ಕಾಡು ಕಾಗೆ
ಕಾಡು ಕಾಗೆ ಎಂಬುದು ಮೂರು ಜಾತಿಯ ಕಾಗೆಗಳನ್ನು ಉಲ್ಲೇಖಿಸುವ ಸಾಮಾನ್ಯ ಹೆಸರು. ಆರಂಭದಲ್ಲಿ ಒಂದೇ ಜಾತಿಯೆಂದು ಭಾವಿಸಲಾಗಿತ್ತು, ನಂತರ ಈ ಗುಂಪನ್ನು ಕೆಳಗಿನ ಜಾತಿಗಳಾಗಿ ವಿಭಜಿಸಲಾಗಿದೆ:
- ದೊಡ್ಡ ಕೊಕ್ಕಿನ ಕಾಗೆ, ಕೊರ್ವಸ್ ಮ್ಯಾಕ್ರೋರಿಂಚೋಸ್
- ಈಸ್ಟರ್ನ್ ಜಂಗಲ್ ಕಾಗೆ, ಕೊರ್ವಸ್ ಲೆವೈಲಾಂಟಿ
- ಭಾರತೀಯ ಜಂಗಲ್ ಕಾಗೆ, ಕೊರ್ವಸ್ ಕ್ಯುಲ್ಮಿನೇಟಸ್
ಬಲವಾದ ಉದ್ದ ಕೊಕ್ಕಿನ ಪಾರಿವಾಳ ಗಾತ್ರದ ಹಕ್ಕಿ ಮೈಯ್ಯಲ್ಲ ಹೊಳೆಯುವ ಕಪ್ಪು ಬಣ್ಣ ಕರ್ಕಶವಾಗಿ ಈ ಎಂದು ಕೂಗುತ್ತದೆ. ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸವಿಲ್ಲ, ಒಂಟಿಯಾಗಿ ಇಲ್ಲವೇ ಚಿಕ್ಕ ಗುಂಪುಗಳಲ್ಲಿ ಎಲ್ಲೆಲ್ಲೂ ಆಡ್ಡಾಡುತ್ತವೆ, ಭಾರತ, ಬರ್ಮಾ, ಬಂಗ್ಲಾದೇಶ, ಪಾಕೀಸ್ತಾನ, ಸಿಲೋನ್‌ಗಳಲ್ಲಿ ಇವೆ, ಬಣ್ಣ ವ್ಯತ್ಯಾಸದ ಆಧಾರದ ಮೇಲೆ ನಾಲ್ಕು ಉಪಜಾತಿಗಳನ್ನಾಗಿ ವಿಂಗಡಿಸಿದ್ದಾರೆ. ಇವು ಸಾಧಾರಣವಾಗಿ ಪೇಟೆಗಳಿಗಿಂತ ಗ್ರಾಮಾಂತರಗಳಲ್ಲಿ ಹೆಚ್ಚಿದ್ದುದರಿಂದ ಇವನ್ನು ಜಂಗಲ್ ಕಾಗೆ ಎಂದು ಕರೆಯಲಾಗುತ್ತಿತ್ತು, ಆದರೆ ವೈರಿಗಳು ತುಂಬ ಕಡಿಮೆ ಇರುವ ಈ ಹಕ್ಕಿಯ ಸಂತಾನಾಭಿವೃದ್ಧಿ ತುಂಬಾ ಹೆಚ್ಚಿರುವುದರಿಂದ ಈಗ ಇವು ಹಳ್ಳಿ, ಪಟ್ಟಣ, ಕಾಡು, ಬಯಲು ಎಲ್ಲೆಲ್ಲೂ ಕಾಣುತ್ತವೆ. ಕಾಡಿನಲ್ಲಿ ಸತ್ತ ಪ್ರಾಣಿಗಳ ಬಳಿ ಹದ್ದು ನರಿ ಮೊದಲಾದವುಗಳೊಡನೆ ಮುತ್ತಿಕೊಂಡು ತಿನ್ನುತ್ತವೆ. ಆದರೆ ಇವು ಮಾಂಸಾಹಾರವನ್ನಷ್ಟೇ ಅಲ್ಲದೆ ಎಲ್ಲವನ್ನೂ ತಿನ್ನುವ ಸರ್ವಭಕ್ಷಕಗಳು, ಹಣ್ಣು, ಕೀಟಗಳು, ಚಿಕ್ಕ ಪ್ರಾಣಿಗಳು, ಇತರ ಹಕ್ಕಿಗಳ ಮೊಟ್ಟೆ ಮರಿಗಳು, ಆಹಾರ ಧಾನ್ಯ ಎಲ್ಲವನ್ನೂ ತಿನ್ನುತ್ತವೆ. ಹಿಂದುಳಿದ ದೇಶಗಳಲ್ಲಿ ಇವುಗಳಿಂದ ಜಾಢಮಾಲಿ ಕೆಲಸವೂ ಸ್ವಲ್ಪಮಟ್ಟಿಗೆ ಆಗುತ್ತಿದೆ. ಇವುಗಳ ಮಿತಿಮೀರಿದ ಸಂಖ್ಯೆಯಿಂದ ಮಿಕ್ಕ ಚಿಕ್ಕ ಹಕ್ಕಿಗಳಿಗೆ ಅಪಾಯ ಒರಗಿದೆ, ಮಾರ್ಜಿಯಿಂದ ಮೇವರೆಗೆ ಕಡ್ಡಿ, ಕಸ ಚಿಂದಿ ಇತ್ಯಾದಿಗಳಿಂದ ಎತ್ತರದ ಮರದ ಕವಲುಗಳಲ್ಲಿ ಗೂಡು ಮಾಡುತ್ತದೆ.