ಕಾರಣವರ್ ಅಥವಾ ಕಾರಣವನ್ ಅಥವಾ ಕಾರಣವ ಎಂದರೆ ಮಲಯಾಳಿ ಅಥವಾ ಕೊಡವ ಸಮಾಜ ಪುರುಷ ಮುಖ್ಯಸ್ಥನಿಗೆ ಕೊಡಲಾಗಿದ್ದ ಹೆಸರು ಅಥವಾ ಬಿರುದು ಎನ್ನಬಹುದು.

ಕಾರಣವರ್ ಎಂಬುದು ಬಾರತದ ಕೇರಳದ ಬುಧನೂರು, ಚೆಂಗನ್ನೂರು ಸುತ್ತಮುತ್ತಲಿನ ಕೆಲವು ಶ್ರೀಮಂತ ನಾಯರ್ ಕುಟುಂಬಗಳ ಉಪನಾಮವೂ ಆಗಿದೆ. ಇವರೆಲ್ಲರೂ ಬುಧನೂರಿನ ಮೂಲ ಕುಟುಂಬದ ಕವಲುಗಳು. ಒಂದು ದಂತಕಥೆಯ ಪ್ರಕಾರ ಟ್ರಾವಂಕೂರಿನ ರಾಜ ಮಾರ್ತಾಂಡ ವರ್ಮನು ಈ ಬಿರುದನ್ನು ಕೊಟ್ಟಿದ್ದನು. ಹೊಸದಾಗಿ ಕಟ್ಟಲಾಗಿದ್ದ ತಿರುವಿದಂಕೂರು (ಟ್ರಾವಂಕೂರು) ಸಾಮ್ರಾಜ್ಯವನ್ನು ಬಲಪಡಿಸಲು ರಾಮ ವರ್ಮನ ಅಳಿಯ (ತರುವಾಯ ಧರ್ಮ ರಾಜ) ಮತ್ತು ಮಾರ್ತಾಂಡ ವರ್ಮನ ತಂಗಿ, ವಟ್ಟಪರಂಬಿಲ್ ವಲಿಯಾತ್ತನನ ರಕ್ಷಣೆಯಲ್ಲಿ ಈ ಸ್ಥಳದ ಮೂಲಕ ಹಾದು ಹೋಗುತ್ತಿದ್ದಾಗ ಎಟ್ಟುವೀಟಿಲ್ ಪಿಲ್ಲಮಾರನ ಜನರು ಅವರ ಮೇಲೆ ದಾಳಿ ಮಾಡಿದರು. ಮಾರ್ತಾಂಡ ವರ್ಮನ ಸೋದರಳಿಯ ಮತ್ತು ಇತರ ಹೋರಾಟಗಾರರು ಈ ದಾಳಿಯಲ್ಲಿ ಮರಣ ಹೊಂದಿದರೂ ಆತನ ಸೋದರಿ, ಅಟ್ಟಿಂಗಲ್‍ನ ರಾಣಿ ಮತ್ತವಳ ಮಗ ಬಚಾವಾಗಿ ಅಲ್ಲಿಂದ ಗದ್ದೆಗಳ (ಬುಧನೂರು ಪದಂ) ಮೂಲಕ ಓಡಿ ತಪ್ಪಿಸಿಕೊಂಡರು. ಅಲ್ಲಿ ಅವರು ಗದ್ದೆಗಳಲ್ಲಿ ಕೃಷಿಯನ್ನು ನಿರ್ವಹಿಸುತ್ತಿದ್ದ ಶ್ರೀಮಂತ ನಾಯರ ಕುಟುಂಬದ ವ್ಯಕ್ತಿಯನ್ನು ಭೇಟಿಯಾದರು. ಅವನನ್ನು ಕಾರಣವರ್ ಎಂದು ಸಂಭೋಧಿಸಿ ಅವನಿಂದ ಸಹಾಯವನ್ನು ಕೇಳಲಾಯಿತು. ಆತ ಇವರನ್ನು ರಕ್ಷಿಸುವ ಮೂಲಕ ಸಹಾಯ ಮಾಡಿದನು ಮತ್ತು ಹತ್ತಿರದ ರಾಜನ ಮಿತ್ರನಾಗಿದ್ದ ಆರುವೀಟಿಲ್ ಮದಂಪಿಮಾರ್ ತಿಳಿಸಿದರು. ಆತನು ಮಾರ್ತಾಂಡ ವರ್ಮನ ಮಿತ್ರನಾಗಿದ್ದ ವಂಜಿಪುಝ ತಾಂಪುರನ್‍ನ ಮುಖ್ಯಸ್ಥನಾಗಿದ್ದ ವಕ್ಕವಂಜಿಪುಝ ಮಾಧೊಮ್‍ನಿಗೆ ತಿಳಿಸಿದನು. ಅಂತಿಮವಾಗಿ ರಾಮ ವರ್ಮನು ಮಹಾರಾಜನಾದಾಗ ಆತನಿಗೆ ಧನ ಸಂಪತ್ತು ಮತ್ತು ಕುಟುಂಬದ ಉಪನಾಮವಾದ ಕಾರಣವರ್ ಅನ್ನು ನೀಡಿದನು.

ನಾಯರ್ (ಕೇರಳ, ಉಪನಾಮ ಕರ್ಣವರ್ ) ಬದಲಾಯಿಸಿ

ಥರವಾಡು ಎಂಬ ಮಾತೃ ಪ್ರಧಾನ ಕುಟುಂಬಗಳಲ್ಲಿ ಅತ್ಯಂತ ಹಿರಿಯನಾಗಿದ್ದ ಮಾವನು ಮುಖ್ಯಸ್ಥನಾಗಿರುತ್ತಿದ್ದನು ಮತ್ತು ಆತನನ್ನು ಕಾರಣವರ್ ಎಂದು ಕರೆಯಲಾಗುತ್ತಿತ್ತು. ಕುಟುಂಬದಲ್ಲಿ ಕಾರಣವರ್‍ನ ಅಧಿಕಾರವು ಪ್ರಶ್ನಾತೀತವಾಗಿತ್ತು. ಮಾತೃ ಪ್ರಧಾನ ಪದ್ಧತಿಯ ಅವಸಾನದ ನಂತರವೂ ಈ ಪದವು ಅಧಿಕಾರ ಮತ್ತು ಹಿರಿತನವನ್ನು ಸೂಚಿಸುತ್ತಿತ್ತು. ಅಟ್ಟಿಂಗಲ್‍ನ ರಾಣಿಯನ್ನು ರಕ್ಷಿಸಿದ್ದರಿಂದಾಗಿ ಶ್ರೀಮಂತ ನಾಯರ್ ಕುಟುಂಬಕ್ಕೆ ಈ ಬಿರುದನ್ನು ಟ್ರಾವಂಕೂರಿನ ಮಹಾರಾಜನು ನೀಡಿದ್ದನು.

ಕೊಡವ ಬದಲಾಯಿಸಿ

ಕೊಡವ ಒಕ್ಕ (ಕುಲದ ಕುಟುಂಬ) ದ ಸ್ಥಾಪಕನನ್ನು ಕರೋಣ ಎಂದು ಕರೆಯಲಾಗುತ್ತಿತ್ತು. ಪೂರ್ವಜರ ಆತ್ಮದ ಪೂಜೆ ಮಾಡುವಾಗ, ಮಲಯಾಳಿಯೊಬ್ಬನು ಶಮನ್ ಆಗಿ ವರ್ತಿಸುತ್ತಾನೆ ಮತ್ತು ಆತನು ನಿರ್ದಿಷ್ಟ ಒಕ್ಕದ ಕರೋಣ ಆತ್ಮವನ್ನು ಹೊಂದುತ್ತಾನೆ.

ಕಾರಣವರ್ ಬದಲಾಯಿಸಿ

ಭಗವತಿ ದೇವಸ್ಥಾನಗಳಲ್ಲಿ ಸಮುದಾಯದ ಮುಖ್ಯಸ್ಥನಿಗೆ ಗೌರವಪೂರ್ವಕ ಕಾರಣವರ್ ಬಹುವಚನವನ್ನು ಬಳಸಲಾಗುತ್ತದೆ. ಹಿಂದಿನ ಕಾಲದಲ್ಲಿ ಕೋಯಿಲ್ ಥಂಪುರನ್ (ನಂಬೂದಿರಿ ರಾಜ) ಈತನನ್ನು ನೇಮಿಸುತ್ತಿದ್ದನು.

"https://kn.wikipedia.org/w/index.php?title=ಕಾರಣವರ್&oldid=1150810" ಇಂದ ಪಡೆಯಲ್ಪಟ್ಟಿದೆ