ಕಾಫ್ರಿಯಾಲ್ ಭಾರತದ ಗೋವಾ ರಾಜ್ಯದಲ್ಲಿ ವ್ಯಾಪಕವಾಗಿ ಸೇವಿಸಲ್ಪಡುವ ಒಂದು ಮಸಾಲೆಯುಕ್ತ ಖಾದ್ಯವಾಗಿದೆ. ಈ ಖಾದ್ಯವು ಆಫ಼್ರಿಕಾ ಖಂಡದದಲ್ಲಿನ ಪೊರ್ಚುಗೀಸ್ ವಸಾಹತುಗಳಿಂದ ಹುಟ್ಟಿಕೊಂಡಿತು.[] ಪೋರ್ಚುಗೀಸ್ ಮತ್ತು ಪೋರ್ಚುಗೀಸರ ಕೆಳಗೆ ಸೇವೆಸಲ್ಲಿಸುತ್ತಿದ್ದ ಆಫ಼್ರಿಕನ್ ಸೈನಿಕರು ಇದನ್ನು ಗೋವಾದ ಪಾಕಪದ್ಧತಿಗೆ ಪರಿಚಯಿಸಿದರು. ಸಾಮಾನ್ಯ ತಯಾರಿಕೆಯು ಹಸಿರು ಮೆಣಸಿನಕಾಯಿ, ತಾಜಾ ಕೊತ್ತುಂಬರಿ ಎಲೆಗಳು, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ದಾಲ್ಚಿನ್ನಿ, ಕರಿಮೆಣಸು, ಖಾರದ ಪುಡಿ, ಜಾಪತ್ರೆ, ಲವಂಗದ ಪುಡಿ ಮತ್ತು ನಿಂಬೆಯ ರಸ ಅಥವಾ ವಿನಿಗರ್‌ನ್ನು ಒಳಗೊಳ್ಳುತ್ತದೆ. ಚಿಕನ್ ಕಾಫ಼್ರಿಯಾಲ್‍ನ್ನು ಯಾವಾಗಲೂ ಕೋಳಿಯ ಕಾಲುಗಳಿಂದ ತಯಾರಿಸಲಾಗುತ್ತದೆ, ಮತ್ತು ಮೇಲೆ ಹೇಳಲಾದ ಸಂಬಾರ ಪದಾರ್ಥಗಳು ಹಾಗೂ ಮೂಲಿಕೆಗಳಿಂದ ರುಚಿಗೊಳಿಸಲಾಗುತ್ತದೆ ಮತ್ತು ಸ್ವಲ್ಪ ಎಣ್ಣೆಯಲ್ಲಿ ಬಾಡಿಸಲಾಗುತ್ತದೆ. ಚಿಕನ್ ಕಾಫ಼್ರಿಯಾಲ್ ಜೊತೆಗೆ ಪಕ್ಕಖಾದ್ಯವಾಗಿ ಆಲೂಗಡ್ಡೆ ಚೂರುಗಳು ಮತ್ತು ಲಿಂಬೆಯ ಚೂರುಗಳನ್ನು ನೀಡಲಾಗುತ್ತದೆ. ಇದು ಗೋವಾ ರಾಜ್ಯದ ಬಾರ್‌ಗಳು ಮತ್ತು ಪಾನಗೃಹಗಳಲ್ಲಿ ಜನಪ್ರಿಯ ಖಾದ್ಯವಾಗಿದೆ.

ಒಲೆಯ ಮೇಲೆ ಬೇಯುತ್ತಿರುವ ಕಾಫ಼್ರಿಯಾಲ್

ಉಲ್ಲೇಖಗಳು

ಬದಲಾಯಿಸಿ