ಎಸ್ಸಿ(ಗ್ರಾನಲ್): ಇದು ಕಾಫೀ ಸಸ್ಯಕ್ಕೆ ಲಭ್ಯವಿರುವ ನೈಸರ್ಗಿಕ ಸಿಲಿಕಾನ್ ಮೂಲವಾಗಿದೆ.ಇದು ಹರಳಿನ ರೂಪದಲ್ಲಿದ್ದು ಮಣ್ಣಿನ ಕೊರತೆಗಳನ್ನು ಉತ್ತಮ ಪಡಿಸುವುದರ ಜೊತೆಗೆ,ಮಣ್ಣಿನ ಫಲವತ್ತತೆಯನ್ನು ಕಾಪಾಡಿ ಕಾಫಿಯ ಇಳುವರಿ ಮತ್ತು ಗುಣಮಟ್ಟವನ್ನು ಉತ್ತೇಜಿಸುವ ಅಂಶಗಳನ್ನು ಒಳಗೊಂಡಿದೆ.

ನೈಸರ್ಗಿಕ ಕಂಡಿಷನರ್ ಬಂದು ಖನಿಜ ಆಧಾರಿತ ಉತ್ಪನ್ನವಾಗಿದ್ದು ಸಸ್ಯ ಲಭ್ಯವಿರುವ ಸಿಲಿಕಾನನ್ನು ಉನ್ನತ ಮಟ್ಟದಲ್ಲಿ ಹೊಂದಿದೆ.ಇದನ್ನು ಹದವಾಗಿ ಚೆಲ್ಲಬಹುದು ಅಥವಾ ಯಾವುದೇ ರಸ ಗೊಬ್ಬರದ ಜೊತೆಯಾಗಿ ಮಿಶ್ರಣ ಮಾಡಬಹುದು.ಇದು ಬಹು ಸುಲಭವಾಗಿ ನೀರಿನೊಂದಿಗೆ ಬೆರೆತು,ಕಾಫೀ ಗಿಡಗಳ ಬೆಳವಣಿಗೆಯನ್ನು ವೃದ್ದಿಸುವುದರ ಜೊತೆಗೆ ಮಣ್ಣಿನ ಫಲವತ್ತತೆಯನ್ನು ಉತ್ಕೃಷ್ಟಗೊಳಿಸುತ್ತದೆ.

ಪ್ರಯೋಜನೆಗಳು : ೧) ಇದು ಸಿಲಿಕಾನ್ ನಿನ ಸಮೃದ್ಧ ಮೂಲವಾಗಿದೆ. ೨) ಇದು ಮಣ್ಣಿನ ರಚನೆ,ನೀರನ್ನು ಹಿಡಿದಿಡುವ ಸಾಮರ್ಥ್ಯ ಮತ್ತು ಮಣ್ಣಿನ ರಂಧ್ರಗಳನ್ನು ಸುಧಾರಿಸುತ್ತದೆ. ೩) ಇದು ಕಾಫೀ ಗಿಡಗಳ ಕಾಟಯಾನಿಕ್ ವಿನಿಮಯ ಸಾಮರ್ಥ್ಯವನ್ನು ವೃದ್ದಿಸುವುದರ ಮೂಲಕ ಅಗತ್ಯ ಪೋಷಕಾಶಗಳನ್ನು ಗ್ರಹಿಸುವುದನ್ನು ಹೆಚ್ಚಿಸುತ್ತದೆ. ೪) ಇದು ಬರ,ಲವಣಾಂಶಗಳು ಮತ್ತು ಮೆಟಲ್ ವಿಷತತ್ವ ರೀತಿಯ ವಾತಾವರಣದ ಒತ್ತಡಗಳಿಗೆ ಶವನವನ್ನು ರೂಪಿಸುತ್ತದೆ. ೫) ಇದು ಕಾಫಿ ಗಿಡದ ಕಾಂಡ ಕೋಶಗಳು ಗೋಡೆಗಳನ್ನು ಬಲಪಡಿಸಿ,ಕಾಂಡ ಕಿರಿಯ ಕೀಟಗಳ ಕಾಂಡ ಕತ್ತರಿಸೀವರ್ ಚಟುವಟಿಕೆಯನ್ನು ಪ್ರಥಿಬಂಧಿಸುತ್ತದೆ. ೬) ಇದು ಕಾಫಿ ಗಿಡಗಳಲ್ಲಿ ಸೂಕ್ಷ್ಮಜಿವಿಯ ಮತ್ತು ಶಿಲೀಂಧ್ರ ರೋಗಗಳಿಗೆ ಪ್ರತಿಯಾಗಿ ಪ್ರತಿರಕ್ಷಣಾ ಅಣುಗಳನ್ನು ಮತ್ತು ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ೭) ಇದು ಕಪಿ ಗಿಡಗಳು ಕಾಂಡವನ್ನು ಪ್ರಬಲಗೊಳಿಸುವುದರ ಜೊತೆಗೆ, ಕಾಂಡ ಕೊರೆಯುವಿಕೆಯನ್ನು ನಿಯಂತ್ರಿಸಿ, ಕೀಟಗಳಲ್ಲಿ ಹಸಿವನ್ನು ಸೃಷ್ಟಿಸಿ ಕೀಟಗಳನ್ನು ನಿತ್ರಾಣಗೊಳಿಸುತ್ತದೆ. ಇದು ಸಾವಯು ಕೃಷಿಯ ಬಳಕೆಗಾಗಿ ಪ್ರಮಾಣಿಕೃತವಾಗಿದೆ.

ಬಳಕೆಯ ವಿಧಾನ : ೧) ಇದನ್ನು ಕಾಫಿ ಸಸಿಯನ್ನು ನೆಡುವುದಕ್ಕೆ ಮುಂಚಿತವಾಗಿ ಅಥವಾ ಸಸಿ ನೆಟ್ಟ ನಂತರ ಮಣ್ಣಿನಲ್ಲಿ ಸೇರಿಸಬಹುದು. ೨) ಚಿಕ್ಕ ಕಾಫಿ ಗಿಡಗಳಿಗೆ ೫೦ ಗ್ರಾಂಮ್ ಪ್ರತಿ ಸಸ್ಯವೊಂದಕ್ಕೆ ಮಣ್ಣಿನಲ್ಲಿ ಸೇರಿಸಿ. ೩) ಬೆಳೆದ ಕಾಫಿ ಗಿಡಗಳಿಗೆ ೧೦೦ ಗ್ರಾಮಕ್ಕೆ/ಒಂದು ವರ್ಷಕ್ಕೆ ಪ್ರತಿ ಸಸ್ಯವೊಂದಕ್ಕೆ ಮಣ್ಣಿನಲ್ಲಿ ಸೇರಿಸಿ ಹದವಾಗಿ ನೀರನ್ನು ಸಿಂಪರಣೆ ಮಾಡಿ.

ಲಾಭಗಳು: ೧) ಇದನ್ನು ಉಪಯೋಗಿಸುವುದರಿಂದ, ಎನ್.ಪಿ.ಕೆ ಗೊಬ್ಬರದ ಬಳಕೆಯನ್ನು ಶೇ೨೫-೩೦ ಕಡಿಮೆ ಗೊಳಿಸಬಹುದು . ೨) ಹೆಚ್ಚುವರಿ ಇಳುವರಿಯನ್ನು (ಶೇ ೧೫-೨೫) ಸಾಧಿಸಬಹುದು. ೩) ಕಾಫಿ ಗಿಡಗಳು ಕಾಂಡ ಕೊರಳು ಕೀಟಗಳ ಹಾವಳಿಯನ್ನು ಗಣನೀಯವಾಗಿ ನಿಯಂತ್ರಿಸಬಹುದು. ೪) ಕೀಟಗಳು ಹಾಗೂ ಶಿಲೀಂಧ್ರ ರೋಗಗಳನ್ನು ಕಡಿಮೆಯಾಗುತ್ತದೆ. ೫) ಕಾಫಿ ಗುಣಮಟ್ಟ ಉತ್ತಮವಾಗಿರುತ್ತದೆ.

ಪಿಸಿ(ಪೌಡರ್):ಇದು ಅತ್ಯುತ್ತಮ ನೈಸರ್ಗಿಕ ಉತ್ಪನ್ನವಾಗಿದ್ದು, ಕಾಫಿ ಕೃಷಿಯ ಸಮಗ್ರ ಕೀಟ ನಿರ್ವಹಣೆ ಕಾರ್ಯಕ್ರಮದಲ್ಲಿ ಅನೇಕ ರೀತಿಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾತ್ರವಹಿಸುತ್ತವೆ. ಇದು ಕೀಟಗಳ ರಕ್ಷಣೆ ಒದಗಿಸುವ ಹೊತ್ತು ಪದರವನ್ನು ಹಾನಿಗೊಳಿಸುವುದರ ಜೊತೆಗೆ, ಕೀಟಗಳ ಉಸಿರಾಟದ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುತ್ತದೆ. ಇದರ ದೀರ್ಘಾವಧಿಯ ಬಳಕೆಯಿಂದ ಕಾಫಿ ಸಸ್ಯಗಳಲ್ಲಿ ಪ್ರತಿರೋಧ ಶಿಕ್ಷೆಯು ವೃದ್ಧಿಸುತ್ತದೆ. ಪ್ರಯೋಜನೆಗಳು: ೧) ಇದು ವಿಷಕಾರಿಯಲ್ಲದ, ಪರಿಸರ ಸ್ನೇಹಿತ ಮತ್ತು ಯಾವುದೇ ರೀತಿಯ ಶೇಷವನ್ನು ಎಲೆ,ಹೂವು ಅಥವಾ ಹಣ್ಣುಗಳಲ್ಲಿ ಬಿಡುವುದಿಲ್ಲ. ೨) ಇದು ಕಾಂಡ ಕೀಟ ದಾಳಿ ವಿರುದ್ಧ ಉತ್ತಮ ರಕ್ಷಣೆ ನೀಡುವುದರ ಜೊತೆಗೆ, ಕೀಟಗಳು ಹರಡುವಿಕೆಯನ್ನು ನಿಯಂತ್ರಿಸುತ್ತದೆ. ೩) ಇದು ಕಾಂಡ ಕೋಶ ಮೊಟ್ಟೆಗಳನ್ನು ನಿರ್ಜಲೀಕರಿಸಿ, ಸಂಪೂರ್ಣ ರೂಪಾಂತರಗೊಳ್ಳುವುದನ್ನು ತಡೆಗಟ್ಟುತ್ತದೆ. ೪) ಇದು ಗಿಡಗಳಕಾಂಡವನ್ನು ಪ್ರಬಲಗೊಳಿಸುವುದರ ಜೊತೆಗೆ ಪ್ರೌಡವಲ್ಲದ ಕೀಟಗಳು ಒಳಗೆ ಮದುಡಿ ನಿಸ್ಸೇಜಗೊಂಡು ಸೊರಗುತ್ತವೆ. ೫) ಪ್ರೌಢ ಕೀಟಗಳ ಕಾಂಡ ಕೊಳೆಯುವಿಕೆಯನ್ನು ಪ್ರತಿಬಂಧಿಸುತ್ತದೆ. ೬) ಕಾಂಡದೊಳಗಿನ ಕೀಟ ಹೊರಗಿನ ಪರಿಸ್ಥಿತಿಯನ್ನು ಅರಿಯುವ ಮತ್ತು ಸಂತಾನೋತ್ಪತ್ತಿ ಮಿಲನದ ಕ್ರಿಯೆಯನ್ನು ಮುಂದಿಡುತ್ತದೆ.

ಬಳಕೆಯ ವಿಧಾನ: ೧) ೧ ಕೆ.ಜಿ ಕೀಟ ನಿಯಂತ್ರಕ ಪುಡಿಯನ್ನು ೩ ಲೀಟರ್ ನೀರಿನಲ್ಲಿ ಫೆವೆಕಾಲ್ ಅಂಟು ಮಿಶ್ರಣದೊಂದಿಗೆ ಕಾಫಿ ಗಿಡಗಳ ಕಾಂಡಕ್ಕೆ ಹಚ್ಚಬೇಕು.

ಲಾಭಗಳು: ೧) ಕಾಂಡ ಕಿರಿಯ ಕೀಟಗಳ ಹಾವಳಿಯನ್ನು ಸಂಪೂರ್ಣವಾಗಿ ಹತೋಟಿಯಲ್ಲಿಡಬಹುದು. ೨) ಹೆಚ್ಚುವರಿ ಇಳುವರಿ ಹಾಗೂ ಒಳ್ಳೆಯ ಗುಣಮಟ್ಟದ ಕಾಫಿಯನ್ನು ಪಡೆಯಬಹುದು.

ರೆಫರೆನ್ಸ: ಕೃಷಿಕ ಪತ್ರಿಕೆ (WWW.krushika.com)