ಕಾಜಪುಟೆ ಮರ
Melaleuca leucadendra Cajeput Tree | |
---|---|
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | M. leucadendra
|
Binomial name | |
Melaleuca leucadendra | |
Synonyms | |
Melaleuca leucadendron |
ಕಾಜಪುಟೆ ಮರ ಮಲಯ,ಆಸ್ಟ್ರೇಲಿಯ ಮತ್ತು ಕಾಂಬೋಡಿಯಗಳು ತವರೂರಾದ ನಿತ್ಯಹರಿದ್ವರ್ಣದ ಮರ.
ವೈಜ್ಞಾನಿಕ ಹೆಸರು
ಬದಲಾಯಿಸಿಮಿರ್ಟೇಸಿ ಕುಟುಂಬಕ್ಕೆ ಸೇರಿದೆ. ಮೆಲಲ್ಯೂಕ ಲ್ಯೂಕೊಡೆಂಡ್ರಾನ್ ಎಂಬುದು ಸಸ್ಯಶಾಸ್ತ್ರೀಯ ಹೆಸರು.
ಲಕ್ಷಣಗಳು
ಬದಲಾಯಿಸಿನಿತ್ಯ ಹರಿದ್ವರ್ಣದ ಮರ.ಮೃದುವಾದ ತೊಗಟೆ ಇದೆ.ತೊಗಟೆಯನ್ನು ಸುಲಿದರೆ ಕಾಗದಂತೆ ಕಿತ್ತು ಬರುತ್ತದೆ.ಎಲೆಗಳಲ್ಲಿ ಎಣ್ಣೆ ಗ್ರಂಥಿಗಳಿವೆ.
ಭೌಗೋಳಿಕ ಹಂಚಿಕೆ
ಬದಲಾಯಿಸಿಉತ್ತರ-ಪಶ್ವಿಮ ಆಸ್ಟ್ರೇಲಿಯ,ಸೊಲೊಮನ್ ದ್ವೀಪಗಳು ,ಕಾಂಬೋಡಿಯ ಮತ್ತು ನ್ಯೂಗಿನಿಯಗಳಲ್ಲಿ ಸ್ವಾಭಾವಿಕ ಸಸ್ಯ.ಹಲವು ಕಡೆಗಳಲ್ಲಿ ದಾರಿಬದಿ ಸಸ್ಯವಾಗಿ, ಉದ್ಯಾನಗಳಲ್ಲಿ ಅಲಂಕಾರಕ್ಕೆ ಬೆಳೆಸುತ್ತಾರೆ.
ಉಪಯೋಗಗಳು
ಬದಲಾಯಿಸಿಇದರ ತೊಗಟೆಯನ್ನು ಮೀನಿನ ಬಲೆಮಾಡಲು,ಚಾಪೆ ಮಾಡಲು ಬಳಸುತ್ತಾರೆ.ಮರ ರೈಲ್ವೇ ಸ್ಲೀಪರ್‍ಗಳಾಗಿ ಬಳಕೆಯಲ್ಲಿದೆ.
ಔಷಧೀಯ ಗುಣಗಳು
ಬದಲಾಯಿಸಿಇದರ ಎಲೆಯಿಂದ ಪಡೆಯುವ ಎಣ್ಣೆಯಲ್ಲಿ ಹೇರಳವಾದ ಔಷಧೀಯ ಗುಣಗಳಿವೆ.ವ್ರಣಗಳ, ಸುಟ್ಟಗಾಯಗಳ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿWikimedia Commons has media related to Melaleuca leucadendra.