ಕಾಯಿ ಉಂಡೆ ಅಥವಾ ಕಾಯುಂಡೆ ಬಗ್ಗೆ

ಬದಲಾಯಿಸಿ

ಹಿಂದಿನ ಕಾಲದಲ್ಲಿ ತುಳುನಾಡಿನ ತಿನಸುಗಳು ಮನೆಯಲ್ಲಿ ತಯಾರಿಸುತ್ತಿದ್ದ ಸಿಹಿತಿನಿಸುಗಳಲ್ಲಿ ಕಾಯುಂಡೆಯೂ ಒಂದು. ಬೆಲ್ಲ, ತೆಂಗಿನಕಾಯಿ ಹಾಕಿ ತಯಾರಿಸುವ ಈ ಸಿಹಿ ತಿನಿಸು ಬಾಯಿಗೂ ರುಚಿ, ಆರೋಗ್ಯಕ್ಕೂ ಒಳ್ಳೆಯದು. ಈ ಉಂಡೆ ತಯಾರಿಸಲು ಹುರಿದ ನೆಲಗಡಲೆ, ಗೋಡಂಬಿ ಇತ್ಯಾದಿ ನಿಮ್ಮಿಷ್ಟದ ಯಾವುದೇ ನಟ್ಸ್ ಸೇರಿಸಬಹುದು. ಇಲ್ಲಿ ಹುರಿದ ನೆಲಗಡಲೆ / ಶೇಂಗಾ ಬಳಸಿ ಮಾಡುವ ಕಾಯುಂಡೆ. ಇದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ ಕಾಯುಂಡೆ.

ಬೇಕಾಗುವ ಸಾಮಗ್ರಿಗಳು

ಬದಲಾಯಿಸಿ
  • ತೆಂಗಿನತುರಿ - 3 ಕಪ್
  • ಬೆಲ್ಲ - 1 ಕಪ್
  • ನೆಲಗಡಲೆ ಹುರಿದದ್ದು - 1 ಕಪ್
  • ಏಲಕ್ಕಿ ಪುಡಿ - 1 ಟೀ ಸ್ಪೂನ್

ತಯಾರಿಸುವ ವಿಧಾನ

ಬದಲಾಯಿಸಿ

ಹುರಿದ ನೆಲಗಡಲೆಯ[] ಸಿಪ್ಪೆ ತೆಗೆದು, ನೆಲಗಡಲೆಯನ್ನು ಮಿಕ್ಸಿಯಲ್ಲಿ ಹಾಕಿ ಪಲ್ಸ್ ಮೋಡ್ ನಲ್ಲಿ ಒಂದೆರಡು ಸೆಕೆಂಡ್ ತಿರುವಿ ತರಿಯಾಗಿ ಪುಡಿಮಾಡಿಕೊಲ್ಲಬೇಕು. ಒಂದು ದಪ್ಪ ತಳದ ಬಾಣಲೆಯಲ್ಲಿ ತೆಂಗಿನತುರಿ ಹಾಗೂ ಬೆಲ್ಲವನ್ನು ಸೇರಿಸಿ ಮೀಡಿಯಮ್ ಉರಿಯಲ್ಲಿ ಕೈಯಾಡಿಸುತ್ತಿರಬೇಕು. ಕೆಲ ನಿಮಿಷಗಳ ನಂತರ ತೆಂಗಿನತುರಿಯಲ್ಲಿನ ನೀರಿನಂಶ ಸೇರಿಕೊಂಡು ಬೆಲ್ಲ ಕರಗತೊಡಗುತ್ತದೆ. ಮಿಶ್ರಣ ತುಂಬ ಡ್ರೈ ಎನ್ನಿಸಿದರೆ ಒಂದೆರಡು ಸ್ಪೂನ್ ನಷ್ಟು ನೀರು ಸೇರಿಸಿಕೊಂಡು. ಮಿಶ್ರಣವನ್ನು ಬಿಡದೆ ಕೈಯಾಡಿಸುತ್ತಿರಬೇಕು.. ಸುಮಾರು 20 ನಿಮಿಷ ಆಗುವಷ್ಟರಲ್ಲಿ ಮಿಶ್ರಣದಲ್ಲಿನ ನೀರಿನಂಶ ಕಡಿಮೆಯಾಗಿ, ಮಿಶ್ರಣ ಗಟ್ಟಿಯಾಗಿ ಮುದ್ದೆಯಂತಾಗತೊಡಗುತ್ತದೆ. ಸ್ವಲ್ಪವೇ ಮಿಶ್ರಣವನ್ನು ಹೊರತೆಗೆದು ತಣಿಸಿ ಉಂಡೆ ಕಟ್ಟುವ ಹದ ಬಂದಿದೆಯೇ ಎಂದು ಚೆಕ್ ಮಾಡಿಕೊಂಡು, ಮಿಶ್ರಣ ಉಂಡೆ ಕಟ್ಟುವ ಹದಕ್ಕೆ ಬಂದಾಗ ಉರಿ ಆಫ್ ಮಾಡಿ. ಇದಕ್ಕೆ ನೆಲಗಡಲೆ ಹಾಗೂ ಏಲಕ್ಕಿಹಿಟ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೈಗಳಿಗೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಸವರಿಕೊಂಡು, ಮಿಶ್ರಣ ಉಗುರುಬೆಚ್ಚಗಿರುವಾಗಲೇ ಸ್ವಲ್ಪವೇ ಮಿಶ್ರಣವನ್ನು ಕೈಯಲ್ಲಿ ತೆಗೆದುಕೊಂಡು ಚಿಕ್ಕ ಉಂಡೆಗಳನ್ನು ಮಾಡಬೇಕು. ಸಿಹಿಯಾದ ಈ ಕಾಯುಂಡೆ ಸ್ವಲ್ಪ ಜಿಗುಟಾಗಿದ್ದು ತಿನ್ನಲು ಬಹಳ ರುಚಿ!

ಉಲ್ಲೇಖ

ಬದಲಾಯಿಸಿ
  1. "Kadlekai Unde - Peanut and Jaggery Balls".


"https://kn.wikipedia.org/w/index.php?title=ಕಾಯುಂಡೆ&oldid=1240746" ಇಂದ ಪಡೆಯಲ್ಪಟ್ಟಿದೆ