ಕಾಪು ಕುತ್ತುವುದು
ಕಾಪು ಕುತ್ತುವುದು
ಆಟಿ ತಿಂಗಳು
ಬದಲಾಯಿಸಿಆಟಿ ತಿಂಗಳು ತುಳುನಾಡಿನವರಿಗೆ ತುಂಬಾ ಕಷ್ಟಕರವಾದ ಕಾಲವಾಗಿತ್ತು. ಆದರೆ ಕಾಲಘಟ್ಟ ಬದಲಾಗಿ ಬಡತನ, ರೋಗರುಜಿನಗಳು ಕಡಿಮೆಯಾಗಿ, ತುಳುನಾಡು ಈಗ ತುಂಬಾ ಬದಲಾಗಿದೆ. ಆದರೂ ಹಿರಿಯೆರು ಪ್ರಾರಂಭಿಸಿದ ಆಟಿ ತಿಂಗಳ ಕೆಲವು ಕ್ರಮಗಳು ಈಗ ಕೂಡಾ ತುಳುಜನರು ಪಾಲನೆ ಮಾಡುತ್ತಾ ಇದ್ದಾರೆ. ಅಂತಹ ಒಂದು ಕ್ರಮ ಅಂದರೆ ಕಾಪು ಕುತ್ತುವುದು.
ಪದದ ಒಳ ಅರ್ಥ
ಬದಲಾಯಿಸಿತುಳುವಿನ ಕಾಪು ಅಂದರೆ ಕನ್ನಡದಲ್ಲಿ ರಕ್ಷಣೆ, ಕಾಪಾಡಿ ಎಂದು ಅರ್ಥ. ಕಾಪಾಡಿ ಎನ್ನುವ ಅರ್ಥದಲ್ಲಿ ಖಾಲಿಯಾದ ಗದ್ದೆಗಳಲ್ಲಿ, ಸಸಿ ನೆಟ್ಟ ಗದ್ದೆಗಳಲ್ಲಿ ಎಲ್ಲವನ್ನೂ ಪರಮಾತ್ಮ ಕಾಪಾಡಲಿ ಎನ್ನುವ ಸಂಕೇತದಂತೆ, ಕಾಪುವನ್ನು ಕುತ್ತುತ್ತಾರೆ.[೧]
ಕಾಪುವನ್ನು ಮಾಡುವ ಕ್ರಮ
ಬದಲಾಯಿಸಿಮರದ ಬೇರಿನಿಂದ ದೊಡ್ಡ ಅಂಡೆ ಮಾಡಿ, ಅದರಲ್ಲಿ ಮಣ್ಣು ತುಂಬಿಸಿ, ಅದಕ್ಕೆ ಪಾಪಸು ಕಳ್ಳಿಯ ತುಂಡುಗಳನ್ನು ಇಟ್ಟು, ಅದರ ಸುತ್ತ ಮುತ್ತ ಬಿಳಿಯ ನೆಕ್ಕಿ, ಮರದ ಬೇರುಗಳು, ನೆಲ್ಲಿಕಾಯಿ, ರಾಮ ಬೀಜ, ಕರಿಯ ನೆಕ್ಕಿ, ಈಚಲು ಮರದ ಎಲೆಗಳನ್ನು ಅಥಾವ ಸೊಪ್ಪುಗಳನ್ನು ಇಟ್ಟು ಒಂದು ಉದ್ದದ ಕೋಲಿಗೆ ಮತ್ತೊಂದು ದಿಕ್ಕಿನಲ್ಲಿ ಮರದ ಬೇರಿನ ಹಂಡೆಯನ್ನು ಕಟ್ಟಿ , ಇದರೆಲ್ಲಾ ಸಹಾಯದಿಂದ ಕಾಪುವನ್ನು ಸಿದ್ಧ ಮಾಡುತ್ತಾರೆ.[೧]
ಕಾಪುವನ್ನು ಕುತ‍್ತುವ ಕ್ರಮ
ಬದಲಾಯಿಸಿಮನೆಯ ಯಜಮಾನರು ಕಾಪುವನ್ನು ಗದ್ದೆಯ ನಡುವೆ ಕುತ್ತಿ ದೇವರಲ್ಲಿ ಈ ಕಷ್ಟಕರವಾದ ಆಟಿ ತಿಂಗಳಿನಲ್ಲಿ ತಮ್ಮ ಮನೆಯವರಿಗಾಗಲಿ , ಹಟ್ಟಿಯ ದನ ಕರುಗಳಿಗೆ ಆಗಲಿ , ಗದ್ದೆಗೆ ಆಗಲಿ , ಗದ್ದೆಯಲ್ಲಿ ನೆಟ್ಟ ಭತ್ತದ ಸಸಿಗಳಿಗಾಗಲಿ ಯಾವ ತೊಂದರೆ ಆಗದಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ.[೧]
ಉಲ್ಲೇಖಗಳು
ಬದಲಾಯಿಸಿ