೆಪ್ಟೊಮೈಸಿಸ್ ಹಾಲ್‍ಸ್ಟೇಡಿಯಿಂದ ಉತ್ಪತ್ತಿಯಾಗುವ ಜೀವಿವಿರೋಧಕ (ಆಂಟಿಬಯಾಟಿಕ್) ವಸ್ತು. ಮ್ಯಾಗ್ನಾಮೈಸಿನ್ ಪರ್ಯಾಯನಾಮ. ಮೊದಲಬಾರಿಗೆ 1953ರಲ್ಲಿ ಇದನ್ನು ಪ್ರತ್ಯೇಕಿಸಿದರು. ಇದು ನಿರ್ವರ್ಣ ಪದಾರ್ಥ. ಇದರ ಕರಗುವ ಬಿಂದು 2120-2140 ಸೆಂ. ರಾಸಾಯನಿಕ ಸೂತ್ರ ಅ42ಊ67ಔ16ಓ.ಅದರ ರಚನೆ 1957 ರಲ್ಲಿ ರಾಬರ್ಟ್ ವುಡ್ವರ್ಡ್[೧] ಪ್ರಸ್ತಾಪಿಸಿದ ನಂತರ 1965 ಸರಿಪಡಿಸಲಾಯಿತು. ಇದು ಮ್ಯಾಕ್ರೊಲೈಡ್ ಗುಂಪಿಗೆ ಸೇರಿದ (ಮ್ಯಾಕ್ರೊಸೈಕ್ಲಿಕ್ ಲ್ಯಾಕ್ಟೋಸ್) ಜೀವಿವಿರೋಧಕ. ಮುಖ್ಯವಾಗಿ ಇದಕ್ಕೆ ಗ್ರಾಮ್‍ಪಾಸಿಟಿವ್ ಬ್ಯಾಕ್ಟೀರಿಯಗಳ (ಸ್ಟ್ರೆಪ್ಟೋಕಾಕಸ್, ಸ್ಯಾಫಿಲೋಕಾಕಸ್ ಬ್ಯಾಸಿಲೈ) ಮೇಲೆ ಕ್ರಿಯಾಶಕ್ತಿ ಉಂಟು. ಪ್ರಾಯಶಃ ಅವುಗಳಲ್ಲಿನ ರೈಬೋಸೋಮುಗಳಿಗೆ ಇದು ಅಂಟಿಕೊಂಡು ಅವುಗಳ ಪ್ರೋಟೀನ್ ಸಂಶ್ಲೇಷಣೆಯನ್ನು ತಡೆಗಟ್ಟುವುದೇ ಈ ಕ್ರಿಯಾಶಕ್ತಿಗೆ ಕಾರಣವಿರಬಹುದು. ಕಾರ್ಬೊಮೈಸಿನ್-ಬಿ ಇದಕ್ಕೆ ಹತ್ತಿರ ಸಂಬಂಧವುಳ್ಳ ಜೀವಿವಿರೋಧಕ. ಆದರೆ ಇದರಲ್ಲಿ ಎಥಿಲೀನ್ ಆಕ್ಸೈಡ್ ರಚನೆ ಇರುವುದಿಲ್ಲ. ಇದರ ಕರಗುವ ಬಿಂದು 1410-1440ಸೆಂ.
ಹೆಸರುಗಳು | |
---|---|
ಐಯುಪಿಎಸಿ ಹೆಸರು
(2S,3S,4R,6S)-6-{[(2R,3S,4R,5R,6S)-6-{[(3R,7R,8S,9S,10R,12R,14E)-7-Acetoxy-8-methoxy-3,12-dimethyl-5,13-dioxo-10-(2-oxoethyl)-4,17-dioxabicyclo[14.1.0]heptadec-14-en-9-yl]oxy}-4-(dimethylamino)-5-hydr oxy-2-methyltetrahydro-2H-pyran-3-yl]oxy}-4-hydroxy-2,4-dimethyltetrahydro-2H-pyran-3-yl 3-methylbutanoate
| |
Except where otherwise noted, data are given for materials in their standard state (at 25 °C [77 °F], 100 kPa). > | |
Infobox references | |
ವೈದ್ಯಕೀಯ ಉಪಯೋಗ
ಬದಲಾಯಿಸಿ- ಜೀವಿವಿರೋಧಕ (ಆಂಟಿಬಯಾಟಿಕ್) ವಸ್ತು
ಉಲ್ಲೇಖಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ