ಕಾಟುಕುಕ್ಕೆ ಸುಬ್ರಾಯ ದೇವಸ್ಥಾನ
ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ ಕೇರಳ ದೇವಸ್ವಂ ಬೋರ್ಡ್ಆ ಡಳಿತಕ್ಕೊಳಪಟ್ಟ ದೇವಾಲಯ.[೧] ಕಾಸರಗೋಡು ತಾಲ್ಲೂಕಿನ ಶೇಣಿ [೨], ಕಾಟುಕುಕ್ಕೆ, ಎಣ್ಮಕಜೆ ಎಂಬ ನಾಲ್ಕು ಗ್ರಾಮಗಳ ಮುಖ್ಯ ದೇವಸ್ಥಾನವಾಗಿದೆ.
ಇತಿಹಾಸ
ಬದಲಾಯಿಸಿಈ ದೇವಸ್ಥಾನಕ್ಕೆ ಸಾವಿರ ವರ್ಷಗಳ ಇತಿಹಾಸವಿದ್ದು, ತಪಸ್ವಿ ಬ್ರಹ್ಮಚಾರಿಗೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡುವ ಹಂಬಲ ಉಂಟಾಗಿ ಆತ ಕುಕ್ಕೆ ಕ್ಷೇತ್ರಕ್ಕೆ ಹೋಗಿ ತನಗೆ ಆರಾಧನೆಗಾಗಿ ಸ್ವಾಮಿಯ ಮೂರ್ತಿಯನ್ನು ಕೊಡಬೇಕೆಂದು ವಿನಂತಿಸಿದಾಗ, ಆತನ ಬೇಡಿಕೆಗಾಗಿ ಲೋಹ ನಿರ್ಮಿತವಾದ ನಾಗರಹೆಡೆಯ ವಿಗ್ರಹ ಆಕರ್ಷಿಸಿ ಕೊಟ್ಟರೂ ಅವನು ವಿಗ್ರಹದೊಂದಿಗೆ ಬರುವಾಗ ಸಜೀವ ನಾಗರಹಾವನ್ನು ಆಕರ್ಷಿಸಿ ಇಲ್ಲಿಗೆ ತಂದು ವಿಧಿವತ್ತಾಗಿ ಆರಾಧಿಸಿದ ಕಾರಣ ಕುಕ್ಕೆಗೆ ಪ್ರತಿಯಾಗಿ 'ಸಾಟುಕುಕ್ಕೆ' ಸೃಷ್ಟಿಯಾಗಿ ನಂತರ 'ಚಾಟುಕುಕ್ಕೆ' 'ಕಾಟುಕುಕ್ಕೆ' ಇತ್ಯಾದಿಯಾಗಿ ನಾಮಾಂತರವಾಯಿತು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೇಳಿದ ಹರಕೆಯನ್ನು ಈ ದೇವಸ್ಥಾನದಲ್ಲಿ ಸಲ್ಲಿಸಬಹುದು. ಆದರೆ ಇಲ್ಲಿಗೆ ಹೇಳಲಾದ ಹರಕೆ ಕುಕ್ಕೆಯಲ್ಲಿ ಸಲ್ಲಿಸಲಾಗುವುದಿಲ್ಲ ಎಂಬ ಸ್ಥಳ ಮಹಿಮೆಯಿದೆ. ಇಷ್ಟಾರ್ಥ ಸಿದ್ಧಿಗಾಗಿ ನಾಗತಂಬಿಲ, ಸರ್ಪಸಂಸ್ಕಾರ, ಕಾಳಸರ್ಪ ಶಾಂತಿ ಹಾಗೂ ಇತರೆ ಸೇವೆಗಳನ್ನು ನಡೆಸಲಾಗುವುದು.
ದೇವಸ್ಥಾನದ ಉತ್ಸವಗಳು
ಬದಲಾಯಿಸಿಪ್ರತಿವರ್ಷ ಕಾರ್ತಿಕ ಮಾಸದ ಅಮಾವಾಸ್ಯೆಯಂದು ಲಕ್ಷಷದೀಪೋತ್ಸವವಿದ್ದು ಮಾರ್ಗಶಿರ ಮಾಸ ತದಿಗೆಗೆ ಆರಂಭಗೊಂಡು ಐದನೇ ದಿನದ ಆರಾಟು ಉತ್ಸವದೊಂದಿಗೆ ಜಾತ್ರೆ ಮುಕ್ತಾಯಗೊಳ್ಳುತ್ತದೆ. ಚಂಪಾಷಷ್ಠಿಗೆ ಆಯನ ಉತ್ಸವವಿದ್ದು ತುಲಾಭಾರ ಸೇವೆಯೂ ನಡೆಯುತ್ತದೆ.[೩] ಇದಲ್ಲದೇ ಪ್ರತೀವರ್ಷ ವಾರ್ಷಿಕ ಪ್ರತಿಷ್ಠಾ ದಿನದಂಗವಾಗಿ ಒಂದು ದಿನದ ಜಾತ್ರೆ ಹಾಗೂ ಕಿರುಷಷ್ಠಿ ಉತ್ಸವದ ಜೊತೆಗೆ ಧನುಮಾಸದ ಒಂದು ತಿಂಗಳು ಪ್ರಾತಃಕಾಲದ ವಿಶೇಷ ಧನುಪೂಜೆಯಿದೆ.
ಮಾರ್ಗಸೂಚಿ
ಬದಲಾಯಿಸಿದೇವಸ್ಥಾನವು ಮಂಗಳೂರಿನಿಂದ ೬೦ ಕಿಲೋಮೀಟರ್, ಕಾಸರಗೋಡಿನಿಂದ ಪುತ್ತೂರು ದಾರಿಯಾಗಿ ೩೫ ಕಿಲೋಮೀಟರ್ ದೂರವಿದ್ದು ಪೆರ್ಲ ಪೇಟೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರವಿದೆ.