ಕಾನನ (ಮಾಸಪತ್ರಿಕೆ)
ನಿಸರ್ಗದೆಡೆಗೆ ಪಯಣ
ಬದಲಾಯಿಸಿಆರಂಭ ಮತ್ತು ಉದ್ದೇಶ
ಬದಲಾಯಿಸಿಕಾನನ, ಕನ್ನಡದ ಏಕೈಕ ವನ್ಯವಿಜ್ಞಾನ ಕುರಿತ ಮಾಸ ಪತ್ರಿಕೆ, Wildlife Conservation Group[೧] ಎಂಬ 30 ಪರಿಸರಾಸಕ್ತ ಜನರಿರುವ ಒಂದು ಸಣ್ಣ ಗುಂಪು. ಸುಮಾರು 15 ವರ್ಷಗಳಿಂದ ವನ್ಯಜೀವಿ ಸಂರಕ್ಷಣೆ ಮತ್ತು ಅವುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಜೊತೆಯಲ್ಲಿ ಮಕ್ಕಳಿಗೆ ಪರಿಸರ, ಕಾಡು, ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ 2011 ರ ಜನವರಿಯಿಂದ ಈ ಕಾನನ ಪತ್ರಿಕೆಯನ್ನು ಹೊರತರಲಾಯಿತು[೨]. ಕೆಲ ಸಂಘ-ಸಂಸ್ಥೆಗಳ ಸಹಾಯದಿಂದ ಸ್ವಲ್ಪ ದಿನಗಳು ಕಾನನದ ಮುದ್ರಣ ಪ್ರತಿಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸುತ್ತಲಿನ ಕೆಲ ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸಲಾಯಿತು. ಮುದ್ರಣ ಪ್ರತಿಯು ಸದ್ಯಕೆ ಧನ ಸಹಾಯ ಇಲ್ಲದೆ ನಿಂತಿದೆ. ಸದ್ಯಕ್ಕೆ Online ಮೂಖಾಂತರ ನಾಡಿನ ಜನತೆಗೆ ತಲುಪುತ್ತಿದೆ. ಮತ್ತು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಕೆಲ ಕನ್ನಡಿಗರಿಗೂ ತಲುಪುತ್ತಿದೆ.
ಪ್ರಕಟಿತ ವಿಷಯಗಳು
ಬದಲಾಯಿಸಿಕಾಡು, ಕಾಡಿನ ಕತೆಗಳು, ವನ್ಯವಿಜ್ಞಾನ, ಕೀಟಲೋಕ, ಕೃಷಿ, ಜೀವವಿಜ್ಞಾನ, ವನ್ಯಜೀವಿ ಛಾಯಾಚಿತ್ರ, ಪರಿಸರಕ್ಕೆ ಸಂಬಂಧಪಟ್ಟ ಕವನಗಳು, ಪ್ರವಾಸ ಕತೆಗಳು, ವರ್ಣಚಿತ್ರಗಳು ಮತ್ತು ಪರಿಸರಕ್ಕೆ ಸಂಬಂಧ ಪಟ್ಟ ಎಲ್ಲಾ ಲೇಖನಗಳನ್ನು ಒಳಗೊಂಡಿದೆ.
ವಿಶೇಷತೆ
ಬದಲಾಯಿಸಿಕಾನನದ ಪ್ರತಿ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಪರಿಸರ ಮತ್ತು ಪರಿಸರ ಜಾಗೃತಿಯಂತಹ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜು ವಿಧ್ಯಾರ್ಥಿಗಳೊಡಗೂಡಿ ಬೇಸಿಗೆಯಲ್ಲಿ ಗುಡ್ಡದ ಗಿಡಗಳಿಗೆ ನೀರೆರೆಯುವುದು, ಪ್ರಾಥಮಿಕ ಮತ್ತು ಫ್ರೌಡಶಾಲಾ ಮಕ್ಕಳಿಗೆ ಪರಿಸರಕ್ಕೆ ಸಂಬಂಧ ಪಟ್ಟ ಚಿತ್ರಕಲೆ ಹಾಗೂ ಪ್ರಬಂಧ ಸ್ವರ್ಧೆಯಂತಹ ಕೆಲ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಅಯ್ಕೆಯಾದಂತಹ ಕೆಲ ಚಿತ್ರಕಲೆ ಮತ್ತು ಪ್ರಂಬಂಧಗಳನ್ನು ಬಹುಮಾನ ಮತ್ತು ಕಾನನ ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ[೩].
ಗುರಿಗಳು
ಬದಲಾಯಿಸಿ- ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಬಂಡೀಪುರ ಅಭಯಾರಣ್ಯ ಕಾಡುಗಳ ಒಂದು ಕಿ.ಮೀ ಪ್ರದೇಶದಲ್ಲಿನ ಎಲ್ಲಾ ಶಾಲೆಗಳಿಗೆ ಕಾನನ ಮುದ್ರಣ ಪ್ರತಿಯನ್ನು ತಲುಪಿಸುವುದು.
- ಪರಿಸರಕ್ಕೆ ಸಂಬಂದಪಟ್ಟ ಎಲ್ಲಾ ವಿಷಯಗಳನ್ನು ಕನ್ನಡದಲ್ಲಿಯೇ ಸಿಗುವಂತೆ ಮಾಡುವುದು.
- ನಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ಮತ್ತು ಅರಿವು ಮೂಡಿಸುವುದು.
- ಪರಿಸರ ಆಸಕ್ತಿಯುಳ್ಳ ಯುವಕರಿಗೆ ಪರಿಸರಕ್ಕೆ ಸಂಬಂಧಪಟ್ಟ ಅವರ ಛಾಯಾಚಿತ್ರಗಳನ್ನು, ಲೇಖನಗಳನ್ನು ಪ್ರಕಟಿಸಲು ವೇದಿಕೆ ಕಲ್ಪಿಸಿಕೊಡುವುದು.
- ಪರಿಸರಕ್ಕೆ ಸಂಬಂದಿಸಿದ ವನ್ಯವಿಜ್ಞಾನಿಗಳ ಹೊಸ ಆವಿಷ್ಕಾರಗಳನ್ನು ಕರುನಾಡ ಜನತೆಗೆ ಕನ್ನಡದಲ್ಲಿ ತಿಳಿಸಲು ಯತ್ನಿಸುವುದು.
ಉಲ್ಲೇಖಗಳು
ಬದಲಾಯಿಸಿ